ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ


Team Udayavani, Dec 18, 2024, 6:45 AM IST

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ರಾಜ್ಯ ಹೈಕೋರ್ಟ್‌ನ ಖಾಯಂ ಪೀಠವನ್ನು ಕರಾವಳಿಯಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆ ಹಲವಾರು ದಶಕಗಳಿಂದ ಮರೀಚಿಕೆಯಾಗಿಯೇ ಉಳಿದಿದೆ. ಪ್ರಧಾನ ಪೀಠವಲ್ಲದೆ ಹೆಚ್ಚುವರಿ ಪೀಠಗಳನ್ನು ಸ್ಥಾಪಿಸಲು ಹಲವಾರು ವಾಸ್ತವ ವಿಷಯಗಳು ಹಾಗೂ ಕಾನೂನುಗಳನ್ನು ಪರಿಶೀಲಿಸುವುದು ಅಗತ್ಯ.

ಭಾರತದ ಸಂವಿಧಾನದ ಆರ್ಟಿಕಲ್‌ 21ರ ಪ್ರಕಾರ, ನ್ಯಾಯ ಪಡೆಯುವುದು ಪ್ರಜೆಗಳ ಮೂಲಭೂತ ಹಕ್ಕಾಗಿರುತ್ತದೆ. ಕೋರ್ಟ್‌ಗಳ ಸಾಮರ್ಥ್ಯ ಮತ್ತು ಮೂಲ ಸೌಕರ್ಯ ವೃದ್ಧಿಗೆ ಸರಕಾರವು ಅನುಕೂಲಕರ ವ್ಯವಸ್ಥೆಯನ್ನು ಮಾಡಿ ಶ್ರೀಸಾಮಾನ್ಯನಿಗೆ ನ್ಯಾಯ ಪಡೆಯಲು ಸುಲಭ ದಾರಿಯನ್ನು ಕಲ್ಪಿಸಿಕೊಡಬೇಕು ಎಂದು ಸು. ಕೋರ್ಟ್‌ 2018ರಲ್ಲಿ ಅಖೀಲ ಭಾರತ ನ್ಯಾಯಾಧೀಶರ ಒಕ್ಕೂಟ ವರ್ಸಸ್‌ ಯೂನಿಯನ್‌ ಆಫ್ ಇಂಡಿಯಾ ಎಂಬ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಸುಪ್ರೀಂ ಕೋರ್ಟ್‌ 2016 ರಲ್ಲಿ ಅನಿತಾ ಕುಶ್ವಾಹ ಮತ್ತು ಪುಷಾಪ್‌ ಸುದಾನ್‌ ಎಂಬ ಪ್ರಕರಣದ ತೀರ್ಪಿನಲ್ಲಿ ನಾಲ್ಕು ಮುಖ್ಯ ಅಂಶಗಳನ್ನು ತಿಳಿಸಿದೆ. ಅದೇನೆಂದರೆ (1.) ಸರಕಾರವು ನ್ಯಾಯ ವಿಲೇವಾರಿಯ ಪರಿಣಾಮಕಾರಿ ವ್ಯವಸ್ಥೆಯನ್ನು ಕಲ್ಪಿಸಬೇಕು. (2.) ಸದ್ರಿ ವ್ಯವಸ್ಥೆಯು ಶ್ರೀಸಾಮಾನ್ಯನಿಗೆ ಎಟಕುವಂತಹ ದೂರದಲ್ಲಿರಬೇಕು. (3.) ನ್ಯಾಯ ವಿಲೇವಾರಿ ವ್ಯವಸ್ಥೆಯು ಶೀಘ್ರವಾಗಿ ಕಾರ್ಯ ನಿರ್ವ
ಹಿಸಬೇಕು. (4.) ನ್ಯಾಯ ವಿಲೇವಾರಿ ವ್ಯವಸ್ಥೆಯ ಉಪಯೋಗ ಪಡೆಯಲು ಸದ್ರಿ ವ್ಯವಸ್ಥೆಯು ಸಮಂಜಸವಾದ ಬೆಲೆಯಲ್ಲಿ ಸಿಗುವಂತಾಗಬೇಕು.
ನಮ್ಮ ಸಂವಿಧಾನದ ಆರ್ಟಿಕಲ್‌ 214ರ ಪ್ರಕಾರ ಎಲ್ಲ ರಾಜ್ಯಗಳಿಗೆ ಒಂದು ಹೈಕೋರ್ಟ್‌ ಇರಬೇಕು. ರಾಜ್ಯಗಳ ಪುನರ್‌ವಿಂಗಡನ ಕಾಯ್ದೆ 1956ರ 51ನೇ ಸೆಕ್ಷನ್‌ ಪ್ರಕಾರ ರಾಜ್ಯಗಳಲ್ಲಿ ಹೈಕೋರ್ಟ್‌ನ ಪ್ರಧಾನ ಪೀಠ ಮತ್ತು ಇತರ ಪೀಠಗಳನ್ನು ಸ್ಥಾಪನೆ ಮಾಡುವ ಬಗ್ಗೆ ವಿವರಗಳು ಸಿಗುತ್ತವೆ. ರಾಷ್ಟ್ರಪತಿಯವರು ಆಯಾ ರಾಜ್ಯಗಳ ಗವರ್ನರ್‌ ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರೊಡನೆ ಸಮಾಲೋಚಿಸಿ, ಪ್ರಧಾನ ಪೀಠವಲ್ಲದೆ, ರಾಜ್ಯದೊಳಗೆ ಒಂದು ಅಥವಾ ಹೆಚ್ಚು ಸ್ಥಳಗಳಲ್ಲಿ ಖಾಯಂ ಪೀಠಗಳನ್ನು ಸ್ಥಾಪಿಸುವ ಬಗ್ಗೆ ನೋಟಿಫಿಕೇಶನ್‌ ಮಾಡಬಹುದು.
ಕೇಂದ್ರ ಸರಕಾರವು 1981ರಲ್ಲಿ ರಚಿಸಿದ ನ್ಯಾ| ಜಸ್ವಂತ್‌ ಸಿಂಗ್‌ ನೇತೃತ್ವದ ತ್ರಿಸದಸ್ಯ ಆಯೋಗ ಹೆಚ್ಚುವರಿ ಹೈಕೋರ್ಟ್‌ ಪೀಠಗಳ ಸ್ಥಾಪನೆ ಸಂಬಂಧ ಸಲ್ಲಿಸಿದ ವರದಿಯ ಪ್ರಕಾರ (1.) ಪೀಠವನ್ನು ಆಪೇಕ್ಷಿಸುತ್ತಿರುವ ಪ್ರದೇಶವು ಸಾಕಷ್ಟು ಜನಸಂಖ್ಯೆ ಮತ್ತು ವಿಸ್ತೀರ್ಣವನ್ನು ಹೊಂದಿರಬೇಕು. (2.) ಪ್ರಧಾನ ಪೀಠಕ್ಕೆ ಸದ್ರಿ ಪ್ರದೇಶದಿಂದ ಕಕ್ಷಿಗಾರರು ಪ್ರಯಾಣಿಸಲು ಇರುವ ಸೌಕರ್ಯಗಳು ಮತ್ತು ದೂರ. (3.) ಪೀಠ ಸ್ಥಾಪನೆಯ ಸ್ಥಳದಲ್ಲಿ ಸಿಗುವ ಮೂಲ ಸೌಕರ್ಯಗಳು. (4.) ಪೀಠ ಪ್ರಸ್ತಾವಿಸಿರುವ ಪ್ರದೇಶದಲ್ಲಿ ಇರುವ ವಕೀಲರುಗಳ ಸಂಖ್ಯೆ ಮತ್ತು ಪ್ರಬುದ್ಧತೆ.

2000ನೇ ಇಸವಿಯಲ್ಲಿ ಸುಪ್ರೀಂ ಕೋರ್ಟ್‌ ಫೆಡರೇಶನ್‌ ಆಫ್ ಬಾರ್‌ ಎಸೋಸಿಯೇಶನ್ಸ್‌ ಇನ್‌ ಕರ್ನಾಟಕ ಎಂಬ ವ್ಯಾಜ್ಯದಲ್ಲಿ ಹೆಚ್ಚುವರಿ ಪೀಠಗಳನ್ನು ಆಯಾ ರಾಜ್ಯಗಳ ಹೈಕೋರ್ಟ್‌ ನಿರ್ಣಯಿಸಿದಂತೆ ಮಾಡಬೇಕು ಎಂದು ತೀರ್ಮಾನಿಸಿದೆ. ಅಂತಹ ವಿಷಯಗಳಲ್ಲಿ ಮುಖ್ಯ ನ್ಯಾಯಾಧೀಶರ ನಿರ್ಣಯವೇ ಹೈಕೋರ್ಟ್‌ನ ನಿರ್ಣಯವಾಗಿರುತ್ತದೆ ಎಂದು ಸದ್ರಿ ತೀರ್ಪಿನಲ್ಲಿ ತಿಳಿಸಲಾಗಿದೆ. ಸದ್ರಿ ತೀರ್ಪಿನಂತೆ ರಾಜ್ಯ ಸರಕಾರವು ಹೆಚ್ಚುವರಿ ಪೀಠಗಳ ಸ್ಥಾಪನೆಗೆ ಬರುವ ಖರ್ಚು ಮತ್ತು ಮೂಲ ಸೌಕರ್ಯವನ್ನು ಒದಗಿಸಬೇಕಾಗುತ್ತದೆ.

ಲಾ ಕಮಿಷನ್‌ ಆಫ್ ಇಂಡಿಯಾ 2009ರಲ್ಲಿ ನ್ಯಾಯಾಂಗ ಸುಧಾರಣೆಯ ಬಗ್ಗೆ ನೀಡಿದ್ದ ವರದಿಯಲ್ಲಿ ನೀಡಿದ್ದ ಪ್ರಮುಖ ಸಲಹೆಗಳೆಂದರೆ:- (1.) ದೇಶದ ಜನರು ಶೀಘ್ರ ನ್ಯಾಯೋಚಿತ ಪರಿಹಾರ ಸಿಗುವಂತಾಗಲು ಹೈಕೋರ್ಟ್‌ಗಳ ಸ್ಥಾಪನೆ ಮತ್ತು ಕಾರ್ಯವಿಧಾನಗಳಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯವಿದೆ. (2.)ಹೆಚ್ಚಿನ ಎಲ್ಲ ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಬಾಕಿಯಿರುವ ವ್ಯಾಜ್ಯಗಳ ಸಂಖ್ಯೆ ಬಹಳಷ್ಟಿದ್ದು ಈಗ ಇರುವ ನ್ಯಾಯಾಧೀಶರ ಸಂಖ್ಯೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಕಾಗುವುದಿಲ್ಲ. ಅದಲ್ಲದೆ ಹೊಸದಾಗಿ ಸಲ್ಲಿಕೆಯಾಗುವ ವ್ಯಾಜ್ಯಗಳ ಸಂಖ್ಯೆಯು ವಿಲೇವಾರಿಯಾಗುವ ಕೇಸುಗಳಿಂದ ಹೆಚ್ಚಾಗಿದ್ದು, ಕೋರ್ಟ್‌ನಲ್ಲಿ ಬಾಕಿಯಿರುವ ವ್ಯಾಜ್ಯಗಳ ಸಂಖ್ಯೆ ಏರುತ್ತಿದೆ. ಕಕ್ಷಿಗಾರರು ಶೀಘ್ರ ನ್ಯಾಯ ವಿಲೇವಾರಿಯಿಂದಾಗಿ ಆತಂಕರಹಿತ ಬದುಕನ್ನು ಹೊಂದಲು ಮೂಲಭೂತ ಹಕ್ಕುಳ್ಳವರಾಗಿರುತ್ತಾರೆ. (3.)ಹೈಕೋರ್ಟ್‌ಗಳ ಕೆಲಸವು ವಿಕೇಂದ್ರಿಕರಣ ಗೊಳ್ಳ ಬೇಕಿದ್ದು ರಾಜ್ಯಗಳಲ್ಲಿ ಹೆಚ್ಚಿನ ಪೀಠ ಸ್ಥಾಪನೆ ಅಗತ್ಯ ವಿದೆ. (4.) ಹೊಸ ಪೀಠಗಳ ಸ್ಥಾಪನೆಯಾಗುವುದರಿಂದ ಕಕ್ಷಿಗಾರರಿಗೆ ಹೈಕೋರ್ಟ್‌ ಮೊರೆಹೋಗಲು ದೂರ ಪ್ರಯಾಣದ ಅಗತ್ಯ ಬರುವುದಿಲ್ಲ. (5.)ದೇಶದ ಸರ್ವ ತೋಮುಖ ಅಭಿವೃದ್ಧಿಗೆ ಹೊಸ ಪೀಠಗಳ ಹಣಕಾಸು ಅಗತ್ಯಗಳು ಅಡ್ಡಿಯಾಗಬಾರದು. (6.)ಹೊಸ ಪೀಠ ಗಳ ಸ್ಥಾಪನೆಯು ಖಂಡಿತವಾಗಿಯೂ ಕಕ್ಷಿಗಾರರಿಗೆ ಮತ್ತು ವಕೀಲರಿಗೆ ಸಹಕಾರಿಯಾಗಲಿದೆ.
ಲಾ ಕಮಿಷನ್‌ 2009ರ ವರದಿಯಲ್ಲಿ ಶೀಘ್ರ ನ್ಯಾಯ, ವ್ಯಾಜ್ಯದ ಖರ್ಚು ಕಡಿತ ಮತ್ತು ಶಿಸ್ತುಬದ್ಧ ನ್ಯಾಯಾಂಗ ಕಲಾಪಗಳು ನಡೆಯುವಂತಾಗಲು ವಿಶೇಷ ಒತ್ತು ನೀಡಲಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಈ ವರದಿ ಪ್ರಸ್ತುತವಾಗಿದೆ. ಹೈಕೋರ್ಟ್‌ ಪೀಠಗಳನ್ನು ಸ್ಥಾಪಿಸುವ ಬಗ್ಗೆ ಕಳೆದ ವರ್ಷದ ಆಗಸ್ಟ್‌ 10ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಅಂದಿನ ಕೇಂದ್ರ ಕಾನೂನು ಮತ್ತು ನ್ಯಾಯ ರಾಜ್ಯ ಸಚಿವರು, “ಹೆಚ್ಚುವರಿ ಪೀಠ ಸ್ಥಾಪನೆಯ ಬಗ್ಗೆ ರಾಜ್ಯ ಸರಕಾರ ಮತ್ತು ಹೈಕೋರ್ಟ್‌ನ ಸಹಮತವು ಪ್ರಾಥಮಿಕ ವಾಗಿರುತ್ತದೆ ಎಂದು ಹೇಳಿದ್ದರು.
ಕರ್ನಾಟಕ ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಪೂರಕವಾಗಿರುವ ಹಲವಾರು ಅಂಶಗಳನ್ನು ಕಾಣಬಹುದು :-

-ಕರ್ನಾಟಕದಲ್ಲಿ ಎರಡು ಹೆಚ್ಚುವರಿ ಪೀಠಗಳನ್ನು ಸ್ಥಾಪಿಸಿದ ಬಳಿಕವೂ ಬೆಂಗಳೂರಿನಲ್ಲಿರುವ ಪ್ರಧಾನ ಪೀಠದಲ್ಲಿ ತನಿಖೆಗೆ ಬಾಕಿಯಿರುವ ಪ್ರಕರಣಗಳ ಸಂಖ್ಯೆ ಬಹಳಷ್ಟಿದೆ. ಹೀಗಾಗಿ ಕಕ್ಷಿಗಾರರು ಪ್ರಕರಣ ವಿಲೇ ವಾರಿಗೆ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದಿದೆ.
-ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠಕ್ಕೆ ಕರಾವಳಿ ಜಿಲ್ಲೆ ಗಳಿಂದ ಹಾಗೂ ನೆರೆಯ ಜಿಲ್ಲೆ ಗಳಿಂದ ಸಲ್ಲಿಸಲಾಗುತ್ತಿರುವ ವ್ಯಾಜ್ಯಗಳ ಸಂಖ್ಯೆ ಅಗಾಧವಾಗಿದೆ.
-ಬೆಂಗಳೂರು ಪ್ರಧಾನ ಪೀಠವು ಕರಾವಳಿ ಭಾಗದಿಂದ 350 ಕಿ.ಮೀ.ಗಿಂತ ದೂರದಲ್ಲಿದ್ದು ಕಕ್ಷಿಗಾರರಿಗೆ ಬಲುದೊಡ್ಡ ಸಮಸ್ಯೆಯಾಗಿದೆ. ಮಳೆಗಾಲದ 3-4 ತಿಂಗಳುಗಳಲ್ಲಿ ಬೆಂಗಳೂರಿಗೆ ಪ್ರಯಾಣಿಸಲು ರಸ್ತೆ ಹಾಗೂ ರೈಲು ಸಂಪರ್ಕ ಬಹಳ ಅನಿಶ್ಚಿತ ಮತ್ತು ದುಬಾರಿಯಾಗಿರುತ್ತದೆ. ಬೆಂಗಳೂರಿನಲ್ಲಿ ಆಹಾರ ಮತ್ತು ವಸತಿ ವೆಚ್ಚಗಳು ಬಡ ಕಕ್ಷಿಗಾರನಿಗೆ ಗಗನ ಕುಸುಮವಾಗಿರುತ್ತದೆ.
-ಕರ್ನಾಟಕ ಕರಾವಳಿ ಹಾಗೂ ನೆರೆಯ ಮಲೆನಾಡು ಪ್ರದೇಶದಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿದ ವಕೀಲರುಗಳು ವೃತ್ತಿನಿರತರಾಗಿದ್ದು, ಅವರ ಪ್ರಬು ದ್ಧತೆಯ ಬಗ್ಗೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.
-ಕರ್ನಾಟಕ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹತ್ತಕ್ಕಿಂತಲೂ ಹೆಚ್ಚಿನ ಕಾನೂನು ವಿದ್ಯಾಲಯಗಳಿದ್ದು ಸಹಸ್ರಾರು ಮಂದಿ ಕಾನೂನು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.
-ಹೈಕೋರ್ಟ್‌ ಪೀಠ ಸ್ಥಾಪನೆಗೆ ಮಂಗಳೂರು ನಗರದ ಜೈಲು ಹಾಗೂ ಜಿಲ್ಲಾಧಿಕಾರಿ, ಪೊಲೀಸ್‌ ಅಧಿಕಾರಿ ಕಚೇರಿ ಸ್ಥಳಾಂತರದಿಂದ ಸ್ಥಳಾವಕಾಶ ಸಿಗುತ್ತಿದೆ. ಹೆಚ್ಚಿನ ವಿಸ್ತಾರದ ಜಾಗದ ಆವಶ್ಯಕತೆ ಕಂಡುಬಂದಲ್ಲಿ ಮೂಲ್ಕಿ ಪ್ರದೇಶದಲ್ಲಿ ನೂರಾರು ಎಕ್ರೆ ಸರಕಾರಿ ಸ್ಥಳ ಲಭ್ಯವಿದೆ.
-ಕರಾವಳಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೇ ಮಾರ್ಗಗಳು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವ ಮಂಗಳೂರು ಬೃಹತ್‌ ಬಂದರು ಕಾರ್ಯನಿರ್ವಹಿಸುತ್ತಿದೆ.
-ಕರಾವಳಿಯ 3 ಮತ್ತು ನೆರೆಯ ಮಲೆನಾಡು ಜಿಲ್ಲೆಗಳಲ್ಲಿ ಸಾಕಷ್ಟು ಜನಸಂಖ್ಯೆಯಿದ್ದು ಬಹಳ ವಿಸ್ತಾರವಾದ ಭೌಗೋಳಿಕ ಹಿನ್ನೆಲೆಯನ್ನು ಹೊಂದಿದೆ.
– ಕರಾವಳಿ ಪ್ರದೇಶವು ವೈದ್ಯಕೀಯ, ಬ್ಯಾಂಕಿಂಗ್‌, ಶಿಕ್ಷಣ ಹಾಗೂ ಕೈಗಾರಿಕ ಕೇಂದ್ರವಾಗಿದ್ದು ಈ ಪ್ರದೇಶಕ್ಕೆ ಬರುವ ಸಂದರ್ಶಕರಿಗೆ ಉತ್ತಮ ವಾಸ್ತವ್ಯದ ವ್ಯವಸ್ಥೆ ಕಡಿಮೆ ಖರ್ಚಿನಲ್ಲಿ ಸಿಗುತ್ತದೆ.
-ವೃತ್ತಿಪರ ಕಾನೂನು ಸೇವೆಗಳಿಗೆ ಮಹಾನಗರ ಗಳಲ್ಲಿ ನೀಡಬೇಕಾದ ದುಬಾರಿ ಶುಲ್ಕದ ಬದಲು ಬಡಜನರಿಗೆ ಕಡಿಮೆ ವೆಚ್ಚದಲ್ಲಿ ದೊರಕುತ್ತದೆ.

ಎಲ್ಲ ದೃಷ್ಟಿಯಿಂದ ಕೂಲಂಕಷವಾಗಿ ಪರಿಶೀಲನೆ ಮಾಡಿದಾಗ ಮಂಗಳೂರಲ್ಲಿ ಅಥವಾ ಪರಿಸರದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಪೂರಕವಾದ ಅಂಶಗಳು ಎದ್ದು ಕಾಣುತ್ತವೆ. ಸರಕಾರವಾಗಲಿ, ನ್ಯಾಯಾಂಗ ವಾಗಲಿ ಈ ಬಗ್ಗೆ ಸಕಾರಾತ್ಮಕ ನಿರ್ಧಾರ ಕೈಗೊಳ್ಳ ಬೇಕಾದಲ್ಲಿ ಜನರ ಬೇಡಿಕೆ ಹಾಗೂ ಒತ್ತಾಯ ಅತೀ ಅಗತ್ಯ. ಜನರು ಜಾಗೃತಗೊಂಡು ಒಮ್ಮತದಿಂದ ಈ ಬಗ್ಗೆ ಸರಕಾರಕ್ಕೆ ಬೇಡಿಕೆಯನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಜನರು ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳು ಪ್ರಾತಿನಿಧಿಕವಾಗಿ ಸರಕಾರಕ್ಕೆ ಈ ಬಗ್ಗೆ ಮನವಿ, ಬೇಡಿಕೆಗಳನ್ನುಸಲ್ಲಿಸಿ ಹೈಕೋರ್ಟ್‌ ಪೀಠದ ಸ್ಥಾಪನೆಗೆ ಸರಕಾರದ ಹಾಗೂ ನ್ಯಾಯಾಂಗದ ಮನವೊಲಿಸಿದಲ್ಲಿ ಕರಾವಳಿಗರ ಬಹುದಿನಗಳ ಕನಸು ಶೀಘ್ರ ನನಸಾಗಲು ಸಾಧ್ಯ.

-ಕೆ. ಪೃಥ್ವೀರಾಜ್‌ ರೈ, ಮಂಗಳೂರು

ಟಾಪ್ ನ್ಯೂಸ್

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

4-bantwala

ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

3-gangavathi

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದರ್ಶನ್‌

Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದರ್ಶನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-e4qeewqewq

Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್

7

Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ

4-bantwala

ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.