Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು


Team Udayavani, Dec 18, 2024, 5:38 PM IST

16-digital-arrest

ಇತ್ತೀಚಿಗೆ ಡಿಜಿಟಲ್‌ ತಂತ್ರಜ್ಞಾನದ ಮೂಲಕ ವ್ಯವಹಾರ ನಡೆಸುವವರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಸಾಗುತ್ತಿದೆ. ಅಂದರೆ ಬದಲಾದ ವ್ಯವಸ್ಥೆಯಲ್ಲಿ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಲ್ಲಿ ಜನರು ವೇಗವಾಗಿಯೇ ಮುನ್ನಡೆಯುತ್ತಿದ್ದಾರೆ ಎಂದು ಹೇಳಬಹುದು.

ಆದರೆ ಡಿಜಿಟಲ್‌ ಹಣಕಾಸು ವ್ಯವಹಾರದಲ್ಲಿ ವಂಚನೆಯ ಪ್ರಕರಣಗಳು ಕೂಡ ತೀವ್ರವಾಗಿ ಏರುತ್ತಿರುವುದು ಗಂಭೀರ ವಿಷಯವಾಗಿ ಪರಿಣಮಿಸಿದೆ. ಕಳೆದ ಒಂದು ದಶಕದಿಂದ ಸೈಬರ್‌ ಅಪರಾಧವು ಹೊಸ ಸವಾಲುಗಳನ್ನು ಒಡ್ಡುತ್ತಿರುವುದು ಆತಂಕದ ವಿಷಯವಾಗಿದೆ.

ಆರಂಭದಲ್ಲಿ ಆನ್‌ ಲೈನ್‌ ಬ್ಯಾಂಕಿಂಗ್‌, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಮಾಹಿತಿ ಸೇರಿದಂತೆ ಹಲವಾರು ಸೈಬರ್‌ ಅಪರಾಧಗಳನ್ನು ಮಾಡುತ್ತಿದ್ದರು. ಆದರೆ ಇತ್ತೀಚಿಗೆ ಡಿಜಿಟಲ್‌ ಅರೆಸ್ಟ್‌ ಎನ್ನುವ ಹೊಸ ತರಹದ ಸೈಬರ್‌ ವಂಚನೆಯ ಮೂಲಕ ಅಮಾಯಕರನ್ನು ವಂಚಿಸುತ್ತಿದ್ದಾರೆ. ವಂಚಕರು ಮೊದಲು ಅಮಾಯಕರನ್ನು ಫೋನ್‌ ಮೂಲಕ ಸಂಪರ್ಕಿಸುತ್ತಾರೆ. ತಾವು ಪೋಲೀಸ್‌, ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಮುಂತಾದ ತನಿಖಾ ಸಂಸ್ಥೆಗಳ ಅಧಿಕಾರಿಗಳೆಂದು ಪರಿಚಯಿಸಿಕೊಳ್ಳುತ್ತಾರೆ. ಇದಕ್ಕಾಗಿ ನಕಲಿ ಗುರುತಿನ ಚೀಟಿಗಳನ್ನು ಕೂಡ ತೋರಿಸಿ ನಂಬಿಸುತ್ತಾರೆ. ತಾವು ಯಾವ ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ಹೇಳಿರುತ್ತಾರೋ ಅಂತಹ ಕಚೇರಿಯ ವಾತಾವರಣವನ್ನೇ ಸೃಷ್ಟಿಸಿರುತ್ತಾರೆ. ಅವರ ಬಗ್ಗೆ ಯಾವುದೇ ಸಂಶಯ ಮೂಡದಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದೀರಿ ಎಂದೂ ಅಥವಾ ನೀವು ನಿಷೇಧಿತ ವಸ್ತುವನ್ನು ಕೋರಿಯರ್‌ ಮೂಲಕ ಕಳಿಸಿದ್ದೀರಿ ಅಥವಾ ಪಡೆದುಕೊಂಡಿದ್ದೀರಿ ಎಂದು ಪ್ರತಿಪಾದಿಸುತ್ತಾರೆ.

ನೀವು ಗಂಭೀರವಾದ ಅಪರಾಧ ಮಾಡಿದ್ದೀರಿ, ಹೀಗಾಗಿ ಹಲವಾರು ವರ್ಷಗಳ ಜೈಲು ಶಿಕ್ಷೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಭಯ ಹುಟ್ಟಿಸುತ್ತಾರೆ. ಸಾರ್ವಜನಿಕರನ್ನು ಸಂಪರ್ಕಿಸಲು ಯಾವುದಾದರೂ ಡಿಜಿಟಲ್‌ ಮಾರ್ಗ( ಸ್ಕೈಪ್‌, ವಾಟ್ಸಾಪ್‌, ಫೇಸ್‌ಬುಕ್‌, ಝೂಮ್‌, ಆನ್‌ ಲೈನ್‌ ಕರೆಗಳು ಮತ್ತು ಇತರೆ ವಿಡಿಯೋ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಾರೆ). ಅವರ ಮೇಲೆ ಸುಳ್ಳು ಆರೋಪ ಹೊರಿಸಿ, ಹೆದರಿಸಿ, ಬೆದರಿಸಿ ನಂತರ ಹಣಕ್ಕೆ ಬೇಡಿಕೆ ಇಡುತ್ತಾರೆ.

ಆನ್‌ ಲೈನ್‌ ಬ್ಯಾಂಕಿಂಗ್‌ ಸೇರಿದಂತೆ ಹಲವು ಮಾರ್ಗಗಳ ಮುಖಾಂತರ ಅಮಾಯಕರಿಂದ ಹಣ ಸುಲಿಗೆ ಮಾಡುತ್ತಾರೆ. ಈಗಾಗಲೇ ದೇಶಾದ್ಯಂತ ಸಾಕಷ್ಟು ಜನರು ಈ ಜಾಲಕ್ಕೆ ಸಿಲುಕಿ ಮೋಸ ಹೋಗಿದ್ದಾರೆ. ಸಂತ್ರಸ್ತರನ್ನು ಮನೆಗಳಲ್ಲೇ ಅಥವಾ ಕೆಲವೊಮ್ಮೆ ಹೊರಗೆ ಬರುವಂತೆ ಮಾಡಿ, ಬೇರೊಂದು ಸ್ಥಳದಲ್ಲಿ ದಿಗ್ಭಂಧನ ವಿಧಿಸಲಾಗುತ್ತದೆ. ಸಂತ್ರಸ್ತರಿಂದ ಹಣ ವರ್ಗಾವಣೆ ಆಗುವವರೆಗೂ ವಂಚಕರು ಅವರನ್ನು ಡಿಜಿಟಲ್‌ ಬಂಧನದಲ್ಲಿರಿಸಿರುತ್ತಾರೆ.

ಇಂತಹ ಸಮಸ್ಯೆಗಳಿಂದ ಪಾರಾಗಲು ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಯಾವುದೇ ತನಿಖಾ ಸಂಸ್ಥೆಗಳ ಅಧಿಕಾರಿಗಳು ಎಂದೂ ಕೂಡ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುವುದಿಲ್ಲ. ಹೀಗಾಗಿ ತನಿಖಾ ಸಂಸ್ಥೆಯ ಅಧಕಾರಿಗಳೆಂದು ಹೇಳಿಕೊಂಡು ಯಾರಾದರೂ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಾಗ ಯಾವುದಕ್ಕೂ ಭಯಕ್ಕೊಳಗಾಗಬಾರದು. ಕರೆಯನ್ನು ಸ್ಥಗಿತಗೊಳಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹ ಕರೆಗಳನ್ನು ಬ್ಲಾಕ್‌ ಮಾಡಬೇಕು. ವಂಚನೆಯ ಬಗ್ಗೆ ಅನುಮಾನ ಬಂದರೆ ಕೂಡಲೇ ಸೈಬರ್‌ ಸಹಾಯವಾಣಿ/ ಪೊಲೀಸರನ್ನು ಸಂಪರ್ಕಿಸಬೇಕು.

ರಾಷ್ಟ್ರೀಯ ಮಟ್ಟದಲ್ಲಿ ಸಿಟಿಜನ್‌ ಫೈನಾನ್ಶಿಯಲ್‌ ಸೈಬರ್‌ ಫ್ರಾಡ್‌ ರಿಪೋರ್ಟಿಂಗ್‌ ಆ್ಯಂಡ್‌ ಮ್ಯಾನೇಜ್‌ ಮೆಂಟ್‌ ಸಿಸ್ಟಮ್‌ ಅನ್ನು ರೂಪಿಸಲಾಗಿದೆ. 2021ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದರ ಅಡಿಯಲ್ಲಿ ರಾಷ್ಟ್ರೀಯ ಸೈಬರ್‌ ಅಪರಾಧ ದೂರು ನೀಡುವ ಪೋರ್ಟಲ್‌ ಡಬ್ಲ್ಯುಡಬ್ಲ್ಯುಡಬ್ಲ್ಯು. ಸೈಬರ್‌ ಕ್ರೈಮ್‌.ಜಿವೊವಿ. ಇನ್‌ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಸೈಬರ್‌ ಪ್ರಕರಣಗಳ ಬಗ್ಗೆ ದೂರು ನೀಡುವುದಕ್ಕೆ 1930 ಸಹಾಯವಾಣಿಯನ್ನೂ ಕೂಡ ಆರಂಭಿಸಲಾಗಿದೆ. ಅಪರಿಚಿತ ಅಂತಾರಾಷ್ಟ್ರೀಯ ಫೋನ್‌ ಕರೆಗಳ ಬಗ್ಗೆ ಎಚ್ಚರವಹಿಸಬೇಕು.

ಯಾವುದೇ ಕಾರಣಕ್ಕೂ ಅಪರಿಚಿತರೊಂದಿಗೆ ಖಾಸಗಿ ವಿಷಯಗಳನ್ನು, ಗೌಪ್ಯ ಮಾಹಿತಿಯನ್ನುಹಂಚಿಕೊಳ್ಳಬಾರದು. ಡಿಜಿಟಲ್‌ ಅರೆಸ್ಟ ವಂಚಕರಲ್ಲಿ ಬಹುತೇಕರು ದೇಶದ ಹೊರಗಡೆಯಿಂದ ಕಾರ್ಯಾಚರಣೆ ನಡೆಸುತ್ತಾರೆ. ಮ್ಯಾನ್ಮಾರ್‌, ಲಾವೊಸ್‌, ತೈವಾನ್‌, ಕಾಂಬೋಡಿಯಾದಂತಹ ದೇಶಗಳಲ್ಲಿ ಕುಳಿತು ಕರೆ ಮಾಡಿ ವಂಚಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಡಿಜಿಟಲ್‌ ಮೋಸಕ್ಕೆ ವಂಚಕರು ಎಐ ಎಪಿಕೆ ಎನ್ನುವ ಸಾಫ್ಟವೇರ್‌ ಮೂಲಕ ವಾಟ್ಸಾಪ್‌ ಗ್ರುಪ್‌ಗಳಿಗೆ ಲಗ್ಗೆ ಇಟ್ಟು ಇಡೀ ಗ್ರುಪ್‌ನ ಸದಸ್ಯರನ್ನು ವಂಚಿಸುತ್ತಾರೆ. ಎಐ ಎಪಿಕೆ ಸಾಫ್ಟವೇರ್‌ ಅನ್ನು ಮೊದಲು ವಂಚಕರು ರವಾನಿಸುತ್ತಾರೆ. ಮೊಬೈಲ್‌ನಲ್ಲಿ ಈ ಎಐ ಎಪಿಕೆ ಸಾಫ್ಟವೇರ್‌ ಡೌನ್‌ ಲೋಡ್‌ ಆಗುತ್ತಿದ್ದಂತೆ ಮೊಬೈಲ್‌ ಹ್ಯಾಕ್‌ ಆಗುತ್ತದೆ. ಆಗ ವಂಚಕರು ಮೊಬೈಲ್‌ನ ಆಕ್ಸೆಸ್‌ ಪಡೆದುಕೊಂಡು ನಂತರ ವಾಟ್ಸಾಪ್‌ ಗ್ರುಪ್‌ಗೆ ಆಡ್ಮಿನ್‌ ಆದವರೇ ಹೆಸರು ಸೇರ್ಪಡೆ ಮಾಡಿದಂತೆ ತಮ್ಮ ನಂಬರನ್ನು ಸೇರಿಸುತ್ತಾರೆ.

ನಂತರ ವಂಚಕರೇ ಅವರ ಮೊಬೈಲ್‌ನಿಂದ ಬ್ಯಾಂಕ್‌, ಗೇಮ್ಸ್ ಅಥವಾ ವಿವಿಧ ಬಗೆಯ ಆನ್‌ಲೈನ್‌ ಸಾಫ್ಟವೇರ್‌ಗಳನ್ನು ಎಐ ಎಪಿಕೆ ಸಾಫ್ಟವೇರ್‌ ಮೂಲಕ ಹರಿಬಿಟ್ಟು ಕೆವೈಸಿ ಅಪ್‌ಡೇಟ್‌ ಅಥವಾ ಇತರೆ ಡೌನ್‌ ಲೋಡ್‌ ಮಾಡಿಕೊಳ್ಳಲು ಹಲವಾರು ಗುರುತುಗಳನ್ನು ಕಳಿಸಿ ಇದನ್ನು ಕ್ಲಿಕ್‌ ಮಾಡಿಕೊಳ್ಳಲು ಸೂಚಿಸುತ್ತಾರೆ.

ಆ ಮೂಲಕ ಡಿಜಿಟಲ್‌ ವಹಿವಾಟಿನ ಮಾಹಿತಿ ಸಂಗ್ರಹಿಸಿ ಹಣ ವಂಚನೆ ಮಾಡುತ್ತಾರೆ. ಹೀಗಾಗಿ ಮೊಬೈಲ್‌ ಗಳಿಗೆ ಬರುವ ಅನಗತ್ಯ ಆ್ಯಪ್‌, ಸಾಫ್ಟವೇರ್‌ ಮೇಲೆ ಕ್ಲಿಕ್‌ ಮಾಡುವುದನ್ನು ನಿಲ್ಲಿಸುವುದು ಕೂಡ ಒಂದು ಪರಿಹಾರವಾಗಬಲ್ಲದು.

 ರಾಜು ಭೂಶೆಟ್ಟಿ

ಹುಬ್ಬಳ್ಳಿ

ಟಾಪ್ ನ್ಯೂಸ್

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

11-uv-fusion

Cold Weather: ಕೊನೆಗೂ ಚಳಿ ಶುರು ಆಯ್ತು ಗುರು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.