World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
ದೇಹಕ್ಕೆ ಒಳ್ಳೆಯ ಆರೋಗ್ಯ, ಮನಸ್ಸಿಗೆ ನೆಮ್ಮದಿ, ಆತ್ಮಕ್ಕೆ ಧ್ಯಾನ ಬೇಕು...
Team Udayavani, Dec 21, 2024, 6:53 AM IST
ನಾವು ಏಕೆ ಧ್ಯಾನ ಮಾಡಬೇಕು? ಲಾಭಗಳೇನು?
ಶರೀರಕ್ಕೆ ಊಟ ಬೇಕು ಹಾಗೂ ಉಸಿರಾಡಲು ಶುದ್ಧ ಗಾಳಿ ಬೇಕು. ದೇಹಕ್ಕೆ ಒಳ್ಳೆಯ ಆರೋಗ್ಯ ಹಾಗೂ ಮನಸ್ಸಿಗೆ ನೆಮ್ಮದಿ ಹೇಗೆ ಬೇಕೋ, ಹಾಗೆಯೇ ನಮ್ಮ ಆತ್ಮಕ್ಕೂ ಕೂಡ ಆಹಾರ ಬೇಕು. ಆತ್ಮದ ಆಹಾರವೇ ಧ್ಯಾನ. ಅದರಿಂದ ನಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ, ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಅಂತಃಸ್ಪುರಣೆ ಉಂಟಾಗುತ್ತದೆ, ಮಾಡುವ ಕೆಲಸದಲ್ಲಿ ಸ್ಪಷ್ಟತೆ ಬರುತ್ತದೆ. ಮನಸ್ಸು ವಿಶಾಲವಾಗಿ ಅರಳುತ್ತದೆ. ಇಲ್ಲಿ ಬೇರೆಯವರು ಎನ್ನುವುದೇ ಇಲ್ಲ, ಎಲ್ಲರೂ ನಮ್ಮವರೇ ಎಂಬ ಭಾವನೆ ಬರಲು ಆರಂಭಿಸುತ್ತದೆ. ಮಂಕುತಿಮ್ಮನ ಕಗ್ಗದಲ್ಲಿ ಡಿ.ವಿ.ಜಿ.ಯವರು ಹೇಳಿರುವಂತೆ, ವಿಶ್ವಾತ್ಮದ ಅನುಭವವಾಗುತ್ತದೆ. ನಮ್ಮ ಶರೀರದಲ್ಲಿ ಪ್ರಾಣಶಕ್ತಿ ಕಡಿಮೆಯಾಗಿದ್ದರೆ, ಮನಸ್ಸು ಇಳಿಮಖವಾಗುತ್ತದೆ. ಈ ಮನಸ್ಸನ್ನು ಮೇಲೆತ್ತಲು ಧ್ಯಾನ, ಗಾನ ಮತ್ತು ಜ್ಞಾನ, ಈ ಮೂರೂ ಅವಶ್ಯಕ. ಪ್ರತಿನಿತ್ಯ ಧ್ಯಾನ ಮಾಡಿದಾಗ ನಮ್ಮಲ್ಲಿ ಬರುವ ನಕಾರಾತ್ಮಕ ಭಾವನೆಗಳನ್ನು ಅಳಿಸಿ ಬಿಡಬಹುದು. ಇದರಿಂದ ನಮ್ಮಲ್ಲಿ ವಿನಾಕಾರಣ ಏಳುವ ಸಿಟ್ಟನ್ನು ಶೀಘ್ರವಾಗಿ ಅಳಿಸಿ, ಪ್ರಶಾಂತವಾದ, ಮುಗುಳ್ನಗೆಯನ್ನು ಹೊತ್ತು ಜೀವಿಸಬಹುದು.
ಧ್ಯಾನವು ಯೋಗದ ಒಂದು ಭಾಗವಾಗಿದೆಯೇ?
ಧ್ಯಾನವು ಖಂಡಿತವಾಗಿಯೂ ಯೋಗದ ಒಂದು ಭಾಗವಾಗಿದೆ. ಯೋಗದಲ್ಲಿ ಧ್ಯಾನವು ಇರಲೇಬೇಕು; ಇಲ್ಲದಿದ್ದರೆ, ಅದು ಕೇವಲ ವ್ಯಾಯಾಮ, ಜಿಮ್ನಾಸ್ಟಿಕ್ಸ್ ಆಗುತ್ತದೆ.
ಯೋಗ, ಧ್ಯಾನ ಒಂದು ಧರ್ಮದ ಭಾಗ ಎಂದು ಕೆಲವರು ಪರಿಗಣಿಸುತ್ತಿದ್ದರು. ಈಗಲೂ ಆ ಅಭಿಪ್ರಾಯ ಇದೆಯೇ?
ಆ ಅಭಿಪ್ರಾಯ ಈಗ ಬದಲಾಗುತ್ತಿದೆ. ವಿಶ್ವಸಂಸ್ಥೆ ಕೂಡಾ ಈಗ ಧ್ಯಾನದ ಅವಶ್ಯಕತೆ ಮತ್ತು ಪ್ರಯೋಜನವನ್ನು ಗುರುತಿಸಿದೆ. ಧ್ಯಾನವು ಆತ್ಮವನ್ನು ಪೋಷಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆಧುನಿಕ ಜೀವನದ ಸವಾಲುಗಳಿಗೆ ಉತ್ತಮ ಪರಿ ಹಾರವಾಗಿ ನಿಂತಿದೆ.
ಧ್ಯಾನವೆಂದರೆ ಆಲೋಚನೆ ಇಲ್ಲದ ಸ್ಥಿತಿಯೇ ಅಥವಾ ಯಾವುದೋ ಒಂದು ವಿಷಯದಲ್ಲಿ ಸಂಪೂರ್ಣ ಏಕಾಗ್ರರಾಗುವುದೇ?
ಧ್ಯಾನದಲ್ಲಿ ಆಲೋಚನೆಗಳು ಸಹಜ. ಧ್ಯಾನದಲ್ಲಿ ನೂರಾರು ವಿಚಾರಗಳು ಬರಬಹುದು. ನೀವು ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಅವೆಲ್ಲವನ್ನೂ ಮೀರಿ ಹೋಗಿ. ಆಲೋಚನೆಗಳು ಇರಲಿ ಬಿಡಿ, ಅವು ಏಕೆ ಬಂದಿವೆ ಎಂದು ಪ್ರಶ್ನಿಸಬೇಡಿ. ಇದು ನಿಮ್ಮನ್ನು ಆಳವಾದ ಧ್ಯಾನಕ್ಕೆ ಕೊಂಡೊಯ್ಯುತ್ತದೆ. ಧ್ಯಾನವೆಂದರೆ ಏಕಾಗ್ರತೆ ಎಂಬುದು ತಪ್ಪು ಕಲ್ಪನೆ. ವಾಸ್ತವವಾಗಿ ಇದು ಏಕಾಗ್ರತೆಗೆ ವಿರುದ್ಧವಾಗಿದೆ. ಯಾವುದೇ ಕೆಲಸವನ್ನು ಮಾಡಲು ಏಕಾಗ್ರತೆ ಬೇಕು, ಆದರೆ ಧ್ಯಾನ ಮಾಡಲು ಏಕಾಗ್ರತೆಯ ಅಗತ್ಯವಿಲ್ಲ. ವಾಸ್ತವವಾಗಿ, ಒಬ್ಬರು ಧ್ಯಾನಿಸಿದ ನಂತರ, ಅದರ ಫಲರೂಪವಾಗಿ ಏಕಾಗ್ರತೆಯು ಸಿದ್ಧಿಸುತ್ತದೆ.
ಧಾನ್ಯ ಮಾಡಲು ನಿರ್ದಿಷ್ಟ ಸ್ಥಳ ಮತ್ತು ಸಮಯ ಬೇಕೆಂದು ಜನರಲ್ಲಿ ಸಾಮಾನ್ಯ ಅಭಿಪ್ರಾಯ ಇದೆ. ಈ ಬಗ್ಗೆ ತಾವು ಏನು ಹೇಳುತ್ತೀರಿ?
ಧ್ಯಾನ ಮಾಡಲು ಉತ್ತಮ ಸಮಯವೆಂದರೆ ಊಟಕ್ಕೆ ಮುಂಚಿತವಾಗಿ, ಅಥವಾ ಊಟವಾದ 2-3 ಗಂಟೆಗಳ ನಂತರ. ನೀವು ಆಹಾರವನ್ನು ಸೇವಿಸಿದಾಗ ನಿಮ್ಮ ಪಚನಕ್ರಿಯೆ ಹೆಚ್ಚಾಗುತ್ತದೆ, ಆದರೆ ಧ್ಯಾನವು ನಿಮ್ಮ ಕ್ರಿಯೆಗಳನ್ನು ಶಾಂತಗೊಳಿಸುತ್ತದೆ. ಊಟವಾದ ತಕ್ಷಣ ಧ್ಯಾನಕ್ಕೆ ಕುಳಿತರೆ ಏನಾಗುತ್ತದೆ, ಒಂದು, ನಿಮಗೆ ಅಜೀರ್ಣವಾಗುತ್ತದೆ ಅಥವಾ ನಿಮಗೆ ನಿದ್ರೆ ಬರುತ್ತದೆ, ಅದರಿಂದ ಧ್ಯಾನವು ಸಾಧ್ಯವಾಗುವುದಿಲ್ಲ. ಬೆಳಗ್ಗೆ ಯಾವುದೇ ಸಮಯದಲ್ಲಾದರೂ ಕೂಡ ಧ್ಯಾನ ಮಾಡಬಹುದು. ಎದ್ದ ಕೂಡಲೇ ನೀವು ನಿಮ್ಮ ಹಾಸಿಗೆಯ ಮೇಲೆಯೇ ಕುಳಿತು ಧ್ಯಾನ ಮಾಡಬಹುದು, ಅಥವಾ ಎದ್ದು ಸ್ನಾನ ಮಾಡಿ ನಂತರ ಕುಳಿತು ಧ್ಯಾನ ಮಾಡಬಹುದು. ಕಚೇರಿಗಳಲ್ಲಿ ಮತ್ತು ಕಂಪನಿಗಳಲ್ಲಿ “M’ ಮತ್ತು “M'(ಮೀಲ್ಸ್ ಆಂಡ್ ಮೆಡಿಟೇಶನ್) ಸೂತ್ರವನ್ನು ನಾವು ಶಿಫಾರಸು ಮಾಡುತ್ತೇವೆ; ಎಲ್ಲರೂ ಒಟ್ಟಿಗೆ ಕುಳಿತು ಧ್ಯಾನ ಮಾಡಿ ನಂತರ ಒಟ್ಟಿಗೆ ಊಟ ಮಾಡುವುದು. ಹೀಗೆ ಮಾಡುತ್ತಾ ಬಂದರೆ ಅವರು ಸಂಜೆಯವರೆಗೂ ಚೈತನ್ಯಭರಿತರಾಗಿರುತ್ತಾರೆ.
ಶ್ರೀ ಶ್ರೀ ರವಿಶಂಕರ ಗುರೂಜಿ, ಆರ್ಟ್ ಆಫ್ ಲಿವಿಂಗ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
Mandya: ಕನ್ನಡದ ಅಸ್ಮಿತೆಗೆ ಗೊ.ರು.ಚನ್ನಬಸಪ್ಪ 21 ಸೂತ್ರಗಳು
Mandya:87ನೇ ಕನ್ನಡ ಸಾಹಿತ್ಯ ಸಮ್ಮೇಳನ:ಹಿಂದಿ ಹೇರಿಕೆಯ ವಿರುದ್ಧ ಕಹಳೆ-ಗೊ.ರು.ಚನ್ನ ಬಸಪ್ಪ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.