Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Team Udayavani, Dec 22, 2024, 7:35 PM IST
ಹುಣಸೂರು: ವನ್ಯಪ್ರಾಣಿ ದಾಳಿಗೆ ಎತ್ತೊಂದು ಬಲಿಯಾಗಿರುವ ಘಟನೆ ನಾಗರಹೊಳೆ ಉದ್ಯಾನದಂಚಿನ ಗುರುಪುರ ಗ್ರಾ.ಪಂ.ವ್ಯಾಪ್ತಿಯ ಹುಣಸೆಕಟ್ಟೆ ಹಳ್ಳದಲ್ಲಿ ನಡೆದಿದೆ.
ಹೊಸೂರು ಗೇಟ್ನ ರೈತ ಸ್ವಾಮಿಯವರಿಗೆ ಸೇರಿದ ಸುಮಾರು 70 ಸಾವಿರ ರೂ ಬೆಲೆ ಬಾಳುವ ಎತ್ತು ಇದಾಗಿದೆ. ಶನಿವಾರ ತಮ್ಮ ಜಮೀನಿನಲ್ಲಿ ಇತರೆ ಜಾನುವಾರುಗಳೊಂದಿಗೆ ಮೇಯಲು ಬಿಟ್ಟಿದ್ದ ವೇಳೆ ಹುಲಿ ಅಥವಾ ಚಿರತೆ ದಾಳಿ ಇಟ್ಟು ಕೊಂದು ಸುಮಾರು 500ಮೀಟರ್ನಷ್ಟು ದೂರದ ಹುಣಸೆಕಟ್ಟೆ ಹಳ್ಳದ ಕುರುಚಲು ಕಾಡು ಪ್ರದೇಶಕ್ಕೆ ಎಳೆದೊಯ್ದು ಕೆಲ ಭಾಗ ತಿಂದು ಹಾಕಿದೆ.
ವನ್ಯಪ್ರಾಣಿಯ ದಾಳಿಗೆ ಬೆದರಿದ ಇತರೆ ಜಾನುವಾರುಗಳು ಮನೆ ಕಡೆ ಪೇರಿ ಕಿತ್ತಿದ್ದರೆ, ಜೋಡಿ ಎತ್ತಿನ ಪೈಕಿ ಒಂದು ಎತ್ತು ಬಾರದನ್ನು ಗಮನಿಸಿದ ಮನೆಯವರು ಹುಡುಕಾಟ ನಡೆಸಿದ ವೇಳೆ ಹುಣಸೆಕಟ್ಟೆ ಹಳ್ಳಿದಲ್ಲಿ ಎತ್ತಿನ ಶವ ಪತ್ತೆಯಾಗಿದೆ.
ಮಾಹಿತಿ ಮೇರೆಗೆ ಪ್ರಾದೇಶಿಕ ಅರಣ್ಯ ವಿಭಾಗದ ಡಿಆರ್ಎಫ್ಓ ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿ ಭೇಟಿ ಇತ್ತು ಪರಿಶೀಲಿಸಿ, ಮಹಜರ್ ನಡೆಸಿದ್ದಾರೆ. ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ರೈತ ಸ್ವಾಮಿ ಮನವಿ ಮಾಡಿದ್ದಾರೆ. ಇದು ಹುಲಿಯೋ ಅಥವಾ ಚಿರತೆಯೋ ಎಂಬುದು ತಿಳಿದು ಬಂದಿಲ್ಲ. ಪರಿಹಾರ ಕಲ್ಪಿಸಲು ಕ್ರಮವಹಿಸಲಾಗಿದೆ ಎಂದು ಆರ್.ಎಫ್.ಓ. ನಂದಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.