Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
ವಿಶ್ವಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಧ್ಯಾನ ದಿನದಲ್ಲಿ ಶ್ರೀಶ್ರೀ ಅಭಿಮತ
Team Udayavani, Dec 22, 2024, 6:00 AM IST
ವಿಶ್ವಸಂಸ್ಥೆ: ಜಾಗತಿಕ ಶಾಂತಿ ಮತ್ತು ಐಕ್ಯತೆಗೆ ಧ್ಯಾನ ಎಂಬುದು ಬಹುಮುಖ್ಯ ಸಾಧನವಾಗಿದೆ. ಧ್ಯಾನ ಎಂಬುದು ಆಡಂಬರವಲ್ಲ, ಈಗ ಅದು ಅನಿವಾರ್ಯವಾಗಿದೆ ಎಂದು ಶ್ರೀ ಶ್ರೀ ರವಿಶಂಕರ್ ಅವರು ಶನಿವಾರ ಹೇಳಿದ್ದಾರೆ.
ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಸಮಿತಿ ಶನಿ ವಾರ ಆಯೋಜಿಸಿದ್ದ ಮೊದಲ “ವಿಶ್ವ ಧ್ಯಾನ ದಿನ’ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಂದು ಪ್ರಶಾಂತವಾದ ಮನಸ್ಸು ಇತರ ನೂರು ಜನರಿಗೆ ಉತ್ತಮ
ವಾದ ವಾತಾವರಣವನ್ನು ಸೃಷ್ಟಿಸಬಲ್ಲದು. ಧ್ಯಾನವು ಪ್ರತಿಯೊಂದು ವ್ಯಕ್ತಿಗೂ, ಪ್ರತಿಯೊಂದು ಮನೆಗೂ ತಲುಪಬೇಕು. ಇದು ಆಧುನಿಕ ದಿನದ ಸವಾಲುಗಳಾದ ಆತಂಕ, ಕೌಟುಂಬಿಕ ಹಿಂಸಾಚಾರ, ಮಾದಕ ಚಟಗಳಿಂದ ಹೊರಬರುವ ದಾರಿಯಾಗಿದೆ. ಧ್ಯಾನವು ಧರ್ಮಗಳನ್ನು, ಭೂಮಿಯ ಗಡಿಗಳನ್ನು, ವಯೋಮಿತಿಗಳನ್ನು ಮೀರಿರುವಂತದ್ದು. ಇದರಿಂದಾಗಿ ಧ್ಯಾನವು ಜಾಗತಿಕವಾಗಿ ಪ್ರಸಕ್ತವಾಗಿದೆ. ಪ್ರತಿಯೊಂದು ರಾಷ್ಟ್ರವೂ ಸಹ ತನ್ನ ಪ್ರಜೆಗಳಿಗೆ ಹೇಗೆ ವಿಶ್ರಮಿಸುವುದು, ತಮ್ಮ ಭಾವನೆಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಪ್ರಶಿಕ್ಷಣವನ್ನು ನೀಡಿದರೆ, ಈ ಜಗತ್ತು ಬಹಳ ಉತ್ತಮವಾದ ಸ್ಥಳವಾಗುತ್ತದೆ” ಎಂದು ಹೇಳಿದರು. ಜತೆಗೆ, ಧ್ಯಾನವು ಈಗ ಆಯ್ಕೆ ಯಾಗಿ ಉಳಿ ದಿಲ್ಲ. ಅದು ಅಗತ್ಯತೆ ಯಾಗಿ ಮಾರ್ಪಾಡಾಗಿದೆ ಎಂದೂ ಅವರು ನುಡಿ ದ ರು.
ದಿಲ್ಲಿ : ಧ್ಯಾನವನ್ನು ಜೀವನದ ಭಾಗವಾಗಿಸಿಕೊಳ್ಳ ಬೇಕು. ಧ್ಯಾನ ಒಬ್ಬರ ಜೀವನದಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ತುಂಬಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ವಿಶ್ವ ಧ್ಯಾನ ದಿನದ ಅಂಗವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಧ್ಯಾನವನ್ನು ಜೀವನದ ಒಂದು ಭಾಗವಾಗಿ ಮಾಡಿ ಕೊಳ್ಳಬೇಕು ಎಂದು ವಿಶ್ವ ಧ್ಯಾನ ದಿನದಂದು ನಿಮೆಲ್ಲರಿಗೂ ಸಲಹೆ ನೀಡುತ್ತಿದ್ದಾನೆ. ನಿತ್ಯ ಜೀವನದಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳಬೇಕು ಎಂದರು.
ವಿಶ್ವಸಂಸ್ಥೆ: ಧ್ಯಾನ ಎಂಬುದು ಈಗ ಎಲ್ಲಾ ಧರ್ಮ ಮತ್ತು ಗಡಿಗಳನ್ನು ಮೀರುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಇದು ರಾಜತಾಂತ್ರಿಕತೆಯ ಶಕ್ತಿಶಾಲಿ ಸಾಧನವಾಗಿದೆ ಎಂದು ವಿಶ್ವ ನಾಯಕರು ಅಭಿ ಪ್ರಾ ಯ
ಪ ಟ್ಟಿ ದ್ದಾ ರೆ. “ಧ್ಯಾನ ಎಂಬುದು ಧರ್ಮ, ಗಡಿ, ಸಮಯದ ರೇಖೆಯನ್ನು ಮೀರುವ ಶಕ್ತಿ ಹೊಂದಿದೆ. ಒಂದು ಕ್ಷಣ ನಿಲ್ಲಲು ಎಲ್ಲರಿಗೂ ಇದು ಅವಕಾಶ ಒದಗಿಸುತ್ತದೆ. ಈ ಮೂಲಕ ನಾವು ಮತ್ತೂಬ್ಬರನ್ನು ಆಲಿಸ
ಬಹುದು ಅಥವಾ ನಮ್ಮನ್ನೇ ಕೇಳಿಕೊಳ್ಳಬಹುದು’ ಎಂದು ವಿಶ್ವಸಂಸ್ಥೆಯ 79ನೇ ಕಲಾಪದ ಅಧ್ಯಕ್ಷ ಫಿಲೆಮಾನ್ ಯಾಂಗ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
Burqa ban; ಸ್ವಿಟ್ಜರ್ಲೆಂಡ್ ನಲ್ಲಿ ಬುರ್ಖಾ ನಿಷೇಧ ಕಾನೂನು ಜಾರಿ: ಗರಿಷ್ಠ ದಂಡ
Court Verdict: ಹಿಂದೂ ಸಂತ ಚಿನ್ಮಯ್ ದಾಸ್ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.