Constitution; ರಾಜ್ಯಸಭೆಯಲ್ಲಿ ಖರ್ಗೆ-ನಿರ್ಮಲಾ ಜಟಾಪಟಿ
ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಿದ್ದೇ ಕಾಂಗ್ರೆಸ್, ಕುರ್ಚಿಗಾಗಿ ಸಂವಿಧಾನ ಬದಲು: ಸಚಿವೆ
Team Udayavani, Dec 17, 2024, 12:38 AM IST
ಹೊಸದಿಲ್ಲಿ: ಭಾರತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಸರಾಗಿರುವ ರಾಷ್ಟ್ರ. ಆದರೆ, ಭಾರತದಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡ ಮೊದಲ ವರ್ಷದಲ್ಲೇ ಸರಕಾರ ಭಾರತೀಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಹತ್ತಿಕ್ಕಲು ಸಂವಿ ಧಾನಕ್ಕೆ (1951ರ) ತಿದ್ದುಪಡಿ ತಂದಿತು. ನಮ್ಮ ಸಂವಿಧಾನಕ್ಕೆ ಕಾಂಗ್ರೆಸ್ ತಂದ ಯಾವ ತಿದ್ದುಪಡಿಯೂ ಉತ್ತಮ ಆರ್ಥಿಕತೆ, ಸಾಮಾಜಿಕ ಕಳಕಳಿ, ಒಳಿತು ಅಥವಾ ಸಾಂವಿಧಾನಿಕ ಸ್ಫೂರ್ತಿಗಾಗಿ ಮಾಡಿದ್ದಲ್ಲ, ಬರೀ ಗಾಂಧಿ ಕುಟುಂಬಕ್ಕೆ ಪೂರಕವಾಗಿ, ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ಮಾಡಿದ್ದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.
ಇಂದಿರಾ ಗಾಂಧಿ ಚುನಾವಣ ಅಕ್ರಮ ಪ್ರಕರಣದಲ್ಲಿ ತೀರ್ಪು ಪ್ರಕಟವಾಗುವುದನ್ನು ತಡೆಯಲು 1975ರಲ್ಲಿ ತಂದ ತಿದ್ದುಪಡಿ, ಶಾ ಬಾನೋ ಪ್ರಕರಣ ಸಂಬಂಧ 1986ರಲ್ಲಿ ತಂದ 42ನೇ ತಿದ್ದುಪಡಿಯೂ ಕಾಂಗ್ರೆಸ್ ಬರೀ ಸ್ವಾರ್ಥಕ್ಕೆ ಮಾಡಿದೆ. ಆ ಸರಕಾರದ ಯಾವ ಆರ್ಥಿಕ ನೀತಿಯೂ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲಿಲ್ಲ ಎಂದೂ ಟೀಕಿಸಿದ್ದಾರೆ. ಜತೆಗೆ 2008ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರಗೊಂಡರೂ ಕಾಂಗ್ರೆಸ್ ಲೋಕಸಭೆಯಲ್ಲಿ ಅಂಗೀಕರಿಸಲಿಲ್ಲ. ಅದು ಮಹಿಳಾ ವಿರೋಧಿ ಪಕ್ಷ ಎಂದೂ ಸಚಿವೆ ಆರೋಪಿಸಿದ್ದಾರೆ. ಜತೆಗೆ ಸಂವಿಧಾನ ಅಳವಡಿಕೆಗೂ ಮುನ್ನವೂ ಕಾಂಗ್ರೆಸ್ ಜನರ ಅಭಿವ್ಯಕ್ತಿಯನ್ನು ಹತ್ತಿಕ್ಕಿತ್ತು. ಬಾಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಹಾಡಿ ಹೊಗಳುತ್ತಿದ್ದ ನೆಹರೂ ಅದನ್ನೇ ಮೊಟಕುಗೊಳಿಸಿದ್ದರು. ಇಂದಿರಾ ಕೂಡ ಅದನ್ನೇ ಅನುರಿಸಿದ್ದರು ಎಂದಿದ್ದಾರೆ.
ನೆಹರೂ ವಿರುದ್ಧ ಕವನ ಓದಿದರೂ ಸೆರೆ: ನಿರ್ಮಲಾ
ಮಿಲ್ ಕಾರ್ಮಿಕರ ಸಭೆಯೊಂದರಲ್ಲಿ ಖ್ಯಾತ ಸಾಹಿತಿ ಮಜ್ದೂಹ್ ಸುಲ್ತಾನ್‌ಪುರಿ ಅವರು ನೆಹರೂ ಅವರ ವಿರುದ್ಧ ಕವನವೊಂದನ್ನು ವಾಚನ ಮಾಡಿ ದ್ದರು. ಇದನ್ನು ಸಹಿಸದೇ ನೆಹರೂ ಬಳಿ ಅವರನ್ನು ಕ್ಷಮೆ ಯಾಚಿಸುವಂತೆ ಒತ್ತಾಯಿಸಲಾಗಿತ್ತು. ಒಪ್ಪದ್ದಕ್ಕೆ ನಟ ಬಾಲರಾಜ್ ಸಾಹಿ° ಜತೆಗೆ ಅವರನ್ನು 1949ರಲ್ಲಿ ಜೈಲಿಗಟ್ಟಲಾಗಿತ್ತು. 1975ರಲ್ಲಿ ಮೈಕಲ್ ಎಡ್ವರ್ಡ್ ಅವರ “ನೆಹರೂ ಪೊಲಿಟಕಲ್ ಬಯಾಗ್ರಫಿ’ ಪುಸ್ತಕ ಹಾಗೂ ಇಂದಿರಾ ಮತ್ತು ಅವರ ಮಗನನ್ನು ಪ್ರಶ್ನಿಸಿದ್ದಕ್ಕೆ “ಕಿಸ್ಸಾ ಕುರ್ಸಿಕಾ’ ಸಿನೆಮಾವನ್ನೇ ಕಾಂಗ್ರೆಸ್ ನಿಷೇಧಿಸಿತ್ತೆಂದು ಸಚಿವೆ ದೂರಿದರು.
ಸಂವಿಧಾನದ ಪ್ರತಿಯನ್ನೇ ಸುಟ್ಟವರಿಂದ ದೇಶಭಕ್ತಿಯ ಪಾಠ ಬೇಕಿಲ್ಲ: ಖರ್ಗೆ ಕಿಡಿ
ಹೊಸದಿಲ್ಲಿ: “ಸಂವಿಧಾನವನ್ನು ಅಂಗೀಕರಿಸಿದ ದಿನ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನೆಹರೂ, ಅಂಬೇಡ್ಕರ್, ಗಾಂಧೀಜಿ ಅವರ ಪ್ರತಿಕೃತಿಗಳನ್ನು ಆರ್‌ಎಸ್‌ಎಸ್ ಹಾಗೂ ಜನಸಂಘದವರು ಸುಟ್ಟು ಹಾಕಿದ್ದರು. ಯಾರು ಸಂವಿಧಾನವನ್ನು, ರಾಷ್ಟ್ರ ಧ್ವಜ ಹಾಗೂ ಅಶೋಕ ಚಕ್ರವನ್ನು ವಿರೋಧಿಸಿದ್ದರೋ ಅಂಥವರಿಂದ ದೇಶ ಭಕ್ತಿಯ ಪಾಠ ಕಲಿಯುವ ಅಗತ್ಯ ನಮಗಿಲ್ಲ’. ನಿರ್ಮಲಾ ಸೀತಾರಾಮನ್‌ಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದು ಹೀಗೆ!
ರಾಜ್ಯಸಭೆಯಲ್ಲಿ ಸಚಿವೆ ವಿರುದ್ಧ ಮಾತಿನ ಚಾಟಿ ಬೀಸಿದ ಖರ್ಗೆ, ನನಗೂ ಓದಲು ಬರುತ್ತದೆ. ನಾನು ಮುನ್ಸಿಪಾಲಿಟಿ ಶಾಲೆಯಲ್ಲಿ ಓದಿದ್ದೇನೆ. ಆದರೆ ಆಕೆ ಜೆಎನ್‌ಯುನಲ್ಲಿ ಓದಿದ್ದಾರೆ. ಹಾಗಾಗಿ ಭಾಷೆ ಚೆನ್ನಾಗಿರಬಹುದು ಅಷ್ಟೇ. ಆದರೆ ಮಾಡುವ ಕೆಲಸ ಸರಿ ಇಲ್ಲ ಎಂದು ಲೇವಡಿ ಮಾಡಿದ್ದಾರೆ.
ಅಲ್ಲದೇ, ದೇಶಕ್ಕಾಗಿ ಎಂದಿಗೂ ಹೋರಾಡದವರು ನೆಹರೂ ಬಗ್ಗೆ ಹೇಗೆ ಮಾತನಾಡುತ್ತಾರೆ? ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ನೆಹರೂ ರಾಜ್ಯಗಳಿಗೆ ಬರೆದ ಪತ್ರದ ಕುರಿತು ಮೋದಿ ದೇಶದ ಜನತೆಗೆ ತಪ್ಪು ಮಾಹಿತಿ ನೀಡಿದ್ದಾರೆ, ಅವರು ಕ್ಷಮೆ ಯಾಚಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ. ಜತೆಗೆ “ಮೋದಿ ನಂ 1 ಸುಳ್ಳುಗಾರ’ 15 ಲಕ್ಷ ರೂ. ಜನರ ಖಾತೆಗೆ ಬರುತ್ತದೆ ಎಂದರು, ಏನೂ ಬರಲಿಲ್ಲ ಎಂದೂ ಟೀಕಿಸಿದ್ದಾರೆ. ಜತೆಗೆ ನಾವು ಸ್ತ್ರೀ ವಿರೋಧಿ ಎಂದು ಇವರು ಹೇಳುತ್ತಾರೆ. ಆದರೆ, ಕಾಂಗ್ರೆಸ್ ಭಾರತದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ತಂದುಕೊಟ್ಟಾಗ, ಅದನ್ನು ವಿರೋಧಿಸಿದ್ದೇ ಆರೆಸ್ಸೆಸ್ ಮತ್ತು ಜನಸಂಘ ( ಬಿಜೆಪಿ) ಎಂದಿದ್ದಾರೆ.
ಸರ್ವಾಧಿಕಾರದ ಹಾದಿಯಲ್ಲಿ ಮೋದಿ: ಖರ್ಗೆ
ಧರ್ಮದ ಮೇಲಿನ ಭಕ್ತಿ ಆತ್ಮದ ಮೋಕ್ಷಕ್ಕೆ ಕಾರಣವಾಗಬಹುದು. ಆದರೆ ರಾಜಕೀಯದಲ್ಲಿ ಅಂಥ ಅಂಧಭಕ್ತಿ ವಿನಾಶಕ್ಕೆ ಕಾರಣವಾಗುತ್ತದೆ. ನೀವೆಲ್ಲ ಮೋದಿಯ ಮುಂದೆ ಭಕ್ತಿಯ ಡಮರು ಬಾರಿಸುತ್ತಾ ಅವರನ್ನು ಸರ್ವಾಧಿಕಾರಿ ಮಾರ್ಗಕ್ಕೆ ನೂಕುತ್ತಿದ್ದೀರಿ. ಅವರು ಸರ್ವಾಧಿಕಾರಿಯಾಗಲು ಸಿದ್ಧರಾದರೆ ನೆನಪಿಡಿ, ಪ್ರಜಾಪ್ರಭುತ್ವ ಎಂದಿಗೂ ಸರ್ವಾಧಿಕಾರದ ನೆರಳಿನಲ್ಲಿ ಇರಲು ಸಾಧ್ಯವೇ ಇಲ್ಲ ಎಂದೂ ಖರ್ಗೆ ಹೇಳಿದ್ದಾರೆ. ಜತೆಗೆ ಸಂವಿಧಾನದ ಮೇಲೆ ನಂಬಿಕೆ ಇರುವವರು ಅದರ ಮೌಲ್ಯವನ್ನೂ ಪಾಲಿಸಿ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.