Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಆಧುನಿಕ ವ್ಯವಸ್ಥೆಗಳಿಗೆ ಸಡ್ಡು ಹೊಡೆಯುವ ಮಕ್ಕಳ ಕೇಂದ್ರ | ಹೊಸ ರೂಪ ನೀಡಿದ ಶಿಕ್ಷಕಿಯ ಪರಿಶ್ರಮ
Team Udayavani, Dec 21, 2024, 3:14 PM IST
ಕುಂದಾಪುರ: ಎಲ್‌ಕೆಜಿ- ಯುಕೆಜಿ, ಬೇಬಿ ಸಿಟ್ಟಿಂಗ್, ಕಿಂಡರ್ ಕಾರ್ಟನ್‌ನಂತಹ ಹೈಟೆಕ್ ಶಿಕ್ಷಣ ವ್ಯವಸ್ಥೆಗಳ ನಡುವೆ ಅಂಗನವಾಡಿ ಕೇಂದ್ರಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ಅಂಗನವಾಡಿ ಕೇಂದ್ರ ಮಾತ್ರ ಈ ಹೈಟೆಕ್ ಶಿಕ್ಷಣ ಸಂಸ್ಥೆಗಳಿಗೆ ಸಡ್ಡು ಹೊಡೆಯುವಂತಿದೆ.
ಬೈಂದೂರು ತಾಲೂಕಿನ ಕುಗ್ರಾಮವಾದ ಕಾಲ್ತೋಡಿನ ಅಂಗನವಾಡಿ ಕೇಂದ್ರವು ಪುಟಾಣಿಗಳ ಕಲಿಕೆಗೆ ಅಗತ್ಯವಾದ ಸಾಮಗ್ರಿಗಳು, ಎಲ್ಲ ಬಗೆಯ ಪಾಠೊಪಕರಣಗಳು, ಆಟಿಕೆಗಳು, ಬಣ್ಣ-ಬಣ್ಣದ ಚಾರ್ಟ್ ಮೇಲೆ ಬರಹ, ಶಿಕ್ಷಕಿ, ಮಕ್ಕಳು ಬಿಡಿಸಿರುವ ಚಿತ್ರಗಳು, ಗೋಡೆ ಬರಹ ಹೀಗೆ ವಿಭಿನ್ನವಾಗಿದೆ. ಕಾಲ್ತೋಡು ಗ್ರಾ.ಪಂ. ಕಚೇರಿಯ ಪಕ್ಕದಲ್ಲಿಯೇ ಈ ಅಂಗನವಾಡಿ ಕೇಂದ್ರವಿದ್ದು, ಇಲ್ಲಿನ ಶಿಕ್ಷಕಿ ಸುಮಾ ಪೂಜಾರಿ ಅವರು ತಮ್ಮ ಅವಿರತವಾದ ಪರಿಶ್ರಮ, ಸಹಾಯಕಿ ಶ್ರೀದೇವಿ ಅವರ ಕಾಳಜಿ ಇದರ ಹಿಂದಿದೆ.
ಕಸವನ್ನೇ ಬಳಸಿ ಕಲಾಕೃತಿಗಳ ರಚನೆ: ಸಮುದ್ರದಲ್ಲಿ ಸಿಗುವ ಕಲ್ಲು, ಚಿಪ್ಪುಗಳಿಗೆ ಬಣ್ಣ ಬಳಿದು ಕೇಂದ್ರದಲ್ಲಿ ಸುಂದರವಾಗಿ ಜೋಡಿಸಲಾಗಿದೆ. ಮೊಟ್ಟೆ ಗೂಡಿ ನಿಂದ ಮೊಲ, ಬಾಟಲಿ ಮುಚ್ಚಳ, ಜ್ಯೂಸ್ ಬಾಟಲಿಯಿಂದ ಹೂವು ರಚಿಸಿ ತೋರಣ ಮಾಡಲಾಗಿದೆ. ಸ್ಪಾಂಜಿನಿಂದ ಗೊಂಬೆ, ಬೆಂಕಿ ಕಡ್ಡಿಯಿಂದ ಹೂವು, ತಯಾರಿ, ಬಾಟಲಿ ಮುಚ್ಚಳದಿಂದ ಕಲಾಕೃತಿಗಳನ್ನು ರಚಿಸಲಾಗಿದೆ.
ವಾರಕ್ಕೊಂದು ವಿಷಯ ಕಲಿಕೆಗೆ ಆದ್ಯತೆ
ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಯ ಭಾಗವಾಗಿ ಪುಟಾಣಿಗಳಿಗೆ ಪ್ರತೀ ತಿಂಗಳು ವಾರಕ್ಕೊಂದು ವಿಷಯಗಳನ್ನು ಕಲಿಸಲು ಆದ್ಯತೆ ನೀಡಲಾಗುತ್ತಿದೆ. ಜನವರಿಯಲ್ಲಿ ಬಣ್ಣಗಳು, ಶಾಲೆ- ಆಸ್ಪತ್ರೆ, ಸೌಕರ್ಯ, ಕಾಡುಪ್ರಾಣಿ – ಸಾಕು ಪ್ರಾಣಿ, ಫೆಬ್ರವರಿಯಲ್ಲಿ ವೇಳೆ- ಋತು, ವಾರಗಳು- ಮಾಸಗಳು, ಸೂರ್ಯ-ಚಂದ್ರ-ನಕ್ಷತ್ರ, ದಿಕ್ಕುಗಳು, ಮಾರ್ಚ್‌ನಲ್ಲಿ ಹಬ್ಬಗಳು, ಪೂಜಾ ಸ್ಥಳ, ಸಂತೆ-ಜಾತ್ರೆ, ನಾಣ್ಯ-ನೋಟುಗಳು, ಎಪ್ರಿಲ್‌ನಲ್ಲಿ ವಾಹನ, ಸಂಪರ್ಕ ಸಾಧನಗಳು, ಅಂಚೆ-ದೂರವಾಣಿ- ಮೊಬೈಲ್, ಮೇನಲ್ಲಿ ಸಂಗೀತ ವಾದ್ಯ, ಆಟ, ಜೂನ್‌ನಲ್ಲಿ ದೇಹದ ಅಂಗಾಂಗಗಳು, ಗಾಳಿ-ಬೆಳಕು, ನಮ್ಮ ಆಹಾರ-ನೀರು, ವೈಯಕ್ತಿಕ ಸ್ವತ್ಛತೆ ಹೀಗೆ ಪ್ರತೀ ವಾರ ಒಂದೊಂದು ವಿಷಯದ ಬಗ್ಗೆ ಚಿಣ್ಣರಿಗೆ ಕಲಾಕೃತಿ, ಚಿತ್ರಗಳೊಂದಿಗೆ ಕಲಿಸಲಾಗುತ್ತಿದೆ.
ಶಿಕ್ಷಕಿಯಿಂದಲೇ ಗೋಡೆ ಸಿಂಗಾರ
ಈ ಅಂಗನವಾಡಿ ಕೇಂದ್ರವು ಶಾಲೆಗಳಲ್ಲಿರುವ ನಲಿ-ಕಲಿ ಕೊಠಡಿಯಂತೆ ಸಿಂಗಾರಗೊಂಡಿದೆ. ಗೋಡೆಯ ಮೇಲೆ ಮಕ್ಕಳ ಕಲಿಕೆಗೆ ಸಹಕಾರಿಯಾಗುವಂತೆ ಕಾಡು, ಆನೆ, ಹುಲಿ, ಚಿರತೆ, ಮಂಗಳ, ಪ್ರಾಣಿ- ಪಕ್ಷಿಗಳ ಚಿತ್ರ, ಗೊಂಬೆಗಳ ಚಿತ್ರಗಳನ್ನು ಈ ಅಂಗನವಾಡಿ ಶಿಕ್ಷಕಿ ಸುಮಾ ಅವರೇ ಬಿಡಿಸಿದ್ದಾರೆ. ಸುಮಾ ಅವರು ಇಲ್ಲಿ 28 ವರ್ಷಗಳಿಂದ ಶಿಕ್ಷಕಿಯಾಗಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ 26 ಮಕ್ಕಳಿದ್ದಾರೆ.
ಇಷ್ಟಪಟ್ಟು ಕಲಿಯುತ್ತಾರೆ
ನನಗೆ ಮೊದಲಿನಿಂದಲೂ ಮಕ್ಕಳಿಗೆ ಕ್ರಿಯಾತ್ಮಕವಾಗಿ ಪಾಠ ಮಾಡುವ ಮೂಲಕ ಬೇಗ ಅರ್ಥ ಮಾಡಿಸಬೇಕು ಅನ್ನುವ ಆಸಕ್ತಿಯಿತ್ತು. ಅದು ಈಗ ಸಾಕಾರಗೊಂಡಿದೆ. ಮಕ್ಕಳು ತುಂಬಾ ಇಷ್ಟಪಟ್ಟು ಕಲಿಯುತ್ತಾರೆ.ಎಲ್ಲ ಕಾರ್ಯಗಳಿಗೂ ಗ್ರಾ.ಪಂ., ಪೋಷಕರು, ಊರವರು, ದಾನಿಗಳು ನೆರವಾಗಿದ್ದಾರೆ.
-ಸುಮಾ ಪೂಜಾರಿ, ಅಂಗನವಾಡಿ ಶಿಕ್ಷಕಿ
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddapura: ಟ್ರಾಯ್‌ನಿಂದ ಕರೆ ಮಾಡುವುದಾಗಿ 10.39 ಲಕ್ಷ ರೂ. ವಂಚನೆ
Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು
Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ
Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
MUST WATCH
ಹೊಸ ಸೇರ್ಪಡೆ
Nuclear Power Plant: ಇನ್ನೊಂದು ಅಣುಸ್ಥಾವರ ಮೂರು ಜಿಲ್ಲೆಗಳಲ್ಲಿ ಪರಿಶೀಲನೆ
Demand: ಕೊರೆವ ಚಳಿಯಲ್ಲೂ ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ
ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ: 21 ಕೋಟಿ ರೂ. ಆಸ್ತಿ ಪತ್ತೆ
Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.