Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Team Udayavani, Dec 20, 2024, 10:02 AM IST
ಹೊಸದಿಲ್ಲಿ: ವಿದೇಶದ ಬೆಟ್ಟಿಂಗ್ ವೇದಿಕೆ “ಫೇರ್‌ಪ್ಲೇ’ (Fairplay) ಭಾರತದಲ್ಲಿನ 100ಕ್ಕೂ ನಕಲಿ ಫಾರ್ಮಾ ಕಂಪೆನಿ (Pharma Company) ಗಳನ್ನು ಬಳಕೆ ಮಾಡಿ 4500 ಕೋಟಿ ರೂ. ಅಕ್ರಮ ಎಸಗಿದೆ ಎಂದು ಇ.ಡಿ. ಹೇಳಿದೆ. 100 ಕ್ಕೂ ಹೆಚ್ಚು ನಕಲಿ ಫಾರ್ಮಾ ಕಂಪೆನಿ (Pharma Company) ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಹಲವು ಹಂತಗಳಲ್ಲಿ ಹಣ ವರ್ಗಾವಣೆ ಬಳಿಕ, ಅದನ್ನು ವಿದೇಶದಲ್ಲಿರುವ ಕಂಪೆನಿಗಳಲ್ಲಿ ಹೂಡಿಕೆ ಮಾಡಲಾಗಿರುವುದು ತನಿಖೆಯಿಂದ ಬಹಿರಂಗ ಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆರೆಬಿಯನ್ ದ್ವೀಪ ಕ್ಯೂರೋಕಾವೋ ಮತ್ತು ದುಬಾೖಯಲ್ಲಿ ನೋಂದಣಿಯಾಗಿರುವ ಫೇರ್‌ಪ್ಲೇ ಕಂಪೆನಿ (Fairplay Company) ಆನ್‌ಲೈನ್ ಬೆಟ್ಟಿಂಗ್ (Online betting) ಮೂಲಕ ಗಳಿಸಿದ ಹಣವನ್ನು ಶೆಲ್ ಕಂಪೆನಿಗಳ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಿದೆ. ಇದನ್ನು ಫಾರ್ಮಾ ಕಂಪೆನಿಗಳಿಗೆ ಒದಗಿಸುವುದಕ್ಕೂ ಮುನ್ನ 5 ಹಂತಗಳಲ್ಲಿ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಒಂದು ಹಂತದಲ್ಲಿ ಬಿಎಸ್‌ಇನಲ್ಲಿ ಲಿಸ್ಟ್ ಆಗಿರುವ ಕಂಪೆನಿ ಮೂಲಕ ವಹಿವಾಟು ನಡೆಸಲಾ ಗಿದೆ. ಆ ಕಂಪೆನಿ ಮೂಲಕ 90 ನಕಲಿ ಕಂಪೆನಿ ಸೃಷ್ಟಿಸಲಾಗಿದೆ. ಈ ಕಂಪೆನಿಗಳನ್ನು ಕೇವಲ ಅಕ್ರಮ ಹಣ ವರ್ಗಾವಣೆಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂದು ಇ.ಡಿ. ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.