Parliament: ʼಪ್ಯಾಲೆಸ್ತೀನ್‌ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದ ಕಾಂಗ್ರೆಸ್‌ ವಕ್ತಾರೆ, ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬಿಜೆಪಿ

Team Udayavani, Dec 16, 2024, 6:59 PM IST

Priyank-Gandhi

ಹೊಸದಿಲ್ಲಿ: ವಯನಾಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ‘ಪ್ಯಾಲೆಸ್ತೀನ್’ ಎಂದು ಬರೆದ ಬ್ಯಾಗ್‌ನೊಂದಿಗೆ ಸೋಮವಾರ ಸಂಸತ್ತಿಗೆ ಆಗಮಿಸಿರುವುದು ಚರ್ಚೆಗೆ ಕಾರಣವಾಗಿದೆ.

ಪ್ರಿಯಾಂಕಾ ಹಾಕಿದ್ದ ಬ್ಯಾಗ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ ಪ್ಯಾಲೆಸ್ತೀನ್‌  ಎಂದು ಬರೆದಿರುವ ಜೊತೆಗೆ ಪ್ಯಾಲೆಸ್ತೀನಿಯರೊಂದಿಗಿನ ಒಗ್ಗಟ್ಟಿನ ಸಂಕೇತಗಳೂ ಇದ್ದವು. ಇದರಲ್ಲಿ ಕಲ್ಲಂಗಡಿ ಹಣ್ಣು ಕೂಡ ಇತ್ತು. ಇದು ಈ ಪ್ರದೇಶದಲ್ಲಿ ಪ್ರತಿರೋಧದ ಸುದೀರ್ಘ ಸ್ವೀಕೃತ ಸಂಕೇತ. ಜೊತೆಗೆ ಐಕಮತ್ಯ ಸಂಕೇತಿಸುವ ಲಾಂಛನಗಳು ಹೊಂದಿದ್ದವು. ಪ್ರಿಯಾಂಕಾ ಪ್ಯಾಲೆಸ್ತೀನಿಯನ್  ದೀರ್ಘಾವಧಿಯ ಪ್ರತಿಪಾದಕರಾಗಿದ್ದು,  ಗಾಜಾದಲ್ಲಿನ ಸಂಘರ್ಷಕ್ಕೆ ತಮ್ಮ ವಿರೋಧವನ್ನೂ ಬಲವಾಗಿ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕಾ ವಾದ್ರಾ ಸಂಸತ್ತಿನ ಆವರಣದಲ್ಲಿ ಬ್ಯಾಗ್ ಹಾಕಿ ಪ್ರವೇಶಿಸುವ ಫೋಟೋವನ್ನು ಕಾಂಗ್ರೆಸ್ ವಕ್ತಾರೆ ಡಾ.ಶಾಮಾ ಮೊಹಮ್ಮದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಬಿಜೆಪಿ ಸಂಸದ ಸಂಬಿತ್ ಪಾತ್ರ ಕೂಡ ತೀಕ್ಷ್ಣ  ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ಸಂಸದ ಸಂಬಿತ್ ಪಾತ್ರಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಗಾಂಧಿ ಕುಟುಂಬ ಯಾವಾಗಲೂ ತುಷ್ಟೀಕರಣದ ಬ್ಯಾಗ್ ಹಿಡಿದುಕೊಂಡೇ ಓಡಾಡುತ್ತಿದೆ. ಈ ತುಷ್ಟೀಕರಣದ ಬ್ಯಾಗ್‌ನಿಂದಾಗಿಯೇ ಚುನಾವಣೆಯಲ್ಲಿ ಸೋಲುತ್ತಿದೆ’ ಎಂದರು.


ಪ್ಯಾಲೆಸ್ತೀನ್ ರಾಯಭಾರಿ ಭೇಟಿಯಾಗಿದ್ದ ಪ್ರಿಯಾಂಕಾ: 
ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ ರಾಯಭಾರ ಕಚೇರಿಯ ಉಸ್ತುವಾರಿ ಅಬೆದ್ ಎಲ್ರಾಜೆಗ್ ಅಬು ಜಾಜರ್‌ರನ್ನು ಭೇಟಿಯಾಗಿದ್ದರು. ಈ ವೇಳೆ ಅವರು ಕಪ್ಪು ಮತ್ತು ಬಿಳಿ ಬಣ್ಣದ ಕೆಫಿಯೇಹ್ (ಸಾಂಪ್ರದಾಯಿಕ ಪ್ಯಾಲೆಸ್ತೀನಿಯನ್ ಶಾಲು) ಧರಿಸಿದ್ದರು. ವಯನಾಡು ಕ್ಷೇತ್ರದಿಂದ ಗೆದ್ದಿದ್ದಕ್ಕಾಗಿ ಪ್ರಿಯಾಂಕಾ ಗಾಂಧಿಯವರನ್ನು ಅಭಿನಂದಿಸಲು ಅಬು ಜಾಜರ್‌ ಬಂದಿದ್ದರು. ಈ ವೇಳೆ ಚರ್ಚೆಯ ಸಮಯದಲ್ಲಿ ಜಾಜರ್,  ಗಾಜಾದಲ್ಲಿ ಯುದ್ಧ ವಿರಾಮಕ್ಕೆ ಭಾರತ ಒತ್ತಾಯಿಸಬೇಕು ಮತ್ತು ಗಾಜಾ ಪಟ್ಟಿಯ ಪುನರ್‌ ನಿರ್ಮಾಣದಲ್ಲಿ ನೆರವು ನೀಡಬೇಕು ಎಂದರು.

ಪ್ರಿಯಾಂಕಾ ಗಾಂಧಿ ಕೂಡ ಗಾಜಾ ಪಟ್ಟಿಯ ಮೇಲಿನ ಇಸ್ರೇಲ್ ದಾಳಿಯನ್ನೂ ಟೀಕಿಸಿ ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಹೇಳಿದ್ದಾರೆ. ಇದರೊಂದಿಗೆ ಗಾಜಾದಲ್ಲಿ ಶಾಂತಿ ಸ್ಥಾಪಿಸಲು ಮೋದಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.

ಟಾಪ್ ನ್ಯೂಸ್

Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ

Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ

1-hck

Hockey; ವನಿತಾ ಜೂನಿಯರ್‌ ವಿಶ್ವಕಪ್‌ : ಭಾರತ ಆಯ್ಕೆ

ಇದು 0 ಪರ್ಸೆಂಟ್‌ ಅಭಿವೃದ್ಧಿ,100 ಪರ್ಸೆಂಟ್‌ ಭ್ರಷ್ಟಾಚಾರದ ಸರಕಾರ: ಸುನಿಲ್‌

ಇದು 0 ಪರ್ಸೆಂಟ್‌ ಅಭಿವೃದ್ಧಿ,100 ಪರ್ಸೆಂಟ್‌ ಭ್ರಷ್ಟಾಚಾರದ ಸರಕಾರ: ಸುನಿಲ್‌

ಠೇವಣಿದಾರರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ

ಠೇವಣಿದಾರರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ

Belagavi, ಮಂಡ್ಯ, ಶಿವಮೊಗ್ಗ ಸೇರಿ 6 ಕಡೆ ಕ್ಯಾನ್ಸರ್‌ ಆಸ್ಪತ್ರೆ: ಶರಣಪ್ರಕಾಶ್‌ ಪಾಟೀಲ್‌

Belagavi, ಮಂಡ್ಯ, ಶಿವಮೊಗ್ಗ ಸೇರಿ 6 ಕಡೆ ಕ್ಯಾನ್ಸರ್‌ ಆಸ್ಪತ್ರೆ: ಶರಣಪ್ರಕಾಶ್‌ ಪಾಟೀಲ್‌

Council session ಲಾಠಿ ಜಾರ್ಜ್‌: ಮೇಲ್ಮನೆಯಲ್ಲಿ ಪ್ರತಿಪಕ್ಷ ಸಭಾತ್ಯಾಗ

Council session ಲಾಠಿ ಜಾರ್ಜ್‌: ಮೇಲ್ಮನೆಯಲ್ಲಿ ಪ್ರತಿಪಕ್ಷ ಸಭಾತ್ಯಾಗ

Online Gaming: ಪ್ರತ್ಯೇಕ ಚರ್ಚೆಗೆ ಪಕ್ಷಾತೀತವಾಗಿ ಒತ್ತಾಯ

Online Gaming: ಪ್ರತ್ಯೇಕ ಚರ್ಚೆಗೆ ಪಕ್ಷಾತೀತವಾಗಿ ಒತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sonia

Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ

Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!

Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!

highcourt

Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ

Anura Kumara Dissanayake

Sri Lanka; ಭಾರತದ ವಿರುದ್ದ ನಮ್ಮ ಭೂಮಿಯನ್ನು ಬಳಸಲು ಬಿಡೆವು: ಲಂಕಾ ಅಧ್ಯಕ್ಷ ಡಿಸಾನಾಯಕೆ

Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?

Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-ewqewq

T20; ವೆಸ್ಟ್‌ ಇಂಡೀಸ್‌ ಎದುರು ಬಾಂಗ್ಲಾದೇಶ ಗೆಲುವಿನ ಆರಂಭ

1-arg

T20I;ಡಬಲ್‌ ಹ್ಯಾಟ್ರಿಕ್‌ ಸಾಧನೆ ಮೆರೆದ ಆರ್ಜೆಂಟೀನಾದ ಫೆನೆಲ್‌

Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ

Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ

1-gukesh

Gukesh Dommaraju; ಚದುರಂಗ ಚಾಂಪಿಯನ್‌ ಗೆ ತವರೂರು ಚೆನ್ನೈಯಲ್ಲಿ ಭವ್ಯ ಸ್ವಾಗತ

1-mahe

MAHE;ಅ.ಭಾ.ಅಂತರ್‌ ವಿ.ವಿ. ವನಿತಾ ಟೆನಿಸ್‌: ಒಸ್ಮಾನಿಯಾ ವಿ.ವಿ. ಚಾಂಪಿಯನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.