Mandya: ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು

ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣದಲ್ಲಿ ಕನ್ನಡದ ಕಹಳೆ

Team Udayavani, Dec 21, 2024, 6:36 AM IST

1-chenna

ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ವೇದಿಕೆ

(ಮಂಡ್ಯ):ಅಖಿಲ ಭಾರತ 87ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಕನ್ನಡದ ಅಸ್ಮಿತೆಗೆ, ಕನ್ನಡ ಉಳಿವಿಗೆ, ಶೈಕ್ಷಣಿಕ ಪ್ರಗತಿಗೆ, ಕನ್ನಡಿಗರ ಉದ್ಯೋಗಕ್ಕೆ, ನಾಡು-ನುಡಿ, ಗಡಿ ಜಲ ಸಮಸ್ಯೆಗಳು ಸೇರಿದಂತೆ ಇನ್ನಿತರ ಅಭಿವೃದ್ಧಿಗಾಗಿ 21 ಹಕ್ಕೊತ್ತಾಯಗಳನ್ನು ಮಂಡಿಸಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದಿಂದ ಹಿಂದಿ ಹೇರಿಕೆ ಪ್ರಯತ್ನ ನಡೆಯುತ್ತಿದೆ ಎಂದೂ ಗುಡುಗಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರದಿಂದ ಇಂಗ್ಲಿಷ್‌ ಮಾಧ್ಯಮ ತೆರೆಯಬಾರದು, ಖಾಸಗಿಯವರಿಗೂ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಇನ್ನು ರಾಜ್ಯದ ಆಯವ್ಯಯದಲ್ಲಿ ಕನಿಷ್ಠ ಶೇ.15ರಷ್ಟು ಭಾಗವನ್ನು ಶಿಕ್ಷಣಕ್ಕಾಗಿಯೇ ಮೀಸಲಿರಬೇಕು ಎಂದೂ ಒತ್ತಾಯಿಸಿದ್ದಾರೆ.
ಅಖೀಲ ಭಾರತ 87ನೇ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯದಲ್ಲಿ ವಿಧ್ಯುಕ್ತ ಚಾಲನೆ ಚಾಲನೆ ನೀಡಿ ಭಾಷಣ ಮಾಡಿದ ಅವರು, ಕನ್ನಡ ನಾಡಿನಲ್ಲಿ ಕನ್ನಡವೇ ಸೌರ್ವಭೌಮ ಭಾಷೆ ಎನ್ನುವುದು ನಿರ್ವಿವಾದ. ಇದನ್ನು ರಾಜ್ಯ ಸರ್ಕಾರ ಸರ್ವ ರೀತಿಯಲ್ಲೂ ಕೇಂದ್ರಕ್ಕೆ ಮನಗಾಣಿಸಬೇಕು.ಇದಕ್ಕೆ ಕನ್ನಡಿಗರೂ ಪ್ರತಿರೋಧ ತೋರಿದರೆ ಅದು ತಪ್ಪೇನಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿಗೆ ಪ್ರಾಶಸ್ತ್ಯವನ್ನು ಮಾಡುತ್ತಿದೆ. ಇಂದರಿಂದ ಕನ್ನಡಿಗರಿಗೆ ಉದ್ಯೋಗದ ಅವಕಾಶ ಇಲ್ಲವಾಗುತ್ತದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಸರೋಜಿನಿ ಮಹಿಷಿ ಸಮಿತಿ ವರದಿಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಭಾರತದ ಪ್ರಜೆಗಳಾಗಿರುವ ಅದೃಷ್ಟವಿದ್ದರೂ ವೈಯಕ್ತಿಕವಾಗಿ ಅವರ ವರ ಆಯ್ಕೆ ಸ್ವಾತಂತ್ರ್ಯ ಇರುತ್ತದೆ. ಇದು ಭಾಷೆಯ ವಿಚಾ ರಕ್ಕೂ ನಿಜ. ಆದರೆ ಭಾರತದ ಜನರೆಲ್ಲರೂ ಸಂವಹನ ನಡೆ ಸಲು ಹಿಂದಿ ಭಾಷೆಯನ್ನು ಕಲಿತು ಬಳಸಬೇಕು, ಅದೇ ನಮ್ಮ ರಾಷ್ಟ್ರಭಾಷೆ ಎಂಬುದನ್ನು ಲಿಖೀತ ಮತ್ತು ಅಲಿಖೀತ ವಾಗಿ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹೇರುವ ಹುನ್ನಾರ ವನ್ನು ಹಿಂದಿನ ಮತ್ತು ಇಂದಿನ ಕೇಂದ್ರ ಸರ್ಕಾರಗಳು ಮಾಡುತ್ತಲೇ ಬಂದಿವೆ ಎಂದು ಕಿಡಿಕಾರಿದರು.

ಬ್ಯಾಂಕ್‌ಗಳಲ್ಲಿ ಕನ್ನಡದ ಸೊಲ್ಲು ಸಾಧ್ಯವಾದಷ್ಟೂ ಇರದಂತೆ ನೋಡಿಕೊಳ್ಳಲಾಗುತ್ತಿದೆ. ಅನೇಕ ಬ್ಯಾಂಕ್‌ ಚಲನ್‌ಗಳಲ್ಲಿ ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ವಿವರಗಳನ್ನು ತುಂಬುವ ಅವಕಾಶವಿರುವುದು ಗ್ರಾಹಕರಿಗೆ ಸದ್ದಿಲ್ಲದೆ ನೀಡುವ ಕಿರುಕುಳವಷ್ಟೆ. ಹಿಂದಿ ಹೇರಿಕೆಯನ್ನು ದಬ್ಟಾಳಿಕೆ ರೂಪದಲ್ಲಿ ಜಾರಿಗೆ ಬರ ಬಾರದು. ಇತರ ರಾಜ್ಯಗಳಿಗೂ ಇರುವಂತೆ ನಮಗೂ ಇರುವ ಸಂವಿಧಾನದ 345ನೇ ವಿಧಿ ಪ್ರಕಾರ ಕನ್ನಡವೇ ನಮ್ಮ ರಾಜ್ಯದ ಅಧಿಕೃತ‌ ಭಾಷೆಯಾಗಿದೆ. ಬ್ಯಾಂಕು, ಕಚೇರಿಗಳಲ್ಲಿ ಹಿಂದಿ ಭಾಷೆ ಬಹುಪಾಲು ಜನರಿಗೆ ಎಟಕುವ ಸಂಗತಿಯಲ್ಲ. ಕೇಂದ್ರದ ಪ್ರಭಾವಿ ಸಚಿವರು ಈ ವಿಚಾರವನ್ನು ಆಗಾಗ ಪ್ರಸ್ತಾಪ ಮಾಡುತ್ತಿ ರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ಸರಕಾರದಿಂದ ಇಂಗ್ಲಿಷ್‌ ಶಾಲೆ ಬೇಡ
ಯಾವುದೇ ಕಾರಣಕ್ಕೂ ಸರ್ಕಾರದಿಂದ ಇಂಗ್ಲಿಷ್‌ ಮಾಧ್ಯಮ ತೆರೆಯಬಾರದು, ಖಾಸಗಿಯ ವರಿಗೂ ಅನುಮತಿ ನೀಡಬಾರದು. ರಾಜ್ಯ ಸರ್ಕಾರ ಬದಲಾದಂತೆ ಸರ್ಕಾರಿ ಸಾರ್ವಜನಿಕ ಶಾಲಾ ಶಿಕ್ಷಣದಲ್ಲಿ ಪ್ರಥಮ, ದ್ವಿತೀಯ, ತೃತೀಯ ಭಾಷೆಯೆಂದು ಕನ್ನಡದ ಸ್ಥಾನಮಾನ ಬದಲಾಗುವುದು, ಖಾಸಗಿ ಶಾಲೆಗಳು ಅದರಲ್ಲೂ ಕೇಂದ್ರೀಯ ಪಠ್ಯಕ್ರಮ ಮತ್ತು ಪರೀಕ್ಷಾ ಕ್ರಮವನ್ನು ಅನುಸರಿಸುವ ಶಾಲೆಗಳು ಭಿನ್ನ ನೀತಿ ಅನುಸರಿಸುವುದು, ಸರ್ಕಾರವೇ ಪಬ್ಲಿಕ್‌ ಶಾಲೆಗಳನ್ನು ತೆರೆದಿರುವುದು ಸೇರಿದಂತೆ ಅನೇಕ ಸಂಗತಿಗಳು ಗೊಂದಲ ಹುಟ್ಟಿಸಿವೆ. ಗ್ರಾಮೀಣ ಪ್ರದೇಶದಲ್ಲಿರುವ ಸಾವಿರಾರು ಸರ್ಕಾರಿ ಶಾಲೆಗಳು ಸೂರು, ಗೋಡೆ ಉರುಳುವ ಸ್ಥಿತಿಯಲ್ಲಿವೆ. ಮೊದಲು ಅವುಗಳನ್ನು ಸರಿಪಡಿಸಿ. ಮಕ್ಕಳಿಗೆ ಮತ್ತು ಪೋಷಕರಿಗೆ ಆಕರ್ಷವಾಗುವಂತೆ ಉನ್ನತೀಕರಿಸಬೇಕು ಎಂದು ಗೊ.ರು.ಚನ್ನಬಸಪ್ಪ ಆಗ್ರಹಿಸಿದರು. ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯೆಂಬ ಗುತ್ಛ ವ್ಯವಸ್ಥೆಯನ್ನು ಪ್ರತಿ ಗ್ರಾಮದಲ್ಲಿ ಅಲ್ಲದಿದ್ದರೂ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತೆರೆಯುವ ಬಗ್ಗೆ ಸರ್ಕಾರ ಚಿಂತಿಸಲಿ ಎಂದರು.

ತದೇಕಚಿತ್ತದಿಂದ ಭಾಷಣ ಆಲಿಸಿದ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಅಖೀಲ ಭಾರತ 87ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರ ಭಾಷಣವನ್ನು ತದೇಕ ಚಿತ್ತದಿಂದ ಆಲಿಸಿದ್ದು ವಿಶೇಷವಾಗಿತ್ತು. ಕನ್ನಡ ಭಾಷೆ, ಶೈಕ್ಷಣಿಕ ವ್ಯವಸ್ಥೆ, ಹಂಪಿ ಕನ್ನಡ ವಿವಿ ದುಸ್ಥಿತಿ, ಹಿಂದಿಹೇರಿಕೆ, ಸರೋಜಿನಿ ಮಹಿಷಿ ವರದಿ ಜಾರಿ, ಹೊರ ನಾಡಿಗರ ದುರಹಂಕಾರ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದಾಗ ಸಿಎಂ ಗಂಭೀರವಾಗಿ ಆಲಿಸಿದರು.

ಕನ್ನಡ ಹಬ್ಬದ ಮೂಲಕ ಕನ್ನಡ ಡಿಂಡಿಮ ಬಾರಿಸಬೇಕು
ಪ್ರಧಾನ ವೇದಿಕೆ (ಮಂಡ್ಯ): ಸಮ್ಮೇಳನ ಕನ್ನಡದ ಜಾತ್ರೆ, ಕನ್ನಡ ನುಡಿಯ ಯಾತ್ರೆ. ಕನ್ನಡದ ಹಬ್ಬ ಆಚರಿಸುವ ಮೂಲಕ ನಾವು ಕನ್ನಡ ಡಿಂಡಿಮವನ್ನು ಬಾರಿಸಬೇಕು. ಕುವೆಂಪು ಅವರ ಆಶಯದಂತೆ ಸತ್ತಂತಿರುವರನ್ನು ಬಡಿದೆಚ್ಚರಿಸುವ ಕೆಲಸ ಮಾಡಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಶ್ರೀಗಳು ಹೇಳಿದರು. ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಹಿಂದಿನ ಕವಿಗಳನ್ನು ನೆನೆಸಿ, ಇಂದಿನ ಕವಿಗಳ ವಿಚಾರಗಳನ್ನು ತಿಳಿದು ಮುಂದಿನ ಬದುಕನ್ನು ರೂಪಿಸುವ ತ್ರಿವೇಣಿ ಸಂಗಮ ಈ ಸಮ್ಮೇಳನವಾಗಲಿ ಎಂದು ಹಾರೈಸಿದರು.

ಕನ್ನಡ ಮನ-ಮನೆಗಳಲ್ಲಿ ಬೆಳಗಲಿ: ಸಚಿವ ಚಲುವರಾಯಸ್ವಾಮಿ
ಪ್ರಧಾನ ವೇದಿಕೆ (ಮಂಡ್ಯ): ಕನ್ನಡ ಭಾಷೆ ಸಾವಿರಾರು ವರ್ಷಗಳಿಂದ ಹಸಿರಾಗೇ ಇದೆ. ಮಂಡ್ಯ ಸಾಹಿತ್ಯ ಸಂಸ್ಕೃತಿ, ರಾಜಕಾರಣ ಎಲ್ಲಾ ಕ್ಷೇತ್ರದಲ್ಲೂ ಕೊಡುಗೆ ನೀಡುತ್ತಾ ಬಂದಿದೆ. ಈ ನೆಲದಲ್ಲಿ 3ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿ ರುವುದು ಹೆಮ್ಮೆಯ ಸಂಗತಿಯಾಗಿದ್ದು, ಎಲ್ಲರ ಮನೆ ಮನಗಳಲ್ಲಿ ಕನ್ನಡ ಬೆಳಗಬೇಕು ಎಂದು 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಗೊ.ರು.ಚ. ಹಕ್ಕೊತ್ತಾಯಗಳು
11ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯ. ಸರ್ಕಾರ ಇಂಗ್ಲಿಷ್‌ ಮಾಧ್ಯಮ ತೆರೆಯಬಾರದು, ಖಾಸಗಿಗೂ ಅನುಮತಿ ಬೇಡ
2ಆಯವ್ಯಯದಲ್ಲಿ ಕನಿಷ್ಠ ಪಕ್ಷ ಶೇ.15ರಷ್ಟು ಭಾಗವನ್ನು ಶಿಕ್ಷಣಕ್ಕೆ ಮೀಸಲಿರಬೇಕು.
3ಸರೋಜಿನಿ ಮಹಿಷಿ ವರದಿ ಶೀಘ್ರ ಅನುಷ್ಠಾನ, ಸಿ ಮತ್ತು ಡಿ ವರ್ಗದ ಹು¨ªೆಗಳನ್ನು ಕನ್ನಡಿಗರಿಗೇ ಮೀಸಲಿಡಬೇಕು
4ಕನ್ನಡ ವಿವಿ ಮತ್ತು ಜಾನಪದ ವಿವಿ ಹಣಕಾಸು, ಭೋದನಾ ಸಿಬ್ಬಂದಿ ಕೊರತೆಯನ್ನು ಕೂಡಲೇ ನಿವಾರಿಸಬೇಕು
5ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಸ್ವತಂತ್ರ ಸ್ವಾಯತ್ತ ಕೇಂದ್ರವನ್ನಾಗಿ ಬೆಳೆಸಲು ಕೇಂದ್ರದ ನೆರವು ಪಡೆಯುವುದು
6ಪ್ರವಾಸೋದ್ಯಮವನ್ನು ಆದಾಯ ಮತ್ತು ಉದ್ಯೋಗಾವಕಾಶ ದೃಷ್ಟಿಯಿಂದ ನೋಡುವುದು
7ಕೈಗಾರಿಕೋದ್ಯಮ ಸ್ಥಾಪನೆ ಎಲ್ಲ ಜಿÇÉೆಗಳಿಗೂ ಹಂಚಿಕೆಯಾಗಬೇಕು
8ಸಚಿವಾಲಯ ಕಚೇರಿ ಹೊರತಾಗಿ, ಉಳಿದ ಇಲಾಖೆಗಳ ನಿರ್ದೆಶನಾಲಯ ಕಚೇರಿಗಳನ್ನು ಜಿಲ್ಲೆಗೆ ಸ್ಥಳಾಂತರಿಸಬೇಕು
9ಅಂತಾರಾಜ್ಯ ಗಡಿ, ಜಲ ಮತ್ತು ವಲಸೆ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ನೀತಿ ರೂಪಿಸಲು ಕೇಂದ್ರಕ್ಕೆ ಒತ್ತಾಯಿಸಬೇಕು
10ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಗೆ ಕಾಲಬದ್ಧ ಕ್ರಮಕೈಗೊಳ್ಳಬೇಕು
1112ನೇ ಶತಮಾನದ ಶರಣರ ಕ್ಷೇತ್ರಗಳ ಸಂರಕ್ಷಣೆ, ಅಭಿವೃದ್ಧಿ ಕಾರ್ಯಕ್ಕಾಗಿ ಸ್ವಾಯತ್ತ ಪ್ರಾಧಿಕಾರ ರಚಿಸಬೇಕು. ವಚನ ವಿಶ್ವವಿದ್ಯಾಲಯವನ್ನು ಆರಂಭಿಸಬೇಕು
12ಸರ್ಕಾರಿ, ಖಾಸಗಿ ಕಚೇರಿ, ಅಂಗಡಿಗಳ ನಾಮ ಫ‌ಲಕ ಕಡ್ಡಾಯ ಕನ್ನಡದಲ್ಲಿರಬೇಕು. ತಪ್ಪಿದರೆ ಕ್ರಮವಹಿಸಬೇಕು
13ಪಶ್ಚಿಮಘಟ್ಟಗಳ ರಕ್ಷಣೆಗೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳ ಬೇಕು. ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು
14ಗ್ರಂಥಾಲಯ ತೆರಿಗೆಯಿಂದ ಸಂಗ್ರಹವಾದ ಹಣವನ್ನು ಅವುಗಳಿಗೇ ಬಳಸಬೇಕು
15ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯ ಪ್ರಕಟಣೆ ಯೋಜನೆ ಮುಂದುವರಿಸಿಕೊಂಡು ಹೋಗಬೇಕು
16ಆಡಳಿತದಲ್ಲಿ ಕನ್ನಡ ಬಳಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಂತ್ರಜ್ಞಾನ ಅಳವಡಿಕೆಯಾಗಬೇಕು
17ಸಾಹಿತ್ಯ-ಸಂಸ್ಕೃತಿ ಸಂಬಂಧದ ಸಂಘ-ಸಂಸ್ಥೆಗಳಿಗೆ ಉದಾರ ಧನಸಹಾಯ ದೊರಕಿಸಬೇಕು
18ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಕೊಡಬಾರದು
19ಕನ್ನಡದ ಕೃತಿಗಳನ್ನು ಅನ್ಯಭಾಷೆಗೆ ಅನುವಾದಿಸಿ ಪ್ರಕಟಿಸುವ ಕೆಲಸ ದೊಡ್ಡ ಪ್ರಮಾಣದಲ್ಲಿ ಆಗಲಿ
20ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸಬೇಕು
21ಕನ್ನಡ ಸಾಹಿತ್ಯ ಪರಿಷತ್ತು ಶಾಲಾ ಶಿಕ್ಷಕರಿಗೆ ಸಾಹಿತ್ಯ-ಸಂಸ್ಕೃತಿಗಳ ಬಗೆಗೆ ನಿಯತಕಾಲಿಕ ಶಿಬಿರಗಳನ್ನು ನಡೆಸಬೇಕು

ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Rey Mysterio Sr

Rey Mysterio Sr: ಖ್ಯಾತ ರೆಸ್ಲರ್‌ ರೇ ಮಿಸ್ಟೀರಿಯೊ ಸೀನಿಯರ್‌ ಇನ್ನಿಲ್ಲ

WPL 2025: ವನಿತಾ ಪ್ರೀಮಿಯರ್‌ ಲೀಗ್‌ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು

WPL 2025: ವನಿತಾ ಪ್ರೀಮಿಯರ್‌ ಲೀಗ್‌ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ

PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

CT Ravi ಜಾಮೀನು ಅರ್ಜಿ ವಿಚಾರಣೆ ಇಂದು ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರಿಗೆ ವರ್ಗ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1

Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ

Rey Mysterio Sr

Rey Mysterio Sr: ಖ್ಯಾತ ರೆಸ್ಲರ್‌ ರೇ ಮಿಸ್ಟೀರಿಯೊ ಸೀನಿಯರ್‌ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.