Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Team Udayavani, Dec 19, 2024, 7:33 AM IST
ಮೇಷ: ಉದ್ಯೋಗ ಕ್ಷೇತ್ರದ ಖಾತೆಗಳಲ್ಲಿ ಬದಲಾವಣೆ. ಗೃಹೋತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಗಮನ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಗಣ್ಯ ವ್ಯಕ್ತಿಯೊದಿಗೆ ವ್ಯವಹಾರ ಆರಂಭ.
ವೃಷಭ: ಉದ್ಯೋಗದಲ್ಲಿ ಸ್ಥಿರವಾದ ಪ್ರಗತಿ. ಯುವಜನರಿಗೆ ಕೃಷಿಕ್ಷೇತ್ರದ ಆಕರ್ಷಣೆ. ಖಾದಿ, ಗ್ರಾಮೋದ್ಯೋಗ ಯೋಜನೆಗಳಿಗೆ ಶುಭ ಕಾಲ. ರಂಗೋಲಿ, ಕಸೂತಿ ಕಲೆಗಳಲ್ಲಿ ಪರಿಣತ ಮಹಿಳೆಯರಿಗೆ ಅನುಕೂಲ. ಮುಂದುವರಿದ ಕನ್ಯಾನ್ವೇಷಣೆ.
ಮಿಥುನ: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು. ಔದ್ಯೋಗಿಕ ಪ್ರತಿಭೆ ವೃದ್ಧಿಗೆ ಅವಕಾಶ. ವಸ್ತ್ರ , ಸಿದ್ಧ ಉಡುಪು ,ಆಭರಣ ವ್ಯಾಪಾರಿ ಗಳಿಗೆ ನಿರೀಕ್ಷೆ ಮೀರಿದ ಲಾಭ. ಮನೆಯಲ್ಲಿ ಆನಂದದ ವಾತಾವರಣ. ವ್ಯವಹಾರಾರ್ಥ ಸಣ್ಣ ಪ್ರಯಾಣದ ಸಾಧ್ಯತೆ.
ಕರ್ಕಾಟಕ: ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವ ಸಾಮರ್ಥ್ಯ. ಉದ್ಯಮ ಉತ್ಪನ್ನ ಗಳ ಜನಪ್ರಿಯತೆ ವರ್ಧನೆ. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಮಕ್ಕಳ ಪ್ರತಿಭಾ ಪ್ರದರ್ಶನದಿಂದ ಹರ್ಷ.
ಸಿಂಹ: ನಿಮ್ಮ ಅಭಿಪ್ರಾಯಕ್ಕೆ ಸಹಚರರ ಮನ್ನಣೆ. ಉದ್ಯಮದಲ್ಲಿ ನೌಕರರ ಹಿತ ಕಾಯುವ ಕ್ರಮಗಳು. ಸಮಾಜದಲ್ಲಿ ಗೌರವ ವೃದ್ಧಿ. ರಾಜಕಾರಣಿಗಳು ನಡೆನುಡಿಗಳಲ್ಲಿ ಎಚ್ಚರ. ಅಧ್ಯಾಪಕರಿಗೆ ಹರ್ಷದ ದಿನ.
ಕನ್ಯಾ: ನೆಮ್ಮದಿ, ಸೌಖ್ಯದ ದಿನ. ಉದ್ಯೋಗ ಸ್ಥಾನದಲ್ಲಿ ಎಲ್ಲರಿಂದ ಗೌರವ. ಕೃಷಿ ಆಸಕ್ತಿ ವೃದ್ಧಿಗೆ ಪೂರಕ ಸನ್ನಿವೇಶ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಉತ್ಸಾಹದ ದಿನ.
ತುಲಾ: ದೈಹಿಕ, ಮಾನಸಿಕ ಆರೋಗ್ಯ ಉತ್ತಮ. ಉದ್ಯೋಗ, ವ್ಯವಹಾರಗಳಲ್ಲಿ ಗೌರವ. ಗುರುದರ್ಶನದಿಂದ ಧೈರ್ಯವೃದ್ಧಿ. ಅಧ್ಯಾಪಕರಿಗೆ ಮಕ್ಕಳ ಏಳಿಗೆಯಿಂದ ಸಂತೋಷ. ಹತ್ತಿರದ ದೇವಾಲಯಕ್ಕೆ ಭೇಟಿ.
ವೃಶ್ಚಿಕ: ಕಾಲ್ಪನಿಕ ಸಮಸ್ಯೆಗಳಿಂದ ದುರ್ಬಲ ರಾಗದಿರಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಹಿರಿಯ ಅಧಿಕಾರಿಗಳಿಗೆ ಅವ್ಯಕ್ತ ಭಯ. ಸಹಕಾರಿ ಸಂಸ್ಥೆಗಳ ಆರ್ಥಿಕ ಚೇತರಿಕೆ. ತೋಟಗಾರಿಕೆ ಬೆಳೆಗಳಿಗೆ ಬೇಡಿಕೆ, ಆದಾಯ ವೃದ್ಧಿ.
ಧನು: ಅಚ್ಚುಕಟ್ಟಾದ ಯೋಜನೆಯೊಂದಿಗೆ ಮುಂದುವರಿಯಿರಿ. ಸಣ್ಣ ಉದ್ಯಮ ಘಟಕದ ಸ್ಥಾಪನೆ ಪ್ರಯತ್ನ ಯಶಸ್ವಿ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ.
ಮಕರ: ಮನಸ್ಸಿನ ಸಮತೋಲನದಿಂದ ಕಾರ್ಯಸಿದ್ಧಿ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯ ಮುಕ್ತಾಯ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವರಮಾನ ವೃದ್ಧಿ. ಕೇಟರಿಂಗ್ ವೃತ್ತಿಯವರಿಗೆ ಅನುಕೂಲ.
ಕುಂಭ: ಹಲವು ಬಗೆಯ ಕಾರ್ಯಗಳ ಒತ್ತಡ..ಸಾಮಾಜಿಕ ವಲಯದ ಆಪ್ತರಿಂದ ಸಹಾಯದ ಕೊಡುಗೆ. ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು. ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು.
ಮೀನ: ಅನೇಕ ವಿಭಾಗಗಳತ್ತ ಲಕ್ಷÂ ಹರಿಸುವ ಅನಿವಾರ್ಯತೆ. ಸರಕಾರಿ ಅಧಿಕಾರಿಗಳ ಸಕಾರಾತ್ಮಕ ಸ್ಪಂದನ. ಕೃಷಿ ಆಧಾರಿತ ಉದ್ಯಮಗಳು ಪ್ರಗತಿಯಲ್ಲಿ. ವಿವಾಹ ಅಪೇಕ್ಷಿಗಳಿಗೆ ಸಮರ್ಪಕ ಜೋಡಿ ಲಭ್ಯ. ಜೋತಿಷಿ, ವೈದ್ಯರ ಭೇಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.