Karkala: ಹೋಂ ನರ್ಸ್ 9 ಲಕ್ಷ ರೂ. ವಂಚನೆಗೈದ ಪ್ರಕರಣ: ಮುಂಬಯಿಯಲ್ಲಿ ಇಬ್ಬರು ಆರೋಪಿಗಳ ಸೆರೆ
Team Udayavani, Dec 17, 2024, 6:35 AM IST
ಕಾರ್ಕಳ: ಹೋಂ ನರ್ಸ್ ಆಗಿ ಮನೆ ಸೇರಿಕೊಂಡು ಮನೆ ಯಜಮಾನರ ಗೂಗಲ್ ಪೇ ಪಿನ್ ಕದ್ದು ನೋಡಿ 9 ಲಕ್ಷ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಡಿ. 14ರಂದು ಮುಂಬಯಿ ದಹಿಸರ್‌ನಲ್ಲಿ ಬಂಧಿಸಿದ್ದಾರೆ.
ಕುಕ್ಕುಂದೂರಿನ ಕುಪ್ಪಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (28) ಮತ್ತು ತೆಳ್ಳಾರು ನಿವಾಸಿ ರತ್ನಾಕರ್ (50) ಬಂಧಿತರು. ಕಸಬಾ ಗ್ರಾಮದ ಶಶಿಧರ್ (75) ಅವರ ಕೋರಿಕೆಯಂತೆ 2ನೇ ಆರೋಪಿ ಅಲೈಟ್‌ಕೇರ್ ಎಂಬ ಸಂಸ್ಥೆಯ ರತ್ನಾಕರ್‌ನಿಂದ 1ನೇ ಆರೋಪಿ ಕಾರ್ತಿಕ್ ಶೆಟ್ಟಿ ಹೋಂ ನರ್ಸ್ ಆಗಿ ಮನೆಗೆ ಕೆಲಸಕ್ಕೆ ಬಂದಿದ್ದ.
ಈ ವೇಳೆ ಶಶಿಧರ್ ಅವರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಅವರು ಬೇರೆಯವರಿಗೆ ಹಣ ವರ್ಗಾವಣೆ ಮಾಡುವ ವೇಳೆ ಗೂಗಲ್ ಪೇ ಪಿನ್ ನಂಬರ್ ಗಮನಿಸಿದ್ದ. ಅನಂತರ ಹಂತಹಂತವಾಗಿ ಲಕ್ಷಾಂತರ ರೂ. ಹಣವನ್ನು ಭಾರತ್ ಬ್ಯಾಂಕ್ ಕೋ-ಅಪರೇಟಿವ್ ಸೊಸೈಟಿ ಖಾತೆಗೆ ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿಕೊಂಡು ನಂಬಿಕೆ ದ್ರೋಹ ಮಾಡಿದ್ದರು ಎಂದು ದೂರಲಾಗಿತ್ತು.
ತನಿಖೆ ಕೈಗೆತ್ತಿಕೊಂಡ ಕಾರ್ಕಳ ನಗರ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆ ಬಲೆ ಬೀಸಿದ್ದರು. ಆರೋಪಿಗಳು ಮುಂಬಯಿಯಲ್ಲಿ ತಲೆಮರೆಸಿಕೊಂಡ ಮಾಹಿತಿ ಪಡೆದು ಅಲ್ಲಿಗೆ ತೆರಳಿ ಇಬ್ಬರು ಆರೋಪಿಗಳನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಯಕ್ಷಗಾನದಲ್ಲಿ ಭಗವದ್ಗೀತೆ ಪ್ರಯೋಗ: ಡಾ| ಪ್ರಭಾಕರ್ ಜೋಶಿ
ಇ-ಖಾತಾ ತಿದ್ದುಪಡಿಯೇ ಭಾರೀ ಸವಾಲು; ತಿದ್ದುಪಡಿ ಅವಕಾಶ ಶೇ.3ರಿಂದ ಶೇ.15ಕ್ಕೆ ಏರಿಕೆಗೆ ಆಗ್ರಹ
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Highway: ಅಂಬಲಪಾಡಿ ಅಂಡರ್‌ಪಾಸ್: ಗೊಂದಲ ನಿವಾರಣೆಗೆ ರಮೇಶ್ ಕಾಂಚನ್ ಆಗ್ರಹ
Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…
MUST WATCH
ಹೊಸ ಸೇರ್ಪಡೆ
Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ
ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ
Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.