Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Team Udayavani, Dec 20, 2024, 12:29 PM IST
ಬಿಹಾರದ ಸರಕಾರಿ ಶಾಲೆಯೊಂದರಲ್ಲಿ ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂದಿದೆ, ಇಲ್ಲಿನ ವೈಶಾಲಿ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಮಕ್ಕಳ ಮಧ್ಯಾಹ್ನದ ಊಟದ ಮೊಟ್ಟೆಗಳನ್ನು ಕದಿಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ಡಿಸೆಂಬರ್ 12 ರಂದು ನಡೆದಿದ್ದು ಎನ್ನಲಾಗಿದ್ದು, ಅದೇ ಶಾಲೆಯ ಶಿಕ್ಷಕಿಯೊಬ್ಬರು ಪ್ರಾಂಶುಪಾಲರು ಮೊಟ್ಟೆ ಕದಿಯುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ, ಈ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಪ್ರಾಂಶುಪಾಲರ ವಿರುದ್ಧ ಮಕ್ಕಳ ಪೋಷಕರು ಭಾರಿ ಆಕ್ರೋಶ ಹೊರಹಾಕಿದ್ದಾರೆ.
ವಿಡಿಯೋದಲ್ಲಿ ಏನಿದೆ:
ಇನ್ನು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸರಕಾರಿ ಶಾಲೆಗೆ ಮಧ್ಯಾಹ್ನದ ಊಟವನ್ನು ತರಿಸಿದ್ದಾರೆ ಈ ವೇಳೆ ಪ್ರಾಂಶುಪಾಲರು ಊಟ ತಂದ ವಾಹನ ಚಾಲಕನ ಬಳಿ ನಿಂತಿರುವುದು ಕಾಣಬಹುದು ಅಲ್ಲದೆ ಚಾಲಕ ಟೆಂಪೋದ ಒಳಗಿಂದ ಟ್ರೈಯಲ್ಲಿರುವ ಮೊಟ್ಟೆಗಳಲ್ಲಿ ಕೆಲವೊಂದು ಮೊಟ್ಟೆಗಳನ್ನು ಚೀಲಕ್ಕೆ ತುಂಬಿ ಪ್ರಾಂಶುಪಾಲರ ಕೈಗೆ ಕೊಡುವುದು ಕಾಣುತ್ತದೆ. ಆದರೆ ಇಲ್ಲಿ ಮತ್ತೊಂದು ವಿಷೆಯ ಏನೆಂದರೆ ಟ್ರೈ ಯಲ್ಲಿ ತುಂಬಾ ಮೊಟ್ಟೆಗಳು ಇರುವುದು ಕಾಣುತ್ತದೆ ಆದರೆ ಅದರಲ್ಲಿ ಕೆಲವೊಂದು ಮೊಟ್ಟೆಗಳನ್ನು ಮಾತ್ರ ಚೀಲಕ್ಕೆ ಹಾಕಿ ಕೊಟ್ಟಿರುವುದು ಮಾತ್ರ ಸಂಶಯಕ್ಕೆ ಎಡೆ ಮಾಡಿದೆ.
बिहार के स्कूलों में बच्चों के मिड डे मील का प्रोटीन अब प्रिंसिपल साहब के काम आ रहा है! 🍳😂
अंडे चुराते हुए पकड़े गए, शिक्षा का मंदिर तो बना दिया, लेकिन आचरण का पाठ पढ़ना भूल गए!#EggScandal #MidDayMeal #PrincipalSahabKeKarname @EduMinOfIndia@BiharEducation @NitishKumar pic.twitter.com/4qyvAg6reQ— Sushant Pandey “Sudarshan News” (@isushant_pandey) December 18, 2024
ಬಿಹಾರದ ವೈಶಾಲಿಯ ಲಾಲ್ಗಂಜ್ ಬ್ಲಾಕ್ನಲ್ಲಿರುವ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾಲೆಯ ಪ್ರಾಂಶುಪಾಲ ಸುರೇಶ್ ಸಹಾನಿ ಅವರ ವಿರುದ್ಧ ಶಿಕ್ಷಣ ಇಲಾಖೆಯು ನೊಟೀಸ್ ಜಾರಿ ಮಾಡಿದ್ದು, ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರ ವಿರುದ್ಧ ಎಫ್ ಐಆರ್ ಏಕೆ ದಾಖಲಿಸಬಾರದು ಎಂದು ಹೇಳಿ ಕೂಡಲೇ ನೊಟೀಸ್ ಗೆ ಉತ್ತರಿಸುವಂತೆ ಹೇಳಿದೆ.
ಇನ್ನು ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲರು ಇದು ಸುಳ್ಳು ನಾನು ಮೊಟ್ಟೆಗಳನ್ನು ಕದ್ದಿಲ್ಲ ಬದಲಾಗಿ ಮಧ್ಯಾಹ್ನದ ಊಟ ತಂದಿರುವ ವಾಹನ ಚಾಲಕನ ಬಳಿ ಮೊಟ್ಟೆಗಳನ್ನು ಪಡೆದುಕೊಂಡು ಶಾಲೆಯಲ್ಲಿದ್ದ ಅಡುಗೆಯವರಿಗೆ ನೀಡಿರುವುದಾಗಿ ಹೇಳಿದ್ದಾರೆ.
ಈ ಕುರಿತು ಅಡುಗೆಯವರನ್ನು ಕೇಳಿದರೆ ಪ್ರಾಂಶುಪಾಲರು ಮೊಟ್ಟೆಯ ಚೀಲವನ್ನು ನಮ್ಮ ಕೈಯಲ್ಲಿ ಕೊಟ್ಟು ಪ್ರಾಂಶುಪಾಲರ ಕಚೇರಿಯಲ್ಲಿ ಇಡುವಂತೆ ಹೇಳಿದ್ದಾರೆ ಹಾಗಾಗಿ ನಾವು ಮೊಟ್ಟೆಯ ಚೀಲವನ್ನು ಪ್ರಾಂಶುಪಾಲರ ಕಚೇರಿಯಲ್ಲಿ ಇಟ್ಟು ಬಂದಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ, ಈಗ ಮತ್ತೆ ಆರೋಪ ಪ್ರಾಂಶುಪಾಲರ ಮೇಲೆ ಬಂದಿದ್ದು ಇದನ್ನು ಪ್ರಾಂಶುಪಾಲರು ಒಪ್ಪಿಕೊಳ್ಳುತ್ತಾರಾ ಎಂದು ಕಾದು ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.