Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
Team Udayavani, Dec 21, 2024, 9:46 AM IST
ಬಂಟ್ವಾಳ: ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡ ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಘನ ವಾಹನಗಳ ಸಂಚಾರಕ್ಕೆ ತಡೆ ಹಾಕಲಾಗಿದ್ದರೂ ಕೂಡ ಅದನ್ನು ಲೆಕ್ಕಿಸದೆ ವಾಹನವೊಂದನ್ನು ಚಾಲಕ ಬಲಾತ್ಕಾರವಾಗಿ ನುಗ್ಗಿಸಿ ಸಿಲುಕಿಕೊಂಡ ಘಟನೆ ಶನಿವಾರ (ಡಿ.21) ಬೆಳಗ್ಗೆ ನಡೆದಿದೆ.
ಟಾಟಾ ಕಂಪೆನಿಯ ಏಸ್ ಗೂಡ್ಸ್ ಟೆಂಪೋವೊಂದು ಚಾಲಕನ ನಿರ್ಲಕ್ಷ್ಯದಿಂದ ಸೇತುವೆಯಲ್ಲಿ ತಲೆ ಮೇಲೆಯಾಗಿ ನಿಂತುಕೊಂಡಿದೆ.
ಬಿ.ಸಿ.ರೋಡಿನಿಂದ ಗೂಡಿನಬಳಿಯಾಗಿ ಪಾಣೆಮಂಗಳೂರು ಕಡೆಗೆ ಸಂಚಾರಕ್ಕೆ ಯತ್ನಿಸಿದಾಗ ಅದು ಸೇತುವೆಯ ಮೇಲೆ ಘನ ವಾಹನ ಸಂಚಾರ ಮಾಡದಂತೆ ಹಾಕಲಾದ ಕಬ್ಬಿಣದ ತಡೆಬೇಲಿಯಲ್ಲಿ ಸಿಲುಕಿಕೊಂಡಿದೆ. ಶಂಭೂರು ಕಡೆಯ ವಾಹನ ಇದಾಗಿದ್ದು, ಮಸಾಲೆ ಪೌಡರ್ ಮಾರ್ಕೆಟಿಂಗ್ ಮಾಡುತ್ತಿತ್ತು.
ಘಟನೆಯಿಂದ ಚಾಲಕ ಯಾವುದೇ ಗಾಯವಿಲ್ಲದೆ ಅಪಾಯವಿಲ್ಲದೆ ಪಾರಾಗಿದ್ದಾನೆ.
ಘಟನೆಯಿಂದ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ. ಸಿಲುಕಿಕೊಂಡ ವಾಹನವನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.
ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಸೇತುವೆಯ ಆಯುಷ್ಯ ಮುಗಿದಿದ್ದು, ಯಾವುದೇ ಘನ ವಾಹನಗಳ ಸಂಚಾರ ಮಾಡುವುದು ನಿಷಿದ್ಧ ಎಂದು ಸುಮಾರು ವರ್ಷಗಳ ಹಿಂದೆಯೇ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದರೂ ಕೂಡ ಸ್ಥಳೀಯಾಡಳಿತದ ನಿರ್ಲಕ್ಷ್ಯತನಕ್ಕೆ ಒಳಗಾಗಿ ಕಳೆದ ವರ್ಷದವರೆಗೂ ಸೇತುವೆಯಲ್ಲಿ ಘನ ವಾಹನಗಳು ಬೇಕಾಬಿಟ್ಟಿಯಾಗಿ ಸಂಚಾರ ಮಾಡುತ್ತಿದ್ದವು. ಆದರೆ ಕಳೆದ ಮಳೆಗಾಲದಲ್ಲಿ ಸೇತುವೆಯ ಮೇಲೆ ಬಿರುಕು ಕಂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯಾಡಳಿತ ಕೂಡಲೇ ಸೇತುವೆಯ ಮೇಲೆ ಸಂಚಾರ ಮಾಡದಂತೆ ತಡೆಬೇಲಿ ನಿರ್ಮಾಣ ಮಾಡಿದೆ. ಆದರೆ ಒಂದು ಬಾರಿ ಅ ತಡೆಬೇಲಿಯನ್ನು ಅಕ್ರಮ ಮರಳು ಸಾಗಾಟ ಮಾಡುವ ಲಾರಿಗಳು ಹೊತ್ತು ಕೊಂಡು ಹೋಗಿದ್ದವು. ಮತ್ತೆ ಘನ ಗಾತ್ರದ ಕಬ್ಬಿಣದ ತಡೆಬೇಲಿ ಹಾಕಲಾಗಿತ್ತು. ಇದೀಗ ಆ ಬೇಲಿಗೆ ತಾಗಿ ವಾಹನ ಸಿಲುಕಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.