ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
ಓರ್ವ ಪರಾರಿ
Team Udayavani, Dec 18, 2024, 12:17 PM IST
ಬಂಟ್ವಾಳ: ಮನೆಯೊಂದರಲ್ಲಿ ಅಕ್ರಮವಾಗಿ ಉಲಾಯಿ-ಪಿದಾಯಿ ಜುಗಾರಿ ಆಟದಲ್ಲಿ ತೊಡಗಿದ್ದ 33 ಆರೋಪಿಗಳನ್ನು ಹಾಗೂ ಆಟಕ್ಕೆ ಬಳಸಿದ ಲಕ್ಷಾಂತರ ರೂ. ನಗದನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಎಸ್. ಐ.ಹರೀಶ್ ನೇತೃತ್ವದ ತಂಡ ಬಡಗಬೆಳ್ಳೂರು ಎಂಬಲ್ಲಿ ಬಂಧಿಸಿದೆ.
ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬಡಗಬೆಳ್ಳೂರು ಎಂಬಲ್ಲಿನ ಆರ್.ಸಿ.ಸಿ. ಮನೆಯೊಂದರಲ್ಲಿ ಟೇಬಲ್ ಸುತ್ತ ಕುಳಿತು ಇಸ್ಪೀಟ್ ಎಲೆಗಳನ್ನು ಬಳಸಿ ಅಕ್ರಮವಾಗಿ ಡಿ.17ರ ಮಂಗಳವಾರ ಸಂಜೆ “ಉಲಾಯಿ-ಪಿದಾಯಿ” ಜುಗಾರಿ ಆಟ ಆಡಿಸುತ್ತಿದ್ದ ನಿಶಾಂತ್ ಎಂಬಾತ ತಪ್ಪಿಸಿಕೊಂಡಿದ್ದು, ಆಡುತ್ತಿದ್ದ ಒಟ್ಟು 33 ಜನರನ್ನು ದಾಳಿ ವೇಳೆ ಪತ್ತೆ ಹಚ್ಚಿದ್ದು, ಜುಗಾರಿ ಆಟಕ್ಕೆ ಬಳಸಿದ ನಗದು ರೂ. 7,81,420/-, ಇಸ್ಪೀಟ್ ಎಲೆಗಳು, ಸ್ಟೀಲ್ ಟೇಬಲ್ -3, ಪ್ಲಾಸ್ಟಿಕ್ ಚೆಯರ್ ಗಳು– 10, ಟೇಬಲ್ ಮೇಲೆ ಹಾಸಿದ್ದ ಬಟ್ಟೆ– 1 ಇವುಗಳು ಸೇರಿದಂತೆ ಬಂಧಿತರಿಂದ ನಗದು ಸಹಿತ 7,90,220/- ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಜೇಶ್ (35 ವರ್ಷ), ಆನಂದ ಡಿ.ಸೋಜ (46 ವರ್ಷ), ಚೇತನ್ (39 ವರ್ಷ), ನಿತಿನ್ (34 ವರ್ಷ), ಪುಷ್ಪರಾಜ್ ಬಳ್ಳಾಲ್ (52 ವರ್ಷ) ನೌಷಾದ್ (37 ವರ್ಷ), ನಾಗೇಶ್ (36 ವರ್ಷ), ಅಬ್ದುಲ್ ಮಜೀದ್ (37 ವರ್ಷ), ಹರೀಶ್ (45 ವರ್ಷ), ಉಮೇಶ್ (52 ವರ್ಷ), ವಿನಾಯಕ (47 ವರ್ಷ), ಅಜಿತ್ ಕುಮಾರ್ (36 ವರ್ಷ), ರಾಘವೇಂದ್ರ (34 ವರ್ಷ), ಪ್ರವೀಣ್ ಕುಮಾರ್ (58 ವರ್ಷ), ಚೆನ್ನಕೇಶವ (42 ವರ್ಷ), ಭಾಸ್ಕರ (36 ವರ್ಷ), ವಿಘ್ನೇಶ (42 ವರ್ಷ), ಸಂಕೇತ್ (35 ವರ್ಷ), ಪವನ್ ರಾಜ್ (37 ವರ್ಷ), ಲೋಹಿತ್ (42 ವರ್ಷ), ಸತೀಶ್ ಇ., ಧೀರಜ್ ಕುಮಾರ್ (28 ವರ್ಷ), ಚಿದಾನಂದ (30 ವರ್ಷ), ಪ್ರಸಾದ್ (37 ವರ್ಷ), ಸಂದೀಪ್ (34 ವರ್ಷ), ಅನಿಲ್ ಕುಮಾರ್ (30 ವರ್ಷ), ನಿತೀಶ್ (21 ವರ್ಷ), ಸತೀಶ್ (36 ವರ್ಷ), ಮುಸ್ತಾಫ ಕೆ.ಪಿ. (33 ವರ್ಷ), ಅರುಣ್ ಡಿ.ಸೋಜ (50 ವರ್ಷ), ರೋಹಿತಾಶ್ವ ಪೂಜಾರಿ (46 ವರ್ಷ), ವಿಜೇತ್ ಕುಮಾರ್ (39 ವರ್ಷ), ನಿಖಿಲ್ (34 ವರ್ಷ), ನಿಶಾಂತ್ ಪರಾರಿಯಾದ ವ್ಯಕ್ತಿ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎ.ಸಿ.ಜೆ. & ಜೆ.ಎಂ.ಎಫ್. ಸಿ. ನ್ಯಾಯಾಲಯ, ಬಂಟ್ವಾಳ ಅವರ ಡಿಸ್ ನಂ: 1770 /2024 ರ ಆದೇಶದಂತೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.