Madikeri: ಸಹೋದರರ ಕಲಹ ಕೊಲೆಯಲ್ಲಿ ಅಂತ್ಯ – ಆರೋಪಿ ಪರಾರಿ
Team Udayavani, Dec 16, 2024, 7:00 PM IST
ಮಡಿಕೇರಿ: ಸಹೋದರರ ನಡುವೆ ಕ್ಷುಲಕ ವಿಚಾರಕ್ಕೆ ನಡೆದ ಕಲಹ ತಮ್ಮನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಣಚಲು ಗ್ರಾಮದ ಬಳಿ ಸೋಮವಾರ (ಡಿ.16 ರಂದು) ನಡೆದಿದೆ.
ಸ್ಥಳೀಯ ನಿವಾಸಿ ಧರ್ಮ ಅಪ್ಪಣ್ಣ(53) ಮೃತಪಟ್ಟ ವ್ಯಕ್ತಿಯಾಗಿದ್ದು, ಇವರ ಅಣ್ಣ ಪ್ರತು ಮಾಚಯ್ಯ (55) ಗುಂಡು ಹೊಡೆದಿರುವುದಾಗಿ ಆರೋಪಿಸಲಾಗಿದೆ. ಆರೋಪಿ ಕೋವಿ ಸಹಿತ ತಲೆ ಮರೆಸಿಕೊಂಡಿದ್ದಾನೆ.
ಸೋಮವಾರ ಬೆಳಗ್ಗೆ 9.30ರ ಸಮಯದಲ್ಲಿ ಸಹೋದರರ ನಡುವೆ ಕ್ಷುಲಕ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಧರ್ಮ ಅಪ್ಪಣ್ಣ ಅವರ ಮೇಲೆ ಪ್ರತು ಮಾಚಯ್ಯ ಹಲ್ಲೆ ನಡೆಸಿದ್ದಾನೆ. ಬಳಿಕ ಒಂಟಿ ನಳಿಗೆ ಕೋವಿಯಿಂದ ಗುಂಡು ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರೊಬೇಷನರಿ ಎಸ್.ಪಿ ಬೆನಕ ಪ್ರಸಾದ್ ಮತ್ತು ಗ್ರಾಮಾಂತರ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು. ಕೊಲೆ ಪ್ರಕರಣದ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣದ ಆರೋಪಿಯ ಸೆರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…
T20; ವೆಸ್ಟ್ ಇಂಡೀಸ್ ಎದುರು ಬಾಂಗ್ಲಾದೇಶ ಗೆಲುವಿನ ಆರಂಭ
T20I;ಡಬಲ್ ಹ್ಯಾಟ್ರಿಕ್ ಸಾಧನೆ ಮೆರೆದ ಆರ್ಜೆಂಟೀನಾದ ಫೆನೆಲ್
Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ
Gukesh Dommaraju; ಚದುರಂಗ ಚಾಂಪಿಯನ್ ಗೆ ತವರೂರು ಚೆನ್ನೈಯಲ್ಲಿ ಭವ್ಯ ಸ್ವಾಗತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.