Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

ಕರ್ನಲ್‌ ಬೈಲಿ ಕಾರಾಗೃಹ ಬ್ರಿಟಿಷ್‌ ಸೇನಾಧಿಕಾರಿಗಳ ಸೆರೆಯ ಚಿತ್ರಣವನ್ನು ತೆರೆದಿಡುತ್ತದೆ

Team Udayavani, Dec 20, 2024, 4:02 PM IST

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

ಶ್ರೀರಂಗಪಟ್ಟಣ ಹಲವು ಧಾರ್ಮಿಕ ಕ್ಷೇತ್ರಗಳ ಜೊತೆಗೆ ವಿವಿಧ ಪ್ರವಾಸಿ ತಾಣಗಳನ್ನು ಹೊಂದಿರುವಂಥ ಪ್ರದೇಶ. ಇಲ್ಲಿರುವ ಒಂದೊಂದು ಐತಿಹಾಸಿಕ ಸ್ಥಳಗಳೂ ಒಂದೊಂದು ಇತಿಹಾಸಗಳನ್ನು ಹೇಳುತ್ತವೆ. ಜಾಮೀಯಾ ಮಸೀದಿ ಟಿಪ್ಪು ಆಡಳಿತಕ್ಕೆ ಸಾಕ್ಷಿಯಾಗಿದ್ದರೆ, ಕರ್ನಲ್‌ ಬೈಲಿ ಕಾರಾಗೃಹ ಬ್ರಿಟಿಷ್‌ ಸೇನಾಧಿಕಾರಿಗಳ ಸೆರೆಯ ಚಿತ್ರಣವನ್ನು ತೆರೆದಿಡುತ್ತದೆ. ಅದೇರೀತಿ “ಟಿಪ್ಪು ಡೆತ್‌ ಪ್ಲೇಸ್‌’ ಕೊನೆಯ ಸಂಗ್ರಾಮವನ್ನು ಸಾರುತ್ತಿದೆ. ಹೀಗೆ… ಮದ್ದಿನ ಮನೆ, ಟಿಪ್ಪು ಸಮಾಧಿ, ಬೇಸಿಗೆ ಅರಮನೆ ಆಗಿನ ಕಾಲದ ಇತಿಹಾಸದ ಕುರುಹುಗಳಾಗಿ ಉಳಿದಿವೆ.

ಹಲವಾರು ಐತಿಹಾಸಿಕ ಸ್ಥಳಗಳ ತವರೂರಾಗಿರುವ ಶ್ರೀರಂಗಪಟ್ಟಣದಲ್ಲಿ ಜಾಮೀಯಾ ಮಸೀದಿ ಕೂಡ ತನ್ನದೇ ಆದ ಐತಿಹ್ಯವನ್ನು ಹೊಂದಿರುವ ಸ್ಥಳ. ಕ್ರಿ.ಶ.1787ರಲ್ಲಿ ನಿರ್ಮಿಸಲ್ಪಟ್ಟ ಈ ಮಸೀದಿ ಶ್ರೀರಂಗಪಟ್ಟಣದ ಮುಖ್ಯ ದ್ವಾರದಲ್ಲೇ ಟಿಪ್ಪು ಸುಲ್ತಾನ್‌ ಆಳ್ವಿಕೆಯ ಹೆಗ್ಗುರುತಾಗಿ ನಿಂತಿದೆ. ಈ ಮಸೀದಿ ಕೋಟೆಯ ಪೂರ್ವ ಭಾಗದಲ್ಲಿ ಬೆಂಗಳೂರು ದ್ವಾರದ ಸಮೀಪದಲ್ಲಿದೆ. ಇದು ಸೊಗಸಾದ ಕಟ್ಟಡವಾಗಿದ್ದು, ಘನವಾಗಿಯೂ, ರಮ್ಯವಾಗಿಯೂ ಕಾಣುವ ಎರಡು ಉನ್ನತ ಮಿನಾರುಗಳನ್ನು ಹೊಂದಿದೆ. ಈ ಮಿನಾರುಗಳ ತುದಿಗೇರಲು ಮೆಟ್ಟಿಲುಗಳಿವೆ. ದಿವ್ಯಜ್ಞಾನ ಬೆಳಕಿನ ಪ್ರತೀಕವಾದ ಮೆಹ್ರಾಬ್‌ ಅನ್ನು ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ರೂಪಿಸಲಾಗಿದೆ. ಇಲ್ಲಿ ಸುಂದರವಾದ ಅಕ್ಷರಗಳಲ್ಲಿ ಬರೆದಿರುವ ಐದು ಪರ್ಶಿಯನ್‌ ಶಾಸನಗಳಲ್ಲಿ ಒಂದು ಶಾಸನ ಈ ಮಸೀದಿಯ ನಿರ್ಮಾಣ ಕಾಲವನ್ನು ಉಲ್ಲೇಖಿಸುತ್ತದೆ. ಪ್ರತಿ ದಿನ ಪ್ರವಾಸಿಗರು ಆಗಮಿಸಿ ವೀಕ್ಷಣೆ ಮಾಡುತ್ತಾರೆ. (ಈ ಹಿಂದೆ ಈ ಜಾಮೀಯಾ ಮಸೀದಿ ಮೂಡಲ ಆಂಜನೇಯ ದೇವಾಲಯವಾಗಿತ್ತು. ಕೋಟೆ ಮುಂಭಾಗವಾಗಿದ್ದರಿಂದ ಟಿಪ್ಪು ಸುಲ್ತಾನ್‌ ಆಂಜ ನೇಯ ದೇವಾಲಯದ ಮೇಲೆಯೇ ಮಸೀದಿ ನಿರ್ಮಿಸಿದ್ದಾನೆಂಬುದು ಇತಿಹಾಸದಲ್ಲಿರುವ ಉಲ್ಲೇಖ. ಮೂಡಲ ಆಂಜನೇಯ ದೇವಾಲಯ ಎಂಬುದಕ್ಕೆ ಕೆಳಭಾಗದ ಗೋಡೆ ಕುರುಹುಗಳಿದ್ದು, ಜ್ಯೋತಿ ಮಹೇಶ್ವರ ಸ್ವಾಮಿ ದೇವಾಲಯದ ಬಳಿ ಇಲ್ಲಿನ ದೇವ ರನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಪ್ರಸ್ತುತ ಹಿಂದೂಪರ ಸಂಘಟನೆಗಳು ಜನರ ಗಮನಕ್ಕೆ ತರಲಾರಂಭಿಸಿದ್ದು, ಪ್ರಸ್ತುತ ಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ.)

ಕರ್ನಲ್‌ ಬೈಲಿಯ ಕಾರಾಗೃಹ
ಈ ಕಾರಾಗೃಹವು ರಂಗನಾಥಸ್ವಾಮಿ ದೇವಾಲಯದ ಉತ್ತರಕ್ಕಿದ್ದು, ಟಿಪ್ಪುವಿನ ಅರಮನೆಗೆ ಸನಿಹದಲ್ಲಿದೆ. ಸುಲ್ತಾನ್‌ ಬತೇರಿಯ ಹಿಂಭಾಗದಲ್ಲಿರುವ ಸಾರಿಗತ್ತಿನಿಂದ ನಿರ್ಮಿಸಲ್ಪಟ್ಟ ಈ ಸೆರೆಮನೆ 30.5 ಮೀ. ಉದ್ದ ಮತ್ತು 122 ಮೀ. ಅಗಲವಾಗಿದೆ. ಮನೆಯ
ಪೂರ್ವ, ಉತ್ತರ ಹಾಗೂ ಪಶ್ಚಿಮ ಗೋಡೆಗಳಲ್ಲಿ ರಂಧ್ರ ಕೊರೆದ ಕಲ್ಲಿನ ಚಪ್ಪಡಿಗಳನ್ನು ಹೊಂದಿಸಲಾಗದ್ದು, ಅವುಗಳಿಗೆ ಕೈದಿಗಳನ್ನು ಸರಪಳಿಗಳಿಂದ ಬಂಧಿಸಲಾಗುತ್ತಿತ್ತು. 1782ರಲ್ಲಿ ಇಲ್ಲಿಯೇ ಮೃತಪಟ್ಟ ಬ್ರಿಟಿಷ್‌ ಸೇನಾನಿ ಕರ್ನಲ್‌ ಬೈಲಿ ಹೆಸರಿನಲ್ಲಿ ಕರೆಯಲ್ಪಡುವ ಈ ಸೆರೆಮನೆಯಲ್ಲಿ ಕ್ಯಾಪ್ಟನ್‌ ಟೈಡರ್‌, ಕರ್ನಲ್‌ ಬ್ರಿಸ್ವೈಟ್‌ ಸಾಮ್ರನ್‌, ಫೈಜರ್‌, ಲಿಂಡ್‌ ಹಾಗೂ ಕ್ಯಾಪ್ಟನ್‌ ರುಚಿ  ಎಂಬ ಬ್ರಿಟಿಷ್‌ ಸೇನಾಧಿಕಾರಿಗಳನ್ನು ಟಿಪ್ಪು ಬಂಧಿಸಿ ಇಲ್ಲಿ ಸೆರೆ ಇಟ್ಟಿದ್ದನು. ಪಿರಂಗಿ ಬಿದ್ದು, ಕಾರಾಗೃಹದ ಮಧ್ಯದಲ್ಲಿ
ರಂಧ್ರವಿರುವ ಕುರುಹು ಈಗಲೂ ಇದೆ.

ಟಿಪ್ಪು ಮಡಿದ ಸ್ಥಳದ ವಿಶೇಷ
ಕಾರಾಗೃಹದ ಬಳಿಕ ಅದೇ ರಸ್ತೆಯಲ್ಲಿ ಪೂರ್ವಕ್ಕೆ ಮುಂದು ವ ರಿ ದರೆ ಟಿಪ್ಪು ಸುಲ್ತಾನ್‌ ಮಡಿದ ಸ್ಥಳ ಸಿಗುತ್ತದೆ. ಮೇ 4ರ 1799ರಲ್ಲಿ ಬ್ರಿಟಿಷರ ಜತೆ ನಡೆದ ಮೈಸೂರಿನ ನಾಲ್ಕನೇ ಯುದ್ಧ ಹಾಗೂ ಕೊನೆಯ ಸಂಗ್ರಾಮದಲ್ಲಿ ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕಿದ ಬ್ರಿಟಿಷ್‌ ಸೈನ್ಯ ಮಹತ್ವ ಪೂರ್ಣವಾಗಿ ನೀರಿನ ಅಗಸೆ ಬಳಿ ಕೋಟೆ  ಪ್ರವೇಶಿಸಿ, ಟಿಪ್ಪುವಿನೊಂದಿಗೆ ಯುದ್ಧ
ಸಾರಿತ್ತು. ವೀರಾವೇಶದ ಟಿಪ್ಪು ಸ್ವಾಭಿಮಾನದಿಂದ ಶತ್ರು ಸೈನ್ಯದೊಂದಿಗೆ ಹೋರಾಡಿ ರಣಾಂಗಣದಲ್ಲಿಯೇ ಒಬ್ಬ ಸೈನಿಕನ ಗುಂಡಿಗೆ ಬಲಿಯಾಗಿ ಮರಣವನ್ನಪ್ಪಿದ. ಅವರ ಮೃತ ದೇಹ ಮೃತ ಸೈನಿಕರೊಂದಿಗೆ ಸೇ ರಿಕೊಂಡಿತ್ತು. ಟಿಪ್ಪು ಮೃತನಾದ ನಂತರ ಆತನ ಶವ ಹುಟುಕಾಟ  ನಡೆಸುತ್ತಿದ್ದ ವೇಳೆ, ಈ ಸ್ಥಳದಲ್ಲಿ ಪತ್ತೆಯಾಗಿತ್ತು. ಟಿಪ್ಪು ಸುಲ್ತಾನ್‌ ಮಡಿದು ಮೃತ ದೇಹ
ಸಿಕ್ಕ ಸ್ಥಳವನ್ನೇ ಟಿಪ್ಪು ಡೆತ್‌ ಪ್ಲೇಸ್‌ ಎಂದು ಕರೆಯುವುದುಂಟು. ಇಂದಿಗೂ ಈ ಸ್ಥಳ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಮದ್ದಿನ ಮನೆಗಳು ಪಟ್ಟಣದ ಸುತ್ತಲೂ ಆಯಾ ಕಟ್ಟಿನ ಬತ್ತೇ ರಿ ಗಳ ಬಳಿ 9 ಮದ್ದಿನ ಮನೆಗಳನ್ನು ನಿರ್ಮಿಸಲಾಗಿದೆ. ಸುಮಾರು ಎಲ್ಲಾ ದಿಕ್ಕುಗಳಲ್ಲಿ 9 ಮದ್ದಿನ ಮನೆಗಳ ಕುರುಹುಗಳಿವೆ. 20ರಿಂದ 30 ಅಡಿ ಆಳ ಹಾಗೂ 40ರಿಂದ 50 ಅಡಿ ಅಗಲವಾಗಿ 4 ಅಡಿ ಅಗಲದ ಗೋಡೆ ನಿರ್ಮಿಸಿ ಅದಕ್ಕೆ ಚಿಕ್ಕ ಕಿಟಕಿ ಕಬ್ಬಿಣದ ಬಾಗಿಲಿನಿಂದ ಭದ್ರತೆಗೊಳಿಸಲಾಗಿದೆ. ಶ್ರೀರಂಗಪಟ್ಟಣ ಕೋಟೆಯಲ್ಲಿ ಫಿರಂಗಿಗಳನ್ನು ಬಳಸುವ ಪದ್ಧತಿ ಒಂದನೇ ರಣಧೀರ ಕಂಠೀರವ ನರಸರಾಜ ಒಡೆಯರ್‌  ಕಾ ಲದಿಂದ ಆರಂಭ  ಎನ್ನುವ ಪದ್ಧತಿಯಲ್ಲಿತ್ತೆಂಬುದು ಇತಿಹಾಸದಿಂದ ತಿಳಿದುಬಂದಿದೆ. ನಶಿಸುತ್ತಿದ್ದ ಮದ್ದಿನ ಮನೆಗಳ ಪುನರ್‌ ಜೀರ್ಣೋದ್ಧಾರ ಕಾರ್ಯ ಇದೀಗ ಪುರಾತತ್ವ ಇಲಾಖೆ ಸಹಯೋಗದಲ್ಲಿ ನಡೆಸಲಾಗಿದೆ. ಈ ಹಿಂದೆ ಯುದ್ಧದ ಸಮಯದಲ್ಲಿ
ಮದ್ದಿನ ಮನೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗುತ್ತಿತ್ತು. ಈಗಲು ಪ್ರವಾಸಿಗರು ಮದ್ದಿನ ಮನೆಗಳಿರುವ
ಕಡೆ ವೀಕ್ಷಣೆ ಮಾಡಲು ಬರುತ್ತಾರೆ.

ಪುರಾತತ್ವ, ಸರ್ವೇಕ್ಷಣಾ ಇಲಾಖೆ ಉಸ್ತುವಾರಿಯಲ್ಲಿ ಗುಂಬಸ್‌ ಟಿಪ್ಪು ಮತ್ತು ಆತನ ತಂದೆ-ತಾಯಿಯರ ಸಮಾಧಿ ಸ್ಥಳ ಗುಂಬಸ್‌ ಈಗ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ಉಸ್ತುವಾರಿಯಲ್ಲಿದೆ. 36 ಕಂಬಗಳ ಈ ಸ್ಮಾರಕ ನೆಲಮಟ್ಟದಿಂದ ಸುಮಾರು 80 ಅಡಿಗಳಷ್ಟು ಎತ್ತರದಲ್ಲಿದೆ. ಕಪ್ಪು ಅಮೃತ ಶಿಲೆಯಿಂದ ಕಡೆದಿರುವ ಕಂಬಗಳು ಈಗಲೂ ಹೊಳೆಯುತ್ತವೆ.
ಮಧ್ಯದಲ್ಲಿ ಅರೇಬಿಕ್‌ ಶೈಲಿಯ ಕುಸುರಿ ಕಲೆಗಳಿವೆ. ಟಿಪ್ಪು ಸುಲ್ತಾನ್‌ ಮತ್ತು ಹೈದರ್‌ ಅಲಿ ಒಟ್ಟು 36 ವರ್ಷಗಳ ಕಾಲ ಇಲ್ಲಿ ಆಡಳಿತ ನಡೆಸಿದರೆಂಬ ಹಿನ್ನೆಲೆಯಲ್ಲಿ 36 ಕಂಬಗಳನ್ನು ನಿಲ್ಲಿಸಿ ಚುರುಕಿಗಾರೆಯಲ್ಲಿ ಗುಂಬಸ್‌ ನಿರ್ಮಿಸಲಾಗಿದೆ ಎಂದು ತಜ್ಞರು ಹೇಳುತ್ತಾರೆ. ಪ್ರತಿ ಕಂಬಗಳ ಮೇಲೆ ವಿಶಿಷ್ಟ ಕುಸುರಿ ಕೆತ್ತನೆಗಳಿವೆ. ಅವುಗಳನ್ನು ನೋಡುವುದೇ ಒಂದು ವಿಶಿಷ್ಠ ಅನುಭವ.

ಪ್ರವಾಸಿಗರ ಕಣ್ಮನ  ಸೆಳೆಯುವ ಟಿಪ್ಪು ಬೇಸಿಗೆ ಅರಮನೆ

ಕರ್ನಾಟಕದ ಇತಿಹಾಸದಲ್ಲಿ ಟಿಪ್ಪು ಸುಲ್ತಾನನದ್ದು ದೊಡ್ಡ ಹೆಸರು. ಮೈಸೂರು ಹುಲಿ ಎಂದೇ ಹೆಸರಾಗಿದ್ದ ಟಿಪ್ಪು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ. ಟಿಪ್ಪು ಕಾಲದ ಯುದ್ಧಗಳು, ರಾಕೆಟ್‌ ತಯಾರಿಸುವ ತಂತ್ರಜ್ಞಾನ, ಅವುಗಳ ಬಳಕೆ ಇತ್ಯಾದಿಗಳಿಂದ ಟಿಪ್ಪು
ಆಡಳಿತ ಮೈಸೂರಿನ ಇತಿಹಾಸದ ಒಂದು ಪ್ರಮುಖ ಘಟ್ಟ. ಹವಾಮಾನಕ್ಕೆ ಅನುಗುಣ ಗಿ ಆತ ಎರಡು ಸುಂದರ ಅರಮನೆಗಳನ್ನು
ನಿರ್ಮಿಸಿದ್ದ. ರಂಗನಾಥ ಸ್ವಾಮಿ ದೇಗುಲ ಎದುರಿಗೆ ಒಂದು ಅರಮನೆ (ಲಾಲ್‌ ಮಹಲ್‌ ಅರಮನೆ) ನಿರ್ಮಿಸಿದ್ದನು. ಆಡಳಿತ
ಕೇಂದ್ರವಾಗಿದ್ದ “ಲಾಲ್‌ ಮಹಲ್‌ ಅರಮನೆ’ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ (1799) ದಲ್ಲಿ ಬ್ರಿಟಿಷರ ದಾಳಿಯಿಂದ ನುಚ್ಚು ನೂರಾಗಿ ಇಂದು ಅದರ ಅವಶೇಷಗಳು ಮಾತ್ರ ಉಳಿದಿವೆ.

ಇನ್ನು ಎರಡನೇ ಆಂಗ್ಲೋ-ಮೈಸೂರು ಯುದ್ಧದ ಗೆಲುವಿನ ನೆನಪಿಗಾಗಿ 1784ರಲ್ಲಿ ಟಿಪ್ಪು ಬೇಸಿಗೆ (ದರಿಯಾ ದೌಲತ್‌ ಬಾಗ್‌ ) ಅರಮನೆ ನಿರ್ಮಿಸಿದ್ದ ಎಂದು ಇತಿಹಾಸ ಹೇಳುತ್ತದೆ. ಶೇ.90ರಷ್ಟು ಸಾಗುವಾನಿ ಮರಗಳನ್ನು ಬಳಸಿ ನಿರ್ಮಿಸಿದ “ದರಿಯಾ ದೌಲತ್‌’ ಹೆಸರಿನ ಬೇಸಿಗೆ ಅರಮನೆ ಕಾವೇರಿ ನದಿ ದಂಡೆಯಲ್ಲಿ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. “ಸಮುದ್ರ ಸಂಪತ್ತು’ ಎಂಬ ಅರ್ಥ ಕೊಡುವ ದರಿಯಾ ದೌಲತ್‌ ಬಾಗ್‌ ಪೂರ್ವ ಮತ್ತು ಪಶ್ಚಿಮದ ಗೋಡೆಗಳ ಮೇಲಿನ ಅಪೂರ್ವ ಚಿತ್ರಗಳು ಇಲ್ಲಿನ ಪ್ರಮುಖ ಆಕರ್ಷಣೆ. ಪೂರ್ವ ಗೋಡೆ ಮೇಲೆ ಟಿಪ್ಪು ಸಮಕಾಲೀನರಾದ ಮುಮ್ಮಡಿ ಕೃಷ್ಣರಾಜ ಒಡೆಯರ್‌, 2ನೇ ಬಾಲಾಜಿರಾವ್‌ ಪೇಶ್‌, ಮಾಗಡಿಯ 5ನೇ ಕೆಂಪೇಗೌಡ,
ಚಿತ್ರದುರ್ಗದ ಮದಕರಿ ನಾಯಕ, ತಂಜಾವೂರಿನ ರಾಜ, ಚಿತ್ತೂರಿನ ರಾಣಿ ಮೊದಲಾದವರ ದರ್ಬಾರ್‌ ಸನ್ನಿವೇಶಗಳು, ಒಪ್ಪಂದಗಳು, ರಾಜ ಪ್ರತಿನಿಧಿಗಳ ಸ್ವಾಗತ ದೃಶ್ಯಗಳನ್ನು ಬಿಂಬಿಸುವ ಚಿತ್ರಗಳನ್ನು ನೈಸರ್ಗಿಕ ಬಣ್ಣಗಳಿಂದ ಚಿತ್ರಿಸಲಾಗಿದೆ..

ಕಾಲಾಳು, ಆನೆ, ಅಶ್ವದಳಗಳ ಜತೆಯಲ್ಲಿ ಯುದ್ಧಕ್ಕೆ ತೆರಳುತ್ತಿರುವ ದೃಶ್ಯದ ಚಿತ್ರ ಪಶ್ಚಿಮದ ಗೋಡೆ ಮೇಲಿದೆ. ಚಿತ್ರದಲ್ಲಿನ ಯುದ್ಧದ ಸನ್ನಿವೇಶಗಳು ನೈಜ ದೃಶ್ಯಗಳೇನೋ ಅನ್ನಿಸುವಷ್ಟು ಸಹಜವಾಗಿವೆ. ಬ್ರಿಟಿಷ್‌ ಸೈನಿಕರು ಆಧುನಿಕ ಶಸ್ತ್ರಾಸ್ತ್ರಗಳ ಜತೆ ಕರ್ನಲ್‌ ಬೇಮ್ಲಿಯ ರಕ್ಷಣೆಗೆ ನಿಂತಿರುವುದು ಕಂಡುಬರುತ್ತದೆ. ಕ್ರಿ.ಶ. 1800ರಲ್ಲಿ ಬ್ರಿಟಿಷ್‌ ಕಲಾವಿದ ಸರ್‌. ರಾಬರ್ಟ್‌ ಪೋರ್ಟರ್‌ ಚಿತ್ರಿಸಿರುವ 1799ರ ಮೇ 4ರ “ಶ್ರೀರಂಗಪಟ್ಟಣ ಪತನ’ ಕುರಿತ ಚಿತ್ರದ ವಿವರಗಳು ಇವತ್ತಿಗೂ ಕಣ್ಣಿಗೆ ಕಟ್ಟುತ್ತವೆ.

ಟಿಪ್ಪು ಸಮಾಧಿ ಗುಂಬಸ್‌ ಎಂಬುದು ಇಂದಿಗೂ ಅದ್ಭುತ
1799ರಲ್ಲಿ ಬ್ರಿಟಿಷರ ಜತೆ ಸ್ವಾಭಿಮಾನದಿಂದ ಹೋರಾಡಿ ರಣಾಂಗಣದಲ್ಲಿಯೇ ಮರಣವನ್ನಪ್ಪಿದ ಟಿಪ್ಪು ಸುಲ್ತಾನ್‌ ಮೈಸೂರು ಹುಲಿ ಎಂದೇ ಪ್ರಖ್ಯಾತಿ ಪಡೆದಿದ್ದನು. ಟಿಪ್ಪು ಸುಲ್ತಾನ್‌ ದೊಡ್ಡ ಸೇನಾನಿಯಷ್ಟೇ ಅಲ್ಲ ಸಮರ್ಥ ಆಡಳಿತಗಾರನೂ ಆಗಿದ್ದ. ಟಿಪ್ಪು ಸುಲ್ತಾನ್‌ ಕಾಲದಲ್ಲಿ ನಿರ್ಮಾಣವಾದ ಹಲವು ಕಟ್ಟಡಗಳು ಈಗ ಗತವೈಭವದ ನೆನಪುಗಳಾಗಿ ಉಳಿದಿವೆ. ಅನೇಕ
ಸ್ಮಾರಕಗಳ ಹಿಂದೆ ಒಂದೊಂದು ಕಥೆ ಇದೆ. ಈ ಸ್ಮಾರಕಗಳು ನಿಸರ್ಗ ಸಹಜ ಒತ್ತಡಕ್ಕೆ ಸಿಲುಕಿ ದುರ್ಬಲವಾಗುತ್ತಿವೆ. ಟಿಪ್ಪು ಸುಲ್ತಾನ್‌ ಶ್ರೀರಂಗಪಟ್ಟಣದಲ್ಲಿ ನಿರ್ಮಿಸಿದ ಕಟ್ಟಡಗಳಲ್ಲಿ ಅದ್ಭುತ ಎನಿಸುವಂಥದ್ದು ಗುಂಬಸ್‌. ಟರ್ಕಿಯಿಂದ ಕೆಲಸಗಾರರನ್ನು ಕರೆಸಿ ತನ್ನ ತಂದೆ ಹೈದರ್‌ ಅಲಿ ಹಾಗೂ ತಾಯಿ ಫ‌ಕ್ರುನ್ನಿಸಾ ಫಾತಿಮಾ ಬೇಗಂ ಅವರ ಸಮಾಧಿಗಳನ್ನು ನಿರ್ಮಿಸಿದ್ದ. 1799ರ ಮೇ 4ರಂದು ಟಿಪ್ಪು ಸುಲ್ತಾನ್‌ ಮಡಿದ ನಂತರ ಮೃತದೇಹವನ್ನು ಬ್ರಿಟಿಷರು ಮುಸ್ಲಿಂ ಸಂಪ್ರದಾಯದಂತೆ ಗುಂಬಸ್‌ ಒಳಗೆ ತಂದು ಆತನ ತಂದೆ-ತಾಯಿಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಿದರು. ಈ ಸ್ಥಳದಲ್ಲಿ ಪ್ರತಿ ವರ್ಷ ಚಂದ್ರಮಾನ (ಲೂನಾರ್‌ ಸಿಸಂ) ಪದ್ಧತಿ ಪ್ರಕಾರ, ಹಿಜಿರಾ ಶಕೆ ಕ್ಯಾಲೆಂಡರ್‌ನಂತೆ ಉರುಸ್‌ ನಡೆಯುತ್ತದೆ. ಅದರಲ್ಲಿ ರಾಜ್ಯ ಹಾಗೂ ನೆರೆಯ ರಾಜ್ಯಗಳ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

■ ಗಂಜಾಂ ಮಂಜು

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.