BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Team Udayavani, Dec 20, 2024, 11:01 PM IST
ಬೆಂಗಳೂರು : ಬಿಗ್ ಬಾಸ್ ಮನೆಗೆ ಹೊಸ ಕ್ಯಾಪ್ಟನ್ ನೇಮಕವಾಗಿದ್ದಾರೆ. ಕತ್ತಲೆ ಬೆಳಕಿನ ಆಟವನ್ನು ನೀಡಿ ಮುಂದಿನ ಕ್ಯಾಪ್ಟನ್ ಆಯ್ಕೆ ನಡೆದಿದೆ.
ಮುಂದಿನ ಕ್ಯಾಪ್ಟನ್ ಯಾರು?:
ಭವ್ಯ – ಐಶ್ವರ್ಯಾ ಅವರಿಗೆ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದೆ. ಆ್ಯಕ್ಟಿವಿಟಿ ರೂಮ್ ನಲ್ಲಿ ಬಾಕ್ಸ್ ಗಳನ್ನು ಇಡಲಾಗಿದ್ದು, ಆ ಬಾಕ್ಸ್ ಗಳನ್ನು ಆಯಾ ಬಣ್ಣಗಳು ಸೂಚಿಸುವ ಪೆಡಸ್ಟ್ರಿಯಲ್ ಮೇಲೆ ಇಡಬೇಕು. ಈ ಕ್ಯಾಪ್ಟನ್ಸಿ ಓಟದ ಟಾಸ್ಕ್ ನಲ್ಲಿ ಭವ್ಯ ಅವರು ಗೆದ್ದು ಕ್ಯಾಪ್ಟನ್ ಆಗಿದ್ದಾರೆ. 36 ಸೆಕೆಂಡ್ ಗಳ ಅಂತರದಲ್ಲಿ ಭವ್ಯ ಅವರು ಗೆದ್ದಿದ್ದಾರೆ.
ಕ್ಯಾಪ್ಟನ್ ಆದ ಕೂಡಲೇ ಭವ್ಯ ಅವರು ಖಡಕ್ ಆದ ರೂಲ್ಸ್ ಗಳನ್ನು ಹಾಕಿ ಎಲ್ಲರೂ ಅದನ್ನು ಪಾಲಿಸಬೇಕೆಂದು ಹೇಳಿದ್ದಾರೆ.
ಕ್ಯಾಪ್ಟನ್ ಆದ ಮೇಲೆ ಭವ್ಯ ಐಶ್ವರ್ಯಾ ಅವರನ್ನು ನಾಮಿನೇಟ್ ಮಾಡದ್ದಾರೆ. ಇದಕ್ಕೆ ಐಶ್ವರ್ಯಾ ಇವರು ಕೊಡುವ ರೀಸನ್ ಎಲ್ಲಾ ಟಾರ್ಗೆಟ್ ನಾಮಿನೇಷನ್ ಆಗಿರುತ್ತದೆ. ಬರಲಿ ಬರಲಿ ಎಂದು ಬೇಸರವನ್ನು ಹೊರಹಾಕಿದ್ದಾರೆ.
ಐಶ್ವರ್ಯಾ ಅವರಿಗೆ ನೀವು ಚೆನ್ನಾಗಿ ಆಡಿದ್ದೀರಿ. ನಾಮಿನೇಟ್ ಆದರೆ ಏನಾಯಿತು. ಸ್ಟೇ ಸ್ಟ್ರಾಂಗ್ ಎಂದು ಉಳಿದ ಸ್ಪರ್ಧಿಗಳು ಧೈರ್ಯ ತುಂಬಿದ್ದಾರೆ.
ನನಗೂ ನಿಮ್ಗೂ ಕ್ಯಾಪ್ಟನ್ಸಿ ಆಗುವ ಯೋಗ್ಯವೇ ಇಲ್ಲ ಇರಬೇಕು ಮೋಕ್ಷಿತಾ ಎಂದು ಚೈತ್ರಾ ಅವರು ಹೇಳಿದ್ದಾರೆ.
ಲಕ್ಷುರಿ ಪಾಯಿಂಟ್ಸ್ ಗಳಿಸುವ ನಿಟ್ಟಿನಲ್ಲಿ ಸದಸ್ಯರಿಗೆ ಫನ್ ಟಾಸ್ಕ್ ನೀಡಲಾಗಿದೆ.
ಟಾಸ್ಕ್ ಆದ ಬಳಿಕ ತ್ರಿವಿಕ್ರಮ್ ಅವರು ಟಾಸ್ಕ್ ಏರಿಯಾಕ್ಕೆ ಹೋಗಿದ್ದಾರೆ. ಇದಕ್ಕೆ ಭವ್ಯ ಅಲ್ಲಿಗೆ ಹೋಗಬೇಡಿ ಎಂದಿದ್ದಾರೆ. ನಾನೇನು ಸಾಮಾಗ್ರಿ ಮುಟ್ಟಿಲ್ಲ ಜಸ್ಟ್ ನೋಡೋಕೆ ಬಂದಿದ್ದೇನೆ. ನನಗೆ ಕಾಮನ್ ಸೆನ್ಸ್ ಇದೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಈ ಮಾತಿಗೆ ಭವ್ಯ ಅವರು ನಾನು ಹೇಳಿದ್ದನ್ನು ಹೇಳಿದ್ದೇನೆ ಪಾಯಿಂಟ್ಸ್ ಕಟ್ ಆದ್ರೆ ನಾನು ಜವಾಬ್ದಾರಿ ಅಲ್ಲವೆಂದು ಹೇಳಿದ್ದಾರೆ.
ಯಾರು ಉತ್ತಮ – ಕಳಪೆ?:
ಈ ವಾರ ಎರಡು ತಂಡಗಳ ನಡುವೆ ನಡೆದ ಟಾಸ್ಕ್ ಗಮನದಲ್ಲಿಟ್ಟುಕೊಂಡು ವಾರದ ಉತ್ತಮ ಹಾಗೂ ಕಳಪೆ ಪಟ್ಟವನ್ನು ಸ್ಪರ್ಧಿಗಳು ನೀಡಿದ್ದಾರೆ.
ರಜತ್, ಐಶ್ವರ್ಯಾ, ಮೋಕ್ಷಿತಾ, ಧನರಾಜ್, ಹನುಮಂತು ಅವರು ಚೈತ್ರಾ ಅವರನ್ನು ಈ ವಾರದ ಉಸ್ತುವಾರಿ ಆಟದ ಕಾರಣವನ್ನು ನೀಡಿ ಕಳಪೆಯನ್ನು ನೀಡಿದ್ದಾರೆ. ಆ ಮೂಲಕ ಚೈತ್ರಾ ಅವರು ಸತತ ಮೂರನೇ ಬಾರಿ ಕಳಪೆ ಸ್ಥಾನ ಪಡೆದಿದ್ದಾರೆ.
ಕ್ಯಾಪ್ಟನ್ ಭವ್ಯ ಅವರು ತ್ರಿವಿಕ್ರಮ್ ಅವರಿಗೆ ಉತ್ತಮ ನೀಡಿದ್ದು, ಹನುಮಂತು ಅವರಿಗೆ ಕಳಪೆ ನೀಡಿದ್ದಾರೆ. ರಜತ್ ಅವರು ಮೋಕ್ಷಿತಾ ಅವರಿಗೆ ಉತ್ತಮ ನೀಡಿದ್ದು, ಚೈತ್ರಾ ಅವರಿಗೆ ಕಳಪೆಯನ್ನು ಚೈತ್ರಾ ಅವರಿಗೆ ನೀಡಿದ್ದಾರೆ. ಮಂಜು ಅವರು ತ್ರಿವಿಕ್ರಮ್ ಅವರಿಗೆ ಉತ್ತಮ ನೀಡಿದ್ದು, ಕಳಪೆಯನ್ನು ರಜತ್ ಅವರಿಗೆ ನೀಡಿದ್ದಾರೆ.
ಐಶ್ವರ್ಯಾ ಅವರು ಚೈತ್ರಾ ಅವರಿಗೆ ಕಳಪೆ, ರಜತ್ ಅವರಿಗೆ ಉತ್ತಮವನ್ನು ನೀಡಿದ್ದಾರೆ. ಗೌತಮಿ ಅವರು ತ್ರಿವಿಕ್ರಮ್ ಅವರಿಗೆ ಉತ್ತಮ, ಕಳಪೆಯನ್ನು ರಜತ್ ಅವರಿಗೆ ನೀಡಿದ್ದಾರೆ. ಮೋಕ ಅವರು ಧನರಾಜ್ ಅವರಿಗೆ ಉತ್ತಮ, ಚೈತ್ರಾ ಅವರಿಗೆ ಕಳಪೆಯನ್ನು ನೀಡಿದ್ದಾರೆ. ಧನರಾಜ್ ಅವರು ಕಳಪೆಯನ್ನು ಚೈತ್ರಾ ಅವರಿಗೆ ನೀಡಿದ್ದಾರೆ. ಐಶ್ವರ್ಯಾ ಅವರಿಗೆ ಉತ್ತಮವನ್ನು ನೀಡಿದ್ದಾರೆ. ಚೈತ್ರಾ ಅವರು ತ್ರಿವಿಕ್ರಮ್ ಅವರಿಗೆ ಉತ್ತಮ, ರಜತ್ ಅವರಿಗೆ ಕಳಪೆಯನ್ನು ನೀಡಿದ್ದಾರೆ. ಹನುಮಂತು ಅವರು ಕಳಪೆಯನ್ನು ಚೈತ್ರಾ ಅವರಿಗೆ ನೀಡಿದ್ದು, ತ್ರಿವಿಕ್ರಮ್ ಅವರಿಗೆ ಉತ್ತಮವನ್ನು ನೀಡಿದ್ದಾರೆ. ತ್ರಿವಿಕ್ರಮ್ ಅವರು ಮೋಕ್ಷಿತಾ ಅವರಿಗೆ ಉತ್ತಮ, ಕಳಪೆಯನ್ನು ಹನುಮ ಅವರಿಗೆ ನೀಡಿದ್ದಾರೆ.
ಈ ವಾರದ ಉತ್ತಮವಾಗಿ ತ್ರಿವಿಕ್ರಮ್, ಕಳಪೆ ಚೈತ್ರಾ ಅವರಿಗೆ ಸಿಕ್ಕಿದೆ.
ಕಳಪೆ ವಿಚಾರದಲ್ಲಿ ಮಂಜು – ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ. ಹಳೆಯ ಮಾತುಗಳನ್ನಿಟ್ಟುಕೊಂಡು ನಿನ್ನದೇನು – ನನ್ನದೇನು ಎನ್ನುವ ಮಾತು ವಾಗ್ವಾದಕ್ಕೆ ತಿರುಗಿದೆ. ಜುಟ್ಟು ಕಾರಣವನ್ನು ಯಾಕೆ ನೀಡ್ತೀಯಾ ಎಂದು ಮಂಜು ಅವರು ರಜತ್ ಅವರಿಗೆ ನೇರವಾಗಿಯೇ ಹೇಳಿದ್ದಾರೆ. ಇಬ್ಬರ ನಡುವೆ ಏಕವಚನದಲ್ಲೇ ಮಾತಿನ ವಾಗ್ವಾದ ನಡೆದಿದೆ.
ಟೀಮ್ ಮಾಡ್ಕೊಂಡು ಕಳಪೆ ನೀಡುವುದನ್ನು ಜನ ನೋಡ್ತಾರೆ. ಜನ ಈ ತಪ್ಪನ್ನು ನೋಡುತ್ತಾರೆ. ಇದು ನನಗೆ ಅಭ್ಯಾಸವಾಗಿದೆ ಎಂದು ಚೈತ್ರಾ ಅವರು ಜೈಲು ಸೇರಿದ್ದಾರೆ. ನಾನು ಖುಷಿಯಿಂದಲೇ ಹೋಗ್ತೇನೆ ಎಂದು ಚೈತ್ರಾ ಹೇಳಿದ್ದಾರೆ.
ಬೇರೆ ಯಾವ ಯಾವ ಕೇಸ್ ಅಲ್ಲಿ ಜೈಲಿಗೆ ಹೋಗ್ತಾ ಇದ್ದೆ ಇರಬೇಕು ಇಲ್ಲಿ ಮುಗಿಸಿಕೊಂಡು ಹೋಗ್ತಾ ಇದ್ದೇನೆ ಅನ್ನಿಸುತ್ತದೆ ಎಂದು ಚೈತ್ರಾ ಹೇಳಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.