Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ
Team Udayavani, Dec 18, 2024, 1:35 AM IST
ನಾವು ಎಲ್ಲಿರುತ್ತೇವೋ, ಯಾವುದನ್ನು ಉಪಯೋಗಿಸುತ್ತೇವೋ ಅದನ್ನು ತನ್ನದೆಂದು ಭಾವಿಸುವುದು ಜೀವರ ಸ್ವಭಾವ. ಮನೆ ಬಾಡಿಗೆಗೆ ಕೊಡುವುದನ್ನು 11 ತಿಂಗಳಿಗೆ ಮಾಡಿದ್ದು ಇದಕ್ಕಾಗಿ. 12 ತಿಂಗಳಾದರೆ ಅದನ್ನು ತನ್ನದೆಂದು ಹೇಳುತ್ತಾನೆ. ಉಳುವವನೇ ಹೊಲದೊಡೆಯ, ಅಕ್ರಮ ಸಕ್ರಮ ಕಾನೂನು ಬಂದದ್ದು ಹೀಗೆ. ಕೈಕೇಯಿ ರಾಮನನ್ನು 14 ವರ್ಷ ವನವಾಸಕ್ಕೆ ತೆರಳು ಎಂದು ಹೇಳಲು ಇದುವೇ ಕಾರಣ. ಏಳು ವರ್ಷವಿದ್ದರೆ ಹಕ್ಕು ಬಂದಂತಾಗುತ್ತದೆ. ಸೇಫರ್ ಸೈಡ್‌ನಲ್ಲಿ ಕೈಕೇಯಿ 14 ವರ್ಷ ವನವಾಸದಲ್ಲಿರು ಎಂದಳು.
ಆಕೆಯ ಉದ್ದೇಶ ರಾಮನಿಗೆ ಎಂದೆಂದೂ ರಾಜ ಪಟ್ಟ ಸಿಗಬಾರದು ಎಂದು. ಇದನ್ನು ನೇರವಾಗಿ ಹೇಳದೆ ಪರೋಕ್ಷವಾಗಿ 14 ವರ್ಷ ಕಾಡಿನಲ್ಲಿರು ಎಂದಳು. ಮತ್ತೆ ಯಾವ ಹಕ್ಕೂ ರಾಮನಿಗೆ ಅಯೋಧ್ಯೆ ಮೇಲೆ ಬರುವುದಿಲ್ಲ, ಜನರಿಗೆ ನೆನಪೂ ಹೋಗುತ್ತದೆ. ಅಗ ಭರತನಿಗೆ ಎಲ್ಲ ಹಕ್ಕೂ ಬಂದಂತಾಗುತ್ತದೆ. ಪಾಂಡವರ ಆಜ್ಞಾತವಾಸದ ಕತೆಯೂ ಹೀಗೆಯೇ. ಯಾರಿಗೂ ಗೊತ್ತಾಗದಂತೆ, ಕಾಣದಂತೆ ಒಂದು ವರ್ಷ ಇರಬೇಕೆಂದರೆ ಏನಾದರೂ ಅರ್ಥವಿದೆಯೆ? ಮಕ್ಕಳಾಟಿಕೆಯಾಗಿ (ಹೊಕ್ಕಾಟದ ರೀತಿ) ಕಾಣುವುದಿಲ್ಲವೆ? 12 ವರ್ಷದ ವನವಾಸ, ಒಂದು ವರ್ಷದ ಅಜ್ಞಾತವಾಸ ಒಟ್ಟು 13 ವರ್ಷ ಮಾತ್ರ ಪಾಂಡವರನ್ನು ಕಳುಹಿಸುವುದಲ್ಲ.
ಪರ್ಮನೆಂಟ್ ಆಗಿ ಕಳುಹಿಸಬೇಕಿತ್ತು. ಒಂದು ವರ್ಷ ಅಜ್ಞಾತವಾಗಿದ್ದರೆ ಜನರಿಂದ ಬೆಂಬಲ ಬರುವುದಿಲ್ಲ ಎಂಬ ದುರಾಲೋಚನೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.