Udupi: ಮೆಹಂದಿ ಪಾರ್ಟಿ ಮದ್ಯ ವಿತರಣೆಗೂ ಅನುಮತಿ ಕಡ್ಡಾಯ
Team Udayavani, Dec 22, 2024, 6:55 AM IST
ಉಡುಪಿ: ಜಿಲ್ಲೆಯ ಎಲ್ಲ ಇವೆಂಟ್ ಮ್ಯಾನೇಜ್‌ಮೆಂಟ್, ಮದುವೆ ಸಭಾಂಗಣ, ಇತರ ಕಾರ್ಯಕ್ರಮ ಜರಗುವ ಸಭಾಂಗಣ, ಹೋಂ ಸ್ಟೇ, ರೆಸಾರ್ಟ್‌ಗಳ ಮಾಲಕರು ಹಾಗೂ ವ್ಯವಸ್ಥಾಪಕರ ಸಭೆಯು ಜಿಲ್ಲೆಯ ಅಬಕಾರಿ ಉಪಆಯುಕ್ತರ ಕಚೇರಿ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಡಾ| ಬಾಲಕೃಷ್ಣ ಸಿ.ಎಚ್. ಅವರು, ಕ್ರಿಸ್‌ಮಸ್, ಹೊಸ ವರ್ಷ ಆಚರಣೆ ಮತ್ತು ಇತರ ಸಭೆ ಸಮಾರಂಭಗಳಲ್ಲಿ ಊಟದೊಂದಿಗೆ ಮದ್ಯ ಸರಬರಾಜು ಮಾಡಿದ್ದಲ್ಲಿ ಅಬಕಾರಿ ಇಲಾಖೆಯಿಂದ ಕಡ್ಡಾಯವಾಗಿ ಸಿಎಲ್-5 ಸನ್ನದು ಪಡೆದುಕೊಳ್ಳಬೇಕು. ಸಭೆ, ಸಮಾರಂಭಗಳಲ್ಲಿ ಗೋವಾ ಮದ್ಯ/ತೆರಿಗೆ ರಹಿತ ಮದ್ಯ/ನಕಲಿ ಮದ್ಯ ಉಪಯೋಗಿಸದಂತೆ ಸೂಚನೆ ನೀಡಿದರು.
ಮನೆಗಳಲ್ಲಿ ನಡೆಯುವ ಮೆಹಂದಿ ಹಾಗೂ ಇತರ ಸಮಾರಂಭಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಯಾವುದೇ ಅಬಕಾರಿ ಅಕ್ರಮಗಳು ಕಂಡು ಬಂದಲ್ಲಿ ಮೊಕದ್ದಮೆ ದಾಖಲಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು. ಅಕ್ರಮ ಕಂಡು ಬಂದಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತರು (9449597104), ಉಪ ಅಧಿಧೀಕ್ಷಕರು (9482520693) ಅಥವಾ ಜಿಲ್ಲಾತಂಡದ ಅಬಕಾರಿ ನಿರೀಕ್ಷಕರು (9035773785) ಅವರಿಗೆ ದೂರು ಸಲ್ಲಿಸಬಹುದು ಎಂದರು. ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಪಿ. ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.