Pro Kabaddi: ಬೆಂಗಳೂರು ಬುಲ್ಸ್ ಗೆ 18ನೇ ಸೋಲು
ತಲೈವಾಸ್ ವಿರುದ್ಧ 42-32ರ ಸೋಲು
Team Udayavani, Dec 22, 2024, 11:53 PM IST
ಪುಣೆ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 11ನೇ ಆವೃತ್ತಿಯಲ್ಲಿ ಅತೀ ಕಳಪೆ ಪ್ರದರ್ಶನ ನೀಡಿರುವ ಬೆಂಗಳೂರು ಬುಲ್ಸ್ ತಂಡ ತನ್ನ ಸೋಲಿನ ಓಟವನ್ನು ರವಿವಾರವೂ ಮುಂದುವರಿಸಿತು. ತಮಿಳ್ ತಲೈವಾಸ್ ವಿರುದ್ಧದ ಪಂದ್ಯದಲ್ಲಿ ಅದು 42-32 ಅಂತರದ ಸೋಲನುಭವಿಸಿತು. ಇದು ಕೂಟದಲ್ಲಿ ಆಡಿದ 21 ಪಂದ್ಯಗಳಲ್ಲಿ ಬುಲ್ಸ್ ಅನುಭವಿಸಿದ 18ನೇ ಸೋಲು. ಇನ್ನೊಂದೆಡೆ ತಲೈವಾಸ್ ತಂಡ ಆಡಿದ 21 ಪಂದ್ಯಗಳಲ್ಲಿ 8ನೇ ಗೆಲುವು ದಾಖಲಿಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ ತಂಡವು ಯು ಮುಂಬಾ ತಂಡವನ್ನು 47-30 ಅಂಕಗಳಿಂದ ಮಣಿಸಿದೆ. ಈ ಗೆಲುವಿ ನಿಂದ ಹರಿಯಾಣ ತಾನಾಡಿದ 22 ಪಂದ್ಯ ಗಳಿಂದ 16 ಪಂದ್ಯ ಗಳಲ್ಲಿ ಜಯಭೇರಿ ಬಾರಿಸಿ ಒಟ್ಟಾರೆ 84 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಹರಿಯಾಣ ಈ ಪಂದ್ಯದಲ್ಲಿ ರೈಡಿಂಗ್ ಮೂಲಕ 22 ಮತ್ತು ಟ್ಯಾಕಲ್‌ನಲ್ಲಿ 17 ಅಂಕ ಸಂಪಾದಿಸಿತು. ತಂಡದ ಶಿವಂ ಪತಾರೆ ರೈಡಿಂಗ್‌ನಲ್ಲಿ 9 ಅಂಕ ಸಹಿತ ಒಟ್ಟು 14 ಅಂಕ ಗಳಿಸಿದರೆ ವಿನಯ್ ಆರಂಕ ಪಡೆದರು. ಮುಂಬಾ ತಂಡದ ಸತೀಶ್ ಕಣ್ಣನ್ ರೈಡಿಂಗ್‌ನಲ್ಲಿ ಒಟ್ಟು 9 ಅಂಕ ಪಡೆದರು.
ತಮಿಳ್ ಭರ್ಜರಿ ಪ್ರದರ್ಶನ
ತಮಿಳ್ ತಲೈವಾಸ್ ಪರ ಹಿಮಾಂಶು ಮತ್ತು ಮೋಯಿನ್ ಶಫಾ ಭರ್ಜರಿ ಪ್ರದರ್ಶನ ನೀಡಿದರು. ರೈಡರ್ ಹಿಮಾಂಶು 13 ಅಂಕ ಗಳಿಸಿದರೆ, ಮೋಯಿನ್ 9 ಅಂಕ ಗಳಿಸಿದರು. ಅಮಿರ್ ಹೊಸೈನ್ 4, ಸಾಯಿಪ್ರಸಾದ್, ಎಂ.ಅಭಿಷೇಕ್, ನಿತೇಶ್ ಕುಮಾರ್ ತಲಾ 3 ಅಂಕ ಗಳಿಸಿ ತಂಡವನ್ನು ಬೆಂಬಲಿಸಿದರು. ಬುಲ್ಸ್ ಪರ ಸುಶೀಲ್ 15 ಅಂಕ ಗಳಿಸಿ ಹೋರಾಟ ನೀಡಿದರಾದರೂ ಉಳಿದ ಆಟಗಾರರ ಬೆಂಬಲವಿಲ್ಲದೆ ತಂಡ ಸೊರಗಿತು.
ಇಂದಿನ ಪಂದ್ಯ
1. ಗುಜರಾತ್ vs ಡೆಲ್ಲಿ
ಆರಂಭ: ರಾತ್ರಿ 8 ಗಂಟೆ
2. ಪುನೇರಿ vs ತಮಿಳ್
ಆರಂಭ: ರಾತ್ರಿ 9 ಗಂಟೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.