Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Team Udayavani, Dec 20, 2024, 11:25 AM IST
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮಾಜಿ ಸಚಿವ ಸಿ.ಟಿ ರವಿ ನಡುವಿನ ಮಾತಿನ ಚಕಮಕಿ ಇದೀಗ ಹಲವು ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ದ ರವಿ ಅವರು ಅಶ್ಲೀಲ ಪದ ಪ್ರಯೋಗ ಮಾಡಿದ್ದಾರೆಂದು ಹೆಬ್ಬಾಳ್ಕರ್ ದೂರು ನೀಡಿದ್ದು, ಸಿ.ಟಿ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರದ ಘಟನೆ ಕಾರಣದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರು ಹಾಕಿದ್ದಾರೆ. “ನಾನು ರಾಜಕಾರಣದಲ್ಲಿ ಕೈಲಾದಷ್ಟು ಸಹಾಯ ಮಾಡಿಕೊಂಡು ಬಂದಿದ್ದೇನೆ. ಆದರೆ ವಿಧಾನ ಪರಿಷತ್ ಬುದ್ಧಿವಂತರ ಚಾವಡಿ. ಅಲ್ಲಿ ಎಲ್ಲರೂ ಧೃತರಾಷ್ಟ್ರರಾಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
“ನಾನು ಕೂಡ ಒಬ್ಬ ತಾಯಿ, ಅಕ್ಕ, ಅತ್ತೆ. ನನ್ನನ್ನು ನೋಡಿ ಸಾವಿರಾರು ಮಹಿಳೆಯರು ನೋಡಿ ನಾವು ರಾಜಕಾರಣಕ್ಕೆ ಬರಬೇಕು ಎಂದುಕೊಂಡಿರುತ್ತಾರೆ. ಆದರೆ ಸದನದಲ್ಲಿ ಆದ ಪರಿಸ್ಥಿತಿಯಲ್ಲಿ ಒಬ್ಬ ಮಹಿಳೆಗೆ ಈ ರೀತಿ ಅಪಮಾನ ಮಾಡಿದ್ದು ಸರಿಯಲ್ಲ ಎಂದು ಕಣ್ಣೀರು ಹಾಕಿದರು.
ಗುರುವಾರ ಆಗಿದ್ದೇನು?
ವಿಧಾನಪರಿಷತ್ತಿನ ಕಲಾಪ ಗುರುವಾರ ಆರಂಭಗೊಂಡು ಪ್ರಶ್ನೋತ್ತರ, ಶೂನ್ಯ ವೇಳೆ ಮುಗಿದ ಬಳಿಕ ಕಾಂಗ್ರೆಸ್ ಸದಸ್ಯರು ಅಮಿತ್ ಶಾ ಹೇಳಿಕೆ ಖಂಡಿಸಿ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ಮಾಡಿದ್ದು ಗದ್ದಲಕ್ಕೆ ಕಾರಣ ವಾಯಿತು. ಈ ಗದ್ದಲದ ವೇಳೆ ಸಿ.ಟಿ.ರವಿ ಅವರು ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಹೀಯಾಳಿಸಿದ್ದಕ್ಕೆ ಸಚಿವೆ ಲಕ್ಷ್ಮಿ ಹೆಬ್ಟಾಳ್ಕರ್ “ಕೊಲೆಗಾರ’ ಎಂದರು. ಇದಕ್ಕೆ ರವಿ ನೀಡಿದ ಹೇಳಿಕೆಯು ರಾದ್ಧಾಂತಕ್ಕೆ ಕಾರಣವಾಯಿತು. ತಮ್ಮ ಮೇಲೆ ಅಶ್ಲೀಲ ಪದ ಪ್ರಯೋಗ ಮಾಡಿದ್ದಾರೆಂದು ಸಚಿವೆ ಲಕ್ಷ್ಮಿ ಆರೋಪಿಸಿದರು.
ಇದು ಸದನದ ಒಳಗೂ- ಹೊರಗೂ ಪ್ರತಿ ಭಟನೆಗೆ ಕಾರಣವಾಗಿದ್ದಲ್ಲದೆ, ಸಭಾಪತಿಗೆ ದೂರನ್ನೂ ಕೊಂಡೊಯ್ಯಿತು. ಇನ್ನು ಈ ಪ್ರಕರಣ ವಿಧಾನಸಭೆಯಲ್ಲೂ ಸದ್ದು ಮಾಡಿದ್ದು, ಸ್ಪೀಕರ್ ಯು.ಟಿ. ಖಾದರ್ ಹಕ್ಕುಬಾಧ್ಯತಾ ಸಮಿತಿಗೆ ವಹಿಸಿದರು.
ವಿಧಾನ ಪರಿಷತ್‌ನಲ್ಲಿ ಸಿ.ಟಿ.ರವಿ ವಿರುದ್ಧ ಆರೋಪ ಕೇಳಿ ಬಂದಾಕ್ಷಣ ಗದ್ದಲಕ್ಕೆ ಕಾರಣವಾಯಿತು. ಆಗ 2 ಬಾರಿ ಕಲಾಪ ಮುಂದೂಡುವಂತಾಯಿತಲ್ಲದೆ, ಗದ್ದಲದ ನಡುವೆಯೇ ಮುಡಾ ವಿಧೇಯಕ ಅಂಗೀಕರಿಸಿ ಮತ್ತೆ ಕಲಾಪ ಮುಂದೂಡಲಾಯಿತು.
ಸಭಾಪತಿ ಕೊಠಡಿ ಎದುರು ಜಮಾವಣೆ: ಸದನ ಮುಂದೂಡಲ್ಪಟ್ಟರೂ ಸದನ ದೊಳಗೇ ಇದ್ದ ಸದಸ್ಯರು ಪರಸ್ಪರ ಘೋಷಣೆ ಕೂಗುತ್ತಿದ್ದರು. ಈ ವೇಳೆ ಸಿ.ಟಿ. ರವಿ ಹಾಗೂ ಲಕ್ಷ್ಮೀ ಹೆಬ್ಟಾಳ್ಕರ್ ನಡುವೆ ವಾಗ್ವಾದ ನಡೆದಿದ್ದು, ನೀವು ಕೊಲೆಗಾರರು ಎಂದು ರವಿಗೆ ಹೆಬ್ಟಾಳ್ಕರ್ ಹೇಳಿದರು. ಇದಕ್ಕೆ ಸಿ.ಟಿ. ರವಿ ಕೂಡ ತಿರುಗೇಟು ನೀಡಿದ್ದು, ಅಷ್ಟರಲ್ಲಿ ಲಕ್ಷ್ಮೀ ಹೆಬ್ಟಾಳಕ್ಕರ್ ಜೋರು ಧ್ವನಿಯಲ್ಲಿ ಸಿ.ಟಿ. ರವಿ ನನ್ನ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ, 10 ಬಾರಿ ಆ ಪದವನ್ನು ಬಳಸಿದ್ದಾರೆ ಎಂದು ಆಕ್ರೋಶ ಭರಿತರಾದರು. ಅಲ್ಲದೆ, “ನಿನಗೆ ಅಕ್ಕ-ತಂಗಿ ಇಲ್ಲವೇನೋ? ಮಗಳು ಇಲ್ಲವೇನೋ? ಹೆಂಡತಿ ಇಲ್ಲವೇನೋ?’ ಎಂದು ಏಕವಚನದಲ್ಲಿ ಮಾತನಾಡಿದ್ದನ್ನು ಬಿಜೆಪಿಯವರು ವಿಡಿಯೋ ಮಾಡಿಕೊಂಡಿದ್ದರು. ಬಳಿಕ ಸಿ.ಟಿ. ರವಿ ಸದನದಿಂದ ಹೊರ ನಡೆದಿ ದ್ದರು. ಬಳಿಕ ಕಾಂಗ್ರೆಸ್ ಸದಸ್ಯರು ಸಭಾಪತಿ ಕೊಠಡಿಯಲ್ಲಿ ಜಮಾಯಿಸಿದರು.
ನಾನು ಆ ರೀತಿ ಹೇಳಿಲ್ಲ: ಈ ವೇಳೆ ಸದನಕ್ಕೆ ಬಂದ ಸಿ.ಟಿ. ರವಿ, ನಾನು ಆ ರೀತಿ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದರು.
ಕಣ್ಣೀರು ಹಾಕಿದ ಹೆಬ್ಟಾಳ್ಕರ್: ವಿಧಾನಪರಿಷತ್ತಿನ ಸಭಾಂಗಣದಿಂದ ಕಣ್ಣೀರು ಹಾಕುತ್ತಲೇ ಸಭಾಪತಿ ಕೊಠಡಿಗೆ ಬಂದ ಹೆಬ್ಟಾಳ್ಕರ್ ಸಭಾಪತಿಗೆ ದೂರು ಕೊಟ್ಟರು. ಅಲ್ಲಿ ಸಚಿವ ಎಚ್.ಕೆ. ಪಾಟೀಲ್ ಇದ್ದರು. ಮಧ್ಯಾಹ್ನ 2 ಗಂಟೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಸಭಾಪತಿ ಕೊಠಡಿಗೆ ಬಂದು ಸಂದಾನ ನಡೆಸಿದರೂ ಫಲಪ್ರದವಾಗಿಲ್ಲ.
ದೂರು-ಪ್ರತಿ ದೂರು: ಸಂಜೆ 5.30ರ ವೇಳೆ ಮತ್ತೆ ಕಲಾಪ ಆರಂಭಗೊಂಡಿತು. ಆಗ ಘಟನೆ ಕುರಿತು ಇಬ್ಬರೂ ನೀಡಿದ ದೂರಿನ ಪ್ರತಿಯನ್ನು ಸಭಾಪತಿ ಬಸವರಾಜ ಹೊರಟ್ಟಿ ಓದಿ ಹೇಳಿ ದೃಢೀಕರಿಸಿದರು. ಸಿ.ಟಿ.ರವಿ ಅವರು ನನ್ನನು “ಪ್ರಾಸ್ಟಿಟ್ಯೂಟ್’ ಎಂದು ಕರೆದು ಅಸಹ್ಯ ಸನ್ನೆ ಮಾಡಿದರು ಎಂದು ಲಕ್ಷಿ¾à ಹೆಬ್ಟಾಳ್ಕರ್ ದೂರು ಕೊಟ್ಟರು. “ನೀವು ಬದುಕಿದ್ದಾಗಲೇ ಅಂಬೇಡ್ಕರ್ ಅವರನ್ನು ಸಾಯಿಸಿದವರು, ಫ್ರಸ್ಟ್ರೇಟ್’ ಆಗಿದ್ದೀರಿ’ ಎಂದು ನಾನು ಹೇಳಿದೆ ಎಂದು ಸಿ.ಟಿ. ರವಿ ದೂರಿನಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.