ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ

ಯಡ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮ

Team Udayavani, Dec 21, 2024, 3:03 PM IST

5(1

ಸುತ್ತಲೂ ಕಾಡು. ಅಕ್ಷರ ಕಲಿಯಬೇಕು ಎನ್ನುವ ಆಸೆ ಇದ್ದರೂ ಪೂರಕ ವಾತಾವರಣವಿಲ್ಲ. ಐಗಳ ಮಠ ನೋಡಬೇಕಾದರು ಹತ್ತಾರು ಊರು ದಾಟಿ ಮತ್ತಾವುದೋ ಊರಿಗೆ ಹೋಗಬೇಕಿದ್ದ ಸ್ಥಿತಿ. ಇದು ಸ್ವಾತಂತ್ರ್ಯ ಪೂರ್ವದ ಶತಮಾನಗಳ ಹಿಂದಿನ ಯಡ್ತಾಡಿ ಗ್ರಾಮದ ಚಿತ್ರಣ. ಆದರೆ ಮರಳುಗಾಡಿನಲ್ಲಿ ನೀರು ಸಿಕ್ಕಂತೆ ಬ್ರಿಟೀಷ್‌ ಆಡಳಿತದ ಕಾಲಘಟ್ಟದ ನಡುವೆ ಶಿಕ್ಷಣ ವ್ಯವಸ್ಥೆ ಜನಸಾಮಾನ್ಯರಿಗೆ ತೆರದುಕೊಳ್ಳಲು ಆರಂಭವಾದ ಕಾಲವೊಂದು ಪ್ರಾರಂಭವಾಗಿತ್ತು. ಪಕ್ಕದೂರು ಕಾವಡಿಯಲ್ಲಿ ಅದಾಗಲೇ ಶಾಲೆಯೊಂದು ಆರಂಭವಾಗಿತ್ತು. ಹೀಗಾಗಿ ನಮ್ಮೂರ ಸುತ್ತ-ಮುತ್ತಲಿನ ಮಕ್ಕಳು ಅಕ್ಷರವಿಲ್ಲದೆ ಪರಿತಪಿಸಬಾರದು. ನಮ್ಮೂರಿನಲ್ಲೂ ನಿರಂತರ ಶಿಕ್ಷಣ ಜ್ಯೋತಿ ಬೆಳಗಬೇಕು ಎನ್ನುವ ಆಸೆಯೊಂದಿಗೆ ಊರಿನ ಹಿರಿಯರೆಲ್ಲ ಅಲ್ತಾರಿನ ನಾಲ್ಕು ಮನೆಯವರ ಮುಂದಾಳತ್ವದಲ್ಲಿ ಒಂದು ಮಾತುಕತೆ ನಡೆಸಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸುವ ತೀರ್ಮಾನಕ್ಕೆ ಬರುತ್ತಾರೆ. ಸ್ವಲ್ಪ ದಿನದಲ್ಲೇ 1924 ಜೂನ್‌ 1ರಂದು ದಿ. ಪಟೇಲ್‌ ಮಂಜಯ್ಯ ಶೆಟ್ಟಿಯವರ ಮನೆಯ ಹೆಬ್ಟಾಗಿಲಿನ ಚಾವಡಿಯಲ್ಲಿ ಯಡ್ತಾಡಿ ಶಾಲೆ ಆರಂಭಗೊಳ್ಳುತ್ತದೆ. ದಿ.ತೋನ್ಸೆ ಮಹಾಲಿಂಗ ಹೆಗ್ಡೆಯವರು ಈ ಶಾಲೆಯ ಪ್ರಾರಂಭದ ಶಿಕ್ಷಕರು. ಹೀಗಾಗಿ ಇವರೇ ಈ ಊರ ಮಕ್ಕಳ ಪಾಲಿನ ಅಕ್ಷರ ದೇವತೆ ಎಂದರೂ ತಪ್ಪಾಗಲಾರದು.

ಆರಂಭದಲ್ಲಿ ಮರಳು ಮೇಲೆ ಅಕ್ಷರಭ್ಯಾಸ, ರಾಮಾಯಣ, ಮಹಾಭಾರತದ ವಿಷಯಗಳೇ ಪಠ್ಯಗಳು, ಪಾಠದ ಜತೆಗೆ ದೆ„ಹಿಕ ಶ್ರಮದ ಜೀವನ ಪಾಠದ ಪರಿಚಯ, ಒಟ್ಟಾರೆಯಾಗಿ ಗುರುಕುಲದಂತಹ ವಾತವರಣವೊಂದು ಆಗಿತ್ತು. ಅನಂತರ 1924 ಡಿಸೆಂಬರ್‌ 1ರಂದು ಶಾಲೆ ಈಗಿರುವ ಸ್ಥಳಕ್ಕೆ ಸ್ಥಳಾಂತರಗೊಂಡಿತು. ದೂರದ ಸಾಹೇಬ್ರಕಟ್ಟೆ, ಅಲ್ತಾರು ಬೀಡು, ಯಡ್ತಾಡಿ, ರಂಗನಕೆರೆ ಮೊದಲಾದ ದೂರದೂರುಗಳಿಂದ ಇಲ್ಲಿನ ಅಕ್ಷರಕಾಂಕ್ಷಿಗಳು ಶಿಕ್ಷಣಾರ್ಥಿಗಳು ಬರುತ್ತಿದ್ದರು.

ಆರಂಭದಲ್ಲಿ ಮೂರ್‍ನಾಲ್ಕು ಶತಕದಷ್ಟು ವಿದ್ಯಾರ್ಥಿಗಳು ಇಲ್ಲಿದ್ದರು. ಆಟದ ಅವಧಿಗೆ ಶಾಲೆಯ ಗಂಟೆ ಢಣ-ಢಣ ಬಾರಿಸಿತೆಂದರೆ ಕ್ರೀಡಾಂಗಣವೆಲ್ಲ ಭರ್ತಿಯಾಗುಷ್ಟು ಮಕ್ಕಳು ಸೇರಿ ವಿಧ-ವಿಧದ ಆಟಗಳನ್ನು ಆಡಿ ನಲಿಯುತ್ತಿದ್ದರು. ಪಾಠದ ಜತೆಗೆ ಜೀವನ ಪಾಠವನ್ನು ಬೋಧಿಸುವ ಶಿಕ್ಷಣ ದೇಗುಲವಾಗಿ ನಮ್ಮೀ ಸಂಸ್ಥೆ ಬೆಳೆದು ಬಂತು.

ಹೀಗೆ ಹಂತ-ಹಂತವಾಗಿ ಬೆಳೆದ ನಮ್ಮೂರು ಶಾಲೆ 1995-96ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು.

ಶಾಲೆಗೆ ಗೌರವ ತಂದ ಶಿಕ್ಷಕರು
ಇಲ್ಲಿ ಹತ್ತಾರು ಮಂದಿ ಶಿಕ್ಷಕ, ಮುಖ್ಯ ಶಿಕ್ಷಕರು ಸೇವೆ ಸಲ್ಲಿಸಿ ಶಾಲೆಯ ಕೀರ್ತಿಯನ್ನು ಬೆಳಗಿದ್ದಾರೆ. ಹಾಗೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಶಿಕ್ಷಕ ಶೇಖರ ಶೆಟ್ಟಿಯವರಿಗೆ ರಾಜ್ಯ ಪ್ರಶಸ್ತಿ ದೊರೆತಿರುವುದು ಶಾಲೆಯ ಮುಕುಟಕ್ಕೆ ಚಿನ್ನದ ಗರಿ ಎಂದರೂ ತಪ್ಪಾಗಲಾರದು. ಆ ಬಳಿಕ ಅವರು ರಾಷ್ಟ್ರ ಪ್ರಶಸ್ತಿಗೂ ಭಾಜನರಾದರು ಹಾಗೂ ಶಾಲೆಯ ಶಿಕ್ಷಕಿ ಶಾಂತ ಪೈ ಅವರು 2021-22ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಭಾಜನರಾಗಿದ್ದರು.

ಒಟ್ಟಾರೆ ಯಡ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಊರಿನ ಪಾಲಿನ ಅಕ್ಷರ ದೇಗುಲ; ಹತ್ತಾರು ರಂಗದಲ್ಲಿ ನೂರಾರು ಮಂದಿ ಸಾಧಕರನ್ನು ಸೃಷ್ಟಿಸಿದ ಪುಣ್ಯ ಸ್ಥಳ. ಇದೀಗ ಈ ಸಂಸ್ಥೆ ಶತಮಾನೋತ್ಸವದ ಸಂಭ್ರಮದಲ್ಲಿದೆ.

ಪರಿಚಯ
ಶತಮಾನಗಳ ಹಿಂದೆ ಈ ಊರಿನಲ್ಲಿ ಅಕ್ಷರ ಕಲಿಯುವ ಆಸೆ ಇದ್ದರೂ ಪೂರಕ ವಾತಾವರಣವಿರಲಿಲ್ಲ. ಬ್ರಿಟೀಷ್‌ ಆಡಳಿತದ ಕಾಲಘಟ್ಟದ ನಡುವೆ ಶಿಕ್ಷಣ ವ್ಯವಸ್ಥೆ ಎನ್ನುವಂತದ್ದು ಜನಸಾಮಾನ್ಯರಿಗೆ ತೆರೆದುಕೊಳ್ಳಲು ಆರಂಭವಾದ ಕಾಲಘಟ್ಟದಲ್ಲಿ ನಮ್ಮೂರ ಸುತ್ತ-ಮುತ್ತಲಿನ ಮಕ್ಕಳು ಅಕ್ಷರವಿಲ್ಲದೆ ಪರಿತಪಿಸಬಾರದು. ನಮ್ಮೂರಿನಲ್ಲೂ ಶಿಕ್ಷಣ ಜ್ಯೋತಿ ಬೆಳಗಬೇಕು ಎನ್ನುವ ಆಸೆಯೊಂದಿಗೆ ಊರಿನ ಹಿರಿಯರೆಲ್ಲ ಅಲ್ತಾರಿನ ನಾಲ್ಕು ಮನೆಯವರ ಮುಂದಾಳತ್ವದಲ್ಲಿ 1924 ಜೂನ್‌ 1ರಂದು ಪಟೇಲರ ಮನೆಯ ಹೆಬ್ಟಾಗಿಲಿನಲ್ಲಿ ಯಡ್ತಾಡಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಯಿತು. ಮನೆಯ ಹೆಬ್ಟಾಗಿಲಿನಲ್ಲಿ ಆರಂಭವಾದ ಶಾಲೆ ಇದೀಗ ಈ ಊರಿನ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಟಾಗಿಲೇ ಆಗಿದ್ದು ಶತಮಾನೋತ್ಸವದ ಹೊಸ್ತಿಲಲ್ಲಿದೆ.

ಶಾಲೆಯಲ್ಲಿ ಪ್ರಸ್ತುತ 1-7ನೇ ತರಗತಿ ತನಕ 97ಮಂದಿ ವಿದ್ಯಾರ್ಥಿಗಳಿದ್ದಾರೆ. ಏಳು ಮಂದಿ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡುತ್ತಿದ್ದು ಇಲ್ಲಿನ ಮಕ್ಕಳು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಬಹುಮಾನಗಳನ್ನು ಗಳಿಸಿದ್ದಾರೆ. ಶಾಲೆಯ ಉನ್ನತಿಗಾಗಿ ಲ್ಯಾಬ್‌, ಆಧುನಿಕ ತಾಂತ್ರಿಕತೆಯ ಕ್ಲಾಸ್‌ ರೂಮ್‌ ಮೊದಲಾದ ವ್ಯವಸ್ಥೆಗಳಿದ್ದು, ಶತಮಾನೋತ್ಸವ ಪ್ರಯುಕ್ತ ಸುಮಾರು 20 ಲಕ್ಷ ವೆಚ್ಚದಲ್ಲಿ ಸಂತೃಪ್ತಿ ಎನ್ನುವ ಅಕ್ಷರ ದಾಸೋಹ ಊಟದ ಕಟ್ಟಡವನ್ನು ನಿರ್ಮಿಸಲಾಗಿದೆ. ಜತೆಗೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದೆ.

ವಿದ್ಯೆ ಕಲಿಸಿದ ಶಾಲೆಯನ್ನು ಸ್ಮರಿಸುವ
ಬುದ್ಧಿ ಕಲಿಸಿದ ತಾಯಿ ತಂದೆ, ವಿಧ್ಯೆ ಕಲಿಸಿದ ಶಾಲೆ ಹಾಗೂ ಅಲ್ಲಿನ ಶಿಕ್ಷಕರು ಜೀವನದಲ್ಲಿ ಎಂದೂ ಮರೆಯದ ವಿಚಾರಗಳಲ್ಲಿ ಒಂದು. ನಾವೆಲ್ಲ ವಿದ್ಯೆ ಕಲಿತ ಈ ಶಾಲೆ ಇದೀಗ ಶತಮಾನೋತ್ಸವದ ಹೊಸ್ತಿಲಲ್ಲಿದೆ. ಹೀಗಾಗಿ ಎಲ್ಲೇ ಇದ್ದರೂ; ಹೇಗೆ ಇದ್ದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾವು ವಿದ್ಯೆ ಕಲಿತ ಶಾಲೆಯ ಋಣ ತೀರಿಸೋಣ.
-ಕರುಣಾಕರ ಹೆಗ್ಡೆ, ಯಡ್ತಾಡಿ ಹೆಗ್ಡೇರಮನೆ, ಅಧ್ಯಕ್ಷರು ಶತಮಾನೋತ್ಸವ ಸಮಿತಿ

ಶಾಲೆ ಅಭಿವೃದ್ಧಿಗೆ ಪೂರಕ
ಶತಮಾನೋತ್ಸವ ಎನ್ನುವುದು ಯಾವುದೇ ಸಂಸ್ಥೆಯ ಮೈಲಿಗಲ್ಲುಗಳಲ್ಲಿ ಒಂದು ಹೀಗಾಗಿ ಈ ಕಾರ್ಯಕ್ರಮದ ಮೂಲಕ ಶಾಲೆಗಾಗಿ ದುಡಿದವರನ್ನು ನೆನಪಿಸಿಕೊಳ್ಳುವ ಮೂಲಕ ಶಾಲೆಯ ಮುಂದಿನ ಅಭಿವೃದ್ಧಿಗೆ ಒಂದಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ.
-ಚಂದ್ರ ನಾಯ್ಕ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ

ಸೇವೆ ಸಲ್ಲಿಸುವುದೇ ಭಾಗ್ಯ
ಶತಮಾನೋತ್ಸವ ಆಚರಿಸುತ್ತಿ ರುವ ಶಾಲೆಯಲ್ಲಿ ಸೇವೆ ಸಲ್ಲಿಸುತ್ತೇವೆ ಎನ್ನುವಂತದ್ದು ಹಾಗೂ ಇಂತಹ ಮಹಾನ್‌ ಕಾರ್ಯಕ್ರಮ ನಮ್ಮ ಅವಧಿಯಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ. ವಿಧ್ಯಾಭಿಮಾನಿಗಳು, ಊರಿನವರು, ಹಳೆ ವಿದ್ಯಾರ್ಥಿಗಳ ಸಹಕಾರದಲ್ಲಿ ಕಾರ್ಯಕ್ರಮದ ತಯಾರಿ ಗಳೆಲ್ಲ ನಡೆದಿದೆ. ನೀವೆಲ್ಲರು ಆಗಮಿಸಿ ಕಾರ್ಯಕ್ರಮ ಚೆಂದಗಾಣಿಸಬೇಕು.
-ಶ್ರೀನಿವಾಸ್‌ ಉಪ್ಪೂರು, ಮುಖ್ಯ ಶಿಕ್ಷಕರು

ನಮ್ಮೂರಿಗೆ ಹೆಮ್ಮೆ
ಶತಮಾನ ಕಂಡ ಶಾಲೆಯೊಂದು ನಮ್ಮೂರಿನಲ್ಲಿ ಇದೆ ಎನ್ನುವುದೇ ನಮ್ಮೂರಿಗೆ-ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಹೀಗಾಗಿ ಈ ಕಾರ್ಯಕ್ರಮವನ್ನು ನಮ್ಮ ಮನೆಯ ಕಾರ್ಯಕ್ರಮ ಎನ್ನುವ ರೀತಿಯಲ್ಲಿ ಸಂಭ್ರಮಿಸಿ ನಾವೆಲ್ಲರೂ ಖುಷಿಪಡಬೇಕಾದ ಅಗತ್ಯವಿದೆ.
-ನಿರಂಜನ ಹೆಗ್ಡೆ, ಅಲ್ತಾರು ,ಮೊಕ್ತೇಸರರು ಶ್ರೀಕ್ಷೇತ್ರ ಕಾಜ್ರಲ್ಲಿ

ಎಲ್ಲರೂ ಜತೆ ಸೇರಲು ಅವಕಾಶ
ಈ ಸಂಸ್ಥೆಯಲ್ಲಿ ವಿದ್ಯೆ ಕಲಿತವರು; ಪಾಠ ಮಾಡಿದವರು ಬೇರೆ-ಬೇರೆ ಕಾರಣದಿಂದ ಬೇರೆ-ಬೇರೆ ಊರುಗಳಲ್ಲಿದ್ದಾರೆ. ಅವರೆಲ್ಲ ಒಟ್ಟಾಗಿ ಒಂದಾಗಿ ನಲಿಯಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಹಾಗಾಗಿ ಇಲ್ಲಿನ ಹಳೆ ವಿದ್ಯಾರ್ಥಿಗಳು, ನಿವೃತ್ತ ಗುರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಬೇಕು.
-ಮಂಜುನಾಥ ಆಚಾರ್‌, ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

1-bharat

Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

6(1

Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ

4

Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್‌

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ

Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.