Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್!
ಪಡೀಲ್ ಡಿಸಿ ಕಚೇರಿ ಬಳಿ ಕೃತಕ ನೆರೆಗೆ ಆಹ್ವಾನ; ಸ್ಥಳೀಯರಿಂದ ಆಕ್ಷೇಪ
Team Udayavani, Dec 20, 2024, 12:58 PM IST
ಮಹಾನಗರ: ಪಡೀಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಹೊಂದಿಕೊಂಡಂತೆ ಮಳೆ ನೀರು ಹರಿದು ಹೋಗುವ ಕಾಲುವೆಗೆ ಪೈಪ್ ಅಳವಡಿಸಿ ಕಾಲುವೆ ಗಾತ್ರವನ್ನು ಕಿರಿದು ಮಾಡುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದ್ದು, ಇದರಿಂದ ಮಳೆಗಾಲದಲ್ಲಿ ಪಡೀಲ್‌ನಲ್ಲಿ ಕೃತಕ ನೆರೆ ಉಂಟಾಗುವ ಭೀತಿ ಎದುರಾಗಿದೆ.
ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಹಾಗೂ ಸುತ್ತಲಿನ ಪ್ರದೇಶ ತಗ್ಗಿನಲ್ಲಿದೆ. ಮರೋಳಿ, ಕೆಂಬಾರ್, ಅಳಪೆ ಮೊದಲಾದ ಎತ್ತರ ಪ್ರದೇಶದಿಂದ ಹರಿದು ಬರುವ ನೀರು ಇದೇ ರಾಜಕಾಲುವೆ ಮೂಲಕ ಹರಿದು ಹೋಗುತ್ತದೆ. ಪಡೀಲ್ ಭಾಗದಲ್ಲಿರುವ ಪ್ರಮುಖ ಕಾಲುವೆಗಳಲ್ಲಿ ಇದೂ ಒಂದಾಗಿದೆ. ಭಾರಿ ಮಳೆಯ ಸಂದರ್ಭದಲ್ಲಿ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತದೆ. ಆದರೆ ಇದೀಗ ಕಾಲುವೆಗೆ ಸ್ಮಾರ್ಟ್ ಸಿಟಿಯ 2ನೇ ಹಂತದ ಕಾಮಗಾರಿಯ ಭಾಗವಾಗಿ ಪೈಪ್ ಅಳಡಿಸಲಾಗಿದ್ದು, ಇದರಿಂದ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಅಡ್ಡಿ ಪಡಿಸಿದಂತಾಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.
ಜಿಲ್ಲಾಧಿಕಾರಿ ಕಚೇರಿಗೆ ನೆರೆ?
ರಾಜಕಾಲುವೆಗೆ ಪೈಪ್ ಅಳವಡಿಸಿದ ಕಾರಣ ಮುಂದಿನ ದಿನಗಳಲ್ಲಿ ನಗರದ ಇತರ ಪ್ರದೇಶಗಳಂತೆ ಪಡೀಲ್ ಕೂಡ ಕೃತಕ ನೆರೆ ಆವೃತ ಪ್ರದೇಶಗಳ ಪಟ್ಟಿಗೆ ಸೇರಬಹುದಾ ಎನ್ನುವ ಆತಂಕ ಉಂಟಾಗಿದೆ. ಇಲ್ಲಿಯವರೆಗೆ ಯಾವುದೇ ಸಮಸ್ಯೆ ಇಲ್ಲದೆ ಸರಾಗವಾಗಿ ನೀರು ಹರಿದು ಹೋಗುತ್ತಿತ್ತು. ನೀರು ಹರಿಯುವ ಹಾದಿಗೆ ಇದೀಗ ಪೈಪ್ ಅಳವಡಿಸಿ ಜಿಲ್ಲಾಧಿಕಾರಿ ಕಚೇರಿಯ ಅವರಣದೊಳಗೂ ನೆರೆ ಉಕ್ಕಿ ಹರಿಯುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಡೀಲ್ – ಪಂಪ್‌ವೆಲ್ ಮುಖ್ಯ ರಸ್ತೆಯ ಅಡಿಭಾಗದಲ್ಲೇ ಈ ರಾಜ ಕಾಲುವೆ ಹಾದು ಹೋಗುತ್ತದೆ. ಕೃತಕ ನೆರೆಯಿಂದ ರಸ್ತೆಯೂ ಮುಳುಗಡಯಾಗಿ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯೂ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪರಿಶೀಲನೆ ಬಳಿಕವೇ ಅಳವಡಿಕೆ: ಸ್ಮಾರ್ಟ್‌ಸಿಟಿ
ಕಾಲುವೆಯ ಒಟ್ಟು ಸುತ್ತಳತೆ, ನೀರು ಹರಿಯುವ ಪ್ರಮಾಣ ಇತ್ಯಾದಿಗಳನ್ನು ಪರಿಶೀಲನೆ ಮಾಡಿ, ಲೆಕ್ಕಾಚಾರ ನಡೆಸಿಯೇ ಪೈಪ್ ಅಳವಡಿಸಲಾಗುತ್ತಿದೆ. ಜತೆಗೆ ಡಿಸಿ ಕಚೇರಿ ಆವರಣದ ಒಳಭಾಗದಲ್ಲಿ ಮ್ಯಾನ್ ಹೋಲ್‌ಗಳನ್ನು ಇರಿಸಲಾಗಿದ್ದು, ಇದರಿಂದಾಗಿ ಒಂದು ವೇಳೆ ಒಳಗೆ ನೀರು ಬ್ಲಾಕ್ ಆದರೆ ಅದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ವ್ಯವಸ್ಥೆಯಿದೆ. ಪ್ರಸ್ತುತ ಅಳವಡಿಸಿರುವ ಪೈಪ್ 1,200 ಮೀ.ಮೀ. ವ್ಯಾಸ ಹೊಂದಿದೆ. ಇದು ತೋಡಿನ ಒಟ್ಟು ವಿಸ್ತೀರ್ಣಕ್ಕೆ ಸಮನಾಗಿದೆ. ಆದ್ದರಿಂದ ಕೃತಕ ನೆರೆಯ ಸಮಸ್ಯೆ ಉಂಟಾಗದು ಎನ್ನುವುದು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಮಾತು.
-ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ
Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.