Bajpe: ಕಮರಿಗೆ ಬಿದ್ದ ಕ್ರೇನ್; ಅದರಡಿ ಸಿಲುಕಿದ ಆಪರೇಟರ್ಗೆ ಗಂಭೀರ ಗಾಯ
Team Udayavani, Dec 18, 2024, 2:42 AM IST
ಬಜಪೆ: ಅದ್ಯಪಾಡಿಯಿಂದ ಕೆಂಜಾರಿಗೆ ಬರುತ್ತಿದ್ದ ಕ್ರೇನ್ವೊಂದು ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿ ಅಪರೇಟರ್ನ ನಿಯಂತ್ರಣ ತಪ್ಪಿ ರಾಜ್ಯ ಹೆದ್ದಾರಿ 67ರ ಬದಿಯ ಸುಮಾರು 20 ಅಡಿ ಅಳದ ಕಮರಿಗೆ ಮಗುಚಿ ಬಿದ್ದಿದ್ದು, ಆಪರೇಟರ್ಗೆ ಗಂಭೀರ ಗಾಯವಾಗಿದೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆ ಸಂಜೆ ಸುಮಾರು 6.30ಕ್ಕೆ ಸಂಭವಿಸಿದ್ದು, ಅದ್ಯಪಾಡಿಯಿಂದ ಕೆಂಜಾರಿಗೆ ಕ್ರೇನ್ ಬರುತ್ತಿತ್ತು. ವಿಮಾನ ನಿಲ್ದಾಣದ ಇಳಿಜಾರು ಪ್ರದೇಶದಲ್ಲಿ ಅಪರೇಟರ್ನ ನಿಯಂತ್ರಣ ಕಳೆದುಕೊಂಡು ರಾಜ್ಯ ಹೆದ್ದಾರಿ ಬದಿಯಲ್ಲಿರುವ ರಕ್ಷಣಾ ತಡೆಗೋಡೆಗೆ ಢಿಕ್ಕಿ ಹೊಡೆದು ಕಮರಿಗೆ ಮಗುಚಿ ಬಿದ್ದಿದೆ.
ಅರ್ಧ ತಾಸು ಕಾರ್ಯಾಚರಣೆ
ಕ್ರೇನ್ ಅಡಿಗೆ ಸಿಲುಕಿಕೊಂಡ ಆಪರೇಟರ್ ಅವರನ್ನು ಮೇಲೆಕ್ಕೆತ್ತಲು ಸುಮಾರು ಅರ್ಧ ತಾಸು ಕಾರ್ಯಾ ಚರಣೆ ಮಾಡಲಾಗಿದೆ. ಇನ್ನೊಂದು ಕ್ರೇನ್ ಮೂಲಕ ಮೇಲಕ್ಕೆತ್ತಿ ಅದರಡಿಗೆ ಸಿಲುಕಿಕೊಂಡ ಅಪರೇಟರ್ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ಅಪರೇಟರ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳಕ್ಕೆ ಆ್ಯಂಬುಲೆನ್ಸ್ ಬರಲು ಅರ್ಧ ತಾಸು ವಿಳಂಬವಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.