Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ದೇಸಿ ಪ್ರತಿಭೆಗಳಿಗೆ ಹಾಗೂ ಕರಕುಶಲ ಕರ್ಮಿಗಳಿಗೆ ನೀತಾ ಅಂಬಾನಿ ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ
Team Udayavani, Dec 17, 2024, 3:27 PM IST
ಬೆಂಗಳೂರು: ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ, ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ನೀತಾ ಅಂಬಾನಿ (Nita Ambani( ಇತ್ತೀಚೆಗೆ ಉದ್ಯಾನನಗರಿಯ ದುಬಾರಿ ವಸ್ತ್ರಮಳಿಗೆಯೊಂದಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ದಾರಿ ಹೋಕರು ಕುತೂಹಲದಿಂದ ವೀಕ್ಷಿಸಿದ್ದಕ್ಕೆ ಸಾಕ್ಷಿಯಾಗಿತ್ತು.
ನೀತಾ ಅಂಬಾನಿ ಅವರು ಪ್ರಸಿದ್ಧ ಜವಳಿ ಮಳಿಗೆ ಹೌಸ್ ಆಫ್ ಅಂಗಡಿಗೆ ಭೇಟಿ ನೀಡಿದ್ದರು. ಇದು ಸೊಗಸಾದ ಕೈಮಗ್ಗ ಸೀರೆಗಳು, ಪ್ರೀಮಿಯಂ ಜವಳಿ ಹಾಗೂ ಕ್ಯುರೇಟೆಡ್ ಸಾಂಪ್ರದಾಯಿಕ ಉಡುಪುಗಳಿಗೆ ಹೆಸರುವಾಸಿಯಾಗಿದೆ.
ನೀತಾ ಅಂಬಾನಿ ಸಿಲಿಕಾನ್ ನಗರಕ್ಕೆ ಭೇಟಿ ನೀಡಿರುವ ವಿಡಿಯೋವನ್ನು ಫ್ಯಾನ್ ಪೇಜ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಪ್ರಸಿದ್ಧ ಮಳಿಗೆಗೆ ಬಿಗಿ ಭದ್ರತೆಯಲ್ಲಿ ಆಗಮಿಸುತ್ತಿರುವ ದೃಶ್ಯ ಸೆರೆಯಾಗಿದ್ದು, ನೀತಾ ಅವರು ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಕೈಬೀಸುವ ಮೂಲಕ ಅಭಿನಂದನೆ ಸಲ್ಲಿಸಿದ್ದರು.
ಬೆಂಗಳೂರಿನ ಜಯನಗರದಲ್ಲಿರುವ ಅಂಗಡಿ ಹೆರಿಟೇಜ್ (Angadi Heritage)ಗೆ ಭೇಟಿ ನೀಡಿದ್ದ ನೀತಾ ಅಂಬಾನಿ, ನೇವಿ ಬ್ಲೂ ಫ್ಲೋರಲ್ ಕೋ-ಆರ್ಡ್ ಸೆಟ್ ನ ಸೀರೆ ಖರೀದಿಸಿದ್ದರು. ಇದು ವಿಶಿಷ್ಟವಾದ ಹೂವಿನ ಕಸೂತಿಯಿಂದ ಅಲಂಕರಿಸಲ್ಪಟ್ಟಿತ್ತು. ಹೌಸ್ ಆಫ್ ಅಂಗಡಿಗೆ ಅಂಬಾನಿ ಭೇಟಿಯು ಭಾರತೀಯ ಕರಕುಶಲ ಮತ್ತು ಸಾಂಪ್ರದಾಯಿಕ ಕಲಾತ್ಮಕತೆಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಭೇಟಿ ನೀಡಿದ್ದರು. ದೇಸಿ ಪ್ರತಿಭೆಗಳಿಗೆ ಹಾಗೂ ಕರಕುಶಲ ಕರ್ಮಿಗಳಿಗೆ ನೀತಾ ಅಂಬಾನಿ ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ. ಬೆಂಗಳೂರಿನ ಹೌಸ್ ಆಫ್ ಅಂಗಡಿಯ ವಸ್ತ್ರಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುವುದು ನೀತಾ ಅವರ ಬಯಕೆಯಾಗಿದೆ ಎಂದು ವರದಿ ತಿಳಿಸಿದೆ.
ಹೌಸ್ ಆಫ್ ಅಂಗಡಿ ಸುದೀರ್ಘ 600 ವರ್ಷಗಳ ಪರಂಪರೆಯನ್ನು ಹೊಂದಿದ್ದು, ಇದು ಜವಳಿ ಕ್ಷೇತ್ರದ ಶ್ರೇಷ್ಠತೆಯ ಚಿಹ್ನೆಯಾಗಿ ಗುರುತಿಸಲ್ಪಟ್ಟಿದೆ. 2018ರಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತನ್ನ ವಿವಾಹ ಸಂದರ್ಭದಲ್ಲಿ ಹೌಸ್ ಆಫ್ ಅಂಗಡಿಯಲ್ಲಿ ಖರೀದಿಸಿದ್ದ ವಸ್ತ್ರದ ವಿನ್ಯಾಸಗಳಿಂದ ಈ ಮಳಿಗೆ ಎಲ್ಲರ ಗಮನಸೆಳೆಯಲ್ಪಟ್ಟಿತ್ತು. ನಂತರ ಬೆಂಗಳೂರಿನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲೂ ದೀಪಿಕಾ ಹೌಸ್ ಆಫ್ ಅಂಗಡಿಯ ಸೀರೆಯಲ್ಲಿ ಮಿಂಚಿ ಎಲ್ಲರ ಗಮನ ಸೆಳೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಅವಿಸ್ಮರಣೀಯ ಭೇಟಿ:
ನೀತಾ ಅಂಬಾನಿ ಅವರು ಹೌಸ್ ಆಫ್ ಅಂಗಡಿಗೆ ಭೇಟಿ ನೀಡಿದ ನಂತರ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ, ಕೆ.ರಾಧಾರಾಮನ್ ಅವರು ಫೋಟೊವನ್ನು ಶೇರ್ ಮಾಡಿ, ಇದೊಂದು ಅವಿಸ್ಮರಣೀಯ ಭೇಟಿಯಾಗಿದೆ ಎಂದು ತಿಳಿಸಿ ಕೃತಜ್ಞತೆ ಸಲ್ಲಿಸಿದ್ದು. ಬಳಿಕ “ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕಾಗಿ ಶ್ರೀಮತಿ ನೀತಾ ಅಂಬಾನಿ ಅವರಿಗೆ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದೆ.
View this post on Instagram
ಅಲ್ಲದೇ ಹೌಸ್ ಆಫ್ ಅಂಗಡಿಯ ವಿಸಿಟರ್ಸ್ ಬುಕ್ ನಲ್ಲಿ ನೀತಾ ಅಂಬಾನಿ ಕೈಬರಹದ ಸಂದೇಶವನ್ನು ಆನ್ ಲೈನ್ ನಲ್ಲಿ ಹಂಚಿಕೊಂಡಿದೆ. ಇದೊಂದು ಭಾರತೀಯ ಪರಂಪರೆಯ ಸುಂದರವಾದ ಅನುಭವ ಪಡೆದಂತಾಗಿದೆ. ಸಾಂಪ್ರದಾಯಿಕ ಸಂಪ್ರದಾಯ ಸಂರಕ್ಷಿಸುವ ಬ್ರ್ಯಾಂಡ್ ನ ಕಾಳಜಿಯನ್ನು ಹೌಸ್ ಆಫ್ ಅಂಗಡಿ ಪ್ರತಿಬಿಂಬಿಸಿದೆ ಎಂದು ನೀತಾ ಶಹಬ್ಬಾಸ್ ಗಿರಿ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
Financial Policy: ಭದ್ರತೆ ಇಲ್ಲದ ಕೃಷಿ ಸಾಲ ಮಿತಿ 2 ಲಕ್ಷ ರೂ.ಗೆ ಏರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.