Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Team Udayavani, Dec 22, 2024, 6:25 AM IST
22-12-2024
ಮೇಷ: ರಜೆಯ ಆನಂದವನ್ನು ಪೂರ್ಣವಾಗಿ ಅನುಭವಿಸಲು ಪ್ರಯತ್ನಿಸಿ. ದಿನವಿಡೀ ಸಾಂಸಾರಿಕ ಜವಾಬ್ದಾರಿ ನಿರ್ವಹಣೆ. ಸಾಮಾಜಿಕ ಕಾರ್ಯಗಳಿಗೆ ಗಮನ. ಬಂಧುವರ್ಗದವರಿಂದ ಶುಭ ಸಮಾಚಾರ. ಸೇವಾ ಕಾರ್ಯಕ್ರಮಗಳಲ್ಲಿ ಭಾಗಿ.
ವೃಷಭ: ಉದ್ಯಮ ಸ್ಥಾನದಲ್ಲಿ ಹೊಸ ವ್ಯವಸ್ಥೆಗೆ ಪ್ರಯತ್ನ. ಸಹೋದ್ಯೋಗಿಗಳೊಡನೆ ಕೌಟುಂಬಿಕ ಸಮ್ಮಿಲನ. ವಿದೇಶದಲ್ಲಿರುವ ಬಂಧು ಗಳೊಡನೆ ದೂರವಾಣಿ ಸಂಭಾಷಣೆ. ಕುತಂತ್ರಿ ಹಿತಶತ್ರುಗಳಿಂದ ಸುಖಕ್ಕೆ ಹಾನಿ.
ಮಿಥುನ: ಕಾಲ್ಪನಿಕ ಬಾಧೆಗಳನ್ನು ನಿರ್ಲಕ್ಷಿಸಿ. ಅಧ್ಯಾತ್ಮಿಕ ಸಾಧನೆಯಲ್ಲಿ ಮುನ್ನಡೆ. ಧಾರ್ಮಿಕ ನಾಯಕರ ಭೇಟಿ. ಉದ್ಯೋಗಾನ್ವೇಷಿಗಳಿಗೆ ಶುಭಕಾಲ. ರಾತ್ರಿಯಲ್ಲಿ ವಾಹನ ಚಾಲನೆ ಮಾಡದಿರಿ. ಕುಲದೇವತಾ ಸನ್ನಿಧಾನಕ್ಕೆ ಭೇಟಿ.
ಕರ್ಕಾಟಕ: ಊರಿನ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿ. ಸಿವಿಲ್ ಎಂಜಿನಿಯರರಿಗೆ ಕೆಲಸದ ಒತ್ತಡ. ವಸ್ತ್ರ ಹಾಗೂ ಖಾದ್ಯವಸ್ತು ವ್ಯಾಪಾರಿಗಳಿಗೆ ಲಾಭ. ಊರಿನ ದೇವಾಲಯಕ್ಕೆ ಭೇಟಿ. ಒಡೆದ ಸಂಸಾರ ಒಗ್ಗೂಡಿಸಲು ಸಹಾಯ.
ಸಿಂಹ: ಸಹಚರರನ್ನು ಕ್ರಿಯೆಯಲ್ಲಿ ತೊಡಗಿಸುವ ಹುಮ್ಮಸ್ಸು. ಲೇವಾದೇವಿ ವ್ಯವಹಾರದಲ್ಲಿ ಅತ್ಯಲ್ಪ ಲಾಭ. ಅವಿವಾಹಿತರಿಗೆ ಶೀಘ್ರ ವಿವಾಹ. ಹಿರಿಯರ , ಗೃಹಿಣಿಯರ ಆರೋಗ್ಯ ಉತ್ತಮ. ಕೇಟರಿಂಗ್ ವ್ಯವಹಾರ ಸುಧಾರಣೆಗೆ ಮಾರ್ಗದರ್ಶನ.
ಕನ್ಯಾ: ಮನಸ್ಥೈರ್ಯ ಕೆಡಿಸುವವರ ಕಾಟ. ಉದ್ಯೋಗ ಬದಲಾವಣೆ ಸಂಭವ. ಪಶುಪಾಲನೆ, ಹೈನುಗಾರಿಕೆಯಿಂದ ಪ್ರಯೋಜನ. ದಂಪತಿಗಳ ನಡುವೆ ಸಾಮರಸ್ಯ ವೃದ್ಧಿ. ಹಿರಿಯರನ್ನು ಸಂತುಷ್ಟಗೊಳಿಸುವ ಕ್ರಮಗಳು.
ತುಲಾ: ಹಿರಿಯರ ಉತ್ತೇಜನದಿಂದ ಕ್ರಿಯಾರಂಭ. ಆಪ್ತಮಿತ್ರರ ಭೇಟಿಯಿಂದ ಸಮಾಧಾನ. ಗೃಹೋದ್ಯಮದ ಕ್ಷೇತ್ರಕ್ಕೆ ಪದಾರ್ಪಣೆ. ಜ್ಞಾನಿಗಳಿಂದ ಜಿಜ್ಞಾಸೆಗೆ ಸಮಾಧಾನ. ವಿನಾಯಕನ ಕ್ಷೇತ್ರ ಸಂದರ್ಶನ.
ವೃಶ್ಚಿಕ: ಆಪ್ತವರ್ಗದ ಹರ್ಷಾಚರಣೆಯಲ್ಲಿ ಭಾಗಿ. ಬಂಧುವರ್ಗದವರಿಗೆ ಸಕಾಲಿಕ ಸಹಾಯ. ಕೃಷಿಭೂಮಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ರೋಗಿಗಳಿಗೆ ಸಾಂತ್ವನ ಹೇಳಲು ಆಸ್ಪತ್ರೆಗೆ ಭೇಟಿ. ನವವಿವಾಹಿತ ಜೋಡಿಯ ಆಗಮನ.
ಧನು: ನಿರಂತರ ಕ್ರಿಯೆಯಿಂದ ಆನಂದ. ಪರೋಪಕಾರ ಗುಣದಿಂದ ಸರ್ವಜನರ ಗೌರವ. ಒಡೆದ ಮನಸ್ಸುಗಳನ್ನು ಬೆಸೆದ ತೃಪ್ತಿ. ಆಸ್ಪತ್ರೆ, ಅನಾಥಾಶ್ರಮಗಳಿಗೆ ಭೇಟಿ, ನೊಂದವರಿಗೆ ಸಾಂತ್ವನ ಹೇಳಿ ಆನಂದ.
ಮಕರ: ಉದ್ಯೋಗದ ಜಂಜಾಟಗಳಿಗೆ ವಿರಾಮ. ಹೊಸ ಉದ್ಯೋಗ ಅರಸುವಿಕೆ ಯಲ್ಲಿ ಮುನ್ನಡೆ. ಅಂಚೆ ಮೂಲಕ ಶಿಕ್ಷಣ ಪ್ರಗತಿಯಲ್ಲಿ. ತಾಯಿಯ ಕಡೆಯ ಬಂಧುಗಳ ಆಗಮನ. ವಸ್ತ್ರ, ಆಭರಣ, ಶೋಕಿವಸ್ತು ವ್ಯಾಪಾರಿಗಳಿಗೆ ಲಾಭ.
ಕುಂಭ: ಮಿತ್ರರ ಹೊಸ ಉತ್ಪನ್ನಗಳ ಪ್ರಚಾರಕ್ಕೆ ಸಹಾಯ. ಬರಬೇಕಾದ ಬಾಕಿ ಕೈಸೇರಿದ ಸಮಾಧಾನ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಸಾಮಾಜಿಕ ಕಾರ್ಯಕರ್ತರಿಗೆ ಸಮ್ಮಾನ. ಅವಿವಾಹಿತರಿಗೆ ವಿವಾಹ ಯೋಗ.
ಮೀನ: ಸಂತೃಪ್ತಿಯೊಂದಿಗೆ ವಿರಾಮ ಆಚರಣೆ. ಹಿರಿಯರ ಸಮ್ಮಾನದಿಂದ ಸಂತೃಪ್ತಿ. ಕೃಷಿಭೂಮಿಯಲ್ಲಿ ಕೈಗೊಂಡ ಪ್ರಯೋಗ ಪ್ರಗತಿಯಲ್ಲಿ. ಕೌಟುಂಬಿಕ ವ್ಯವಹಾರಕ್ಕಾಗಿ ಪ್ರಯಾಣ. ಅಸಹಾಯಕರ ಸಹಾಯದ ಕರೆಗೆ ಸ್ಪಂದನ. ಮಕ್ಕಳ ಓದಿನ ಬಗ್ಗೆ ಗಮನಹರಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.