Bangladesh Liberation: ಭಾರತ- ಬಾಂಗ್ಲಾದಲ್ಲಿ ವಿಜಯ ದಿವಸ್
ಸಂಭ್ರಮಾಚರಣೆ: ನಿವೃತ್ತ ಯೋಧರ ಪರಸ್ಪರ ಭೇಟಿ
Team Udayavani, Dec 17, 2024, 12:52 AM IST
ಕೋಲ್ಕತಾ: 1971ರ ಯುದ್ಧದಲ್ಲಿ ಭಾರತದ ಎದುರು ಪಾಕಿಸ್ಥಾನ ಮಂಡಿಯೂರಿ ಬಾಂಗ್ಲಾ ವಿಮೋಚನೆಗೆ ಕಾರಣವಾದ ದಿನದ ಸ್ಮರಣಾರ್ಥ ಡಿ.16ರಂದು ಬಾಂಗ್ಲಾ ಮತ್ತು ಭಾರತ ಎರಡೂ ದೇಶಗಳಲ್ಲಿ 54ನೇ ವಿಜಯ ದಿವಸವನ್ನು ಆಚರಿಸಲಾಗಿದೆ. ಯುದ್ಧದಲ್ಲಿ ಭಾಗಿಯಾಗಿದ್ದ ಉಭಯ ರಾಷ್ಟ್ರಗಳ ನಿವೃತ್ತ ಯೋಧರು ಪರಸ್ಪರ ದೇಶಗಳಿಗೆ ಭೇಟಿ ನೀಡಿ, ಸಂಭ್ರಮದಲ್ಲಿ ಪಾಲ್ಗೊಂಡಿವೆ.
ಬಾಂಗ್ಲಾದ ಮುಕ್ತಿ ಜೋಧಾ ನಿಯೋಗವು ಪಶ್ವಿಮ ಬಂಗಾಲದ ಕೋಲ್ಕತಾದಲ್ಲಿ ನಡೆದ ಸಮಾರಂಭದಲ್ಲಿ ಭಾಗಿಯಾಗಿದೆ. ಢಾಕಾದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ನಿವೃತ್ತ ಯೋಧರ ತಂಡ ಪಾಲ್ಗೊಂಡಿದೆ. ಉಭಯ ರಾಷ್ಟ್ರಗಳ ನಡುವೆ ವೈಮನಸ್ಸಾಗಿರುವಾಗಲೂ ವಿಜಯ್ದಿವಸ್ ಆಚರಣೆ ನಡೆದಿರುವುದು ಮಹತ್ವ ಪಡೆದಿದೆ.
1971ರಲ್ಲಿ ಅದಮ್ಯ ಧೈರ್ಯ ಪ್ರದರ್ಶಿಸಿ ಭಾರತಕ್ಕೆ ವಿಜಯದ ಕಿರೀಟ ತೊಡಿಸಿದ ನಮ್ಮ ವೀರ ಸೇನಾ ನಿಗಳು ಮತ್ತವರ ತ್ಯಾಗವನ್ನು ದೇಶ ಸದಾ ಸ್ಮರಿಸಲಿದೆ.
ದ್ರೌಪದಿ ಮುರ್ಮು, ರಾಷ್ಟ್ರಪತಿ
1971ರಲ್ಲಿ ಬಲಿದಾನ ಗೈದ, ಹೋರಾಡಿದ ಯೋಧರ ಅಸಾಧಾರಣ ಶೌರ್ಯ, ಅಚಲ ಮನೋಭಾವಕ್ಕೆ ವಿಶೇಷ ಸ್ಥಾನವಿದೆ.
ಮೋದಿ, ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Service Variation: ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ
Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ
Kundapura: ಸರಕಾರಿ ಕಾಲೇಜಿನ ಎನ್ವಿಆರ್ ಕೆಮರಾ ಕಳವು
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.