GST: ಹಳೆ ವಾಹನ ಮಾರಾಟಕ್ಕೆ ಶೇ.18ರ ಜಿಎಸ್ಟಿ? ನೀತಿ ಜಾರಿಯಾದರೆ ಹಳೆಯ ವಾಹನ ಖರೀದಿ ದುಬಾರಿ
Team Udayavani, Dec 17, 2024, 7:05 AM IST
ಹೊಸದಿಲ್ಲಿ: ಹಳೆಯ ಹಾಗೂ ಬಳಕೆಯಾಗಿರುವ ವಿದ್ಯುತ್ ಚಾಲಿತ ವಾಹನಗಳು ಮತ್ತು ಸಣ್ಣ ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟದ ಮೇಲೆ ವಿಧಿಸಲಾಗುವ ಜಿಎಸ್ಟಿಯನ್ನು ಶೇ. 12ರಿಂದ ಶೇ. 18ಕ್ಕೆ ಏರಿಸುವ ಬಗ್ಗೆ ಜಿಎಸ್ಟಿ ಫಿಟೆ¾ಂಟ್ ಕಮಿಟಿ ಶಿಫಾರಸು ಸಲ್ಲಿಸಿದೆ. ಇದಕ್ಕೆ ಜಿಎಸ್ಟಿ ಮಂಡಳಿ ಒಪ್ಪಿಗೆ ನೀಡಿದರೆ, ಹಳೆಯ ಮತ್ತು ಬಳಕೆಯಾಗಿರುವ ಇವಿ ವಾಹನಗಳ ಮರು ಮಾರಾಟದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಡಿ. 20-21ರಂದು ರಾಜಸ್ಥಾನದಲ್ಲಿ ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವದ ಬಗ್ಗೆ ಚರ್ಚಿಸಲಾಗುತ್ತದೆ ಎಂದಿವೆ ಮೂಲಗಳು.
ಹಾಲಿ ನಿಯಮಗಳ ಪ್ರಕಾರ ಹಳೆಯ ಮತ್ತು ಬಳಸಲಾದ ವಾಹನಗಳಿಗೆ ಪೂರೈಕೆದಾರರ ಮಾರ್ಜಿನ್ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತಿದೆ. 1,200 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಮತ್ತು 4,000 ಎಂ.ಎಂ.ಗಿಂತ ಉದ್ದದ ಪೆಟ್ರೋಲ್, ಎಲ್ಪಿಜಿ ಅಥವಾ ಸಿಎನ್ಜಿ ಚಾಲಿತ ವಾಹನಗಳಿಗೆ ಶೇ. 18 ತೆರಿಗೆ ವಿಧಿಸಲಾಗುತ್ತಿದೆ.
ಹಾಗೆಯೇ 1,500 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ, 4,000 ಎಂ.ಎಂ.ಗಿಂತ ಉದ್ದದ ಡೀಸೆಲ್ ವಾಹನಗಳಿಗೆ ಮತ್ತು 1,500 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಎಸ್ಯುವಿಗಳಿಗೆ ಶೇ. 18 ತೆರಿಗೆ ವಿಧಿಸಲಾಗುತ್ತಿದೆ. ಉಳಿದ ಎಲ್ಲ ವಾಹನಗಳಿಗೆ (ಇವಿಗಳೂ ಸೇರಿ) ಶೇ. 12 ಜಿಎಸ್ಟಿ ವಿಧಿಸಲಾಗುತ್ತಿದೆ. ಈಗ ಈ ವಾಹನಗಳ ಜಿಎಸ್ಟಿಯನ್ನೂ ಶೇ. 18ರ ಸ್ಲಾéಬ್ಗ ಏರಿಸಲು ಶಿಫಾರಸು ಮಾಡಲಾಗಿದೆ. ತೆರಿಗೆ ಹೆಚ್ಚಳವಾದರೆ ಸೆಕೆಂಡ್ ಹ್ಯಾಂಡ್ ಇವಿಗಳನ್ನು ಖರೀದಿಸಲು ಜನರು ಹಿಂದೇಟು ಹಾಕಬಹುದು ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ
ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
Supreme Court: ಮಸೀದಿ ಆವರಣದೊಳಗೆ ಜೈ ಶ್ರೀರಾಮ್ ಎಂದರೆ ಅಪರಾಧವೇ: ಸುಪ್ರೀಂ
MUST WATCH
ಹೊಸ ಸೇರ್ಪಡೆ
Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ
ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ
Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.