Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Team Udayavani, Dec 23, 2024, 1:16 AM IST
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠದಲ್ಲಿ ರವಿವಾರ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಯುವ ಗೀತೋತ್ಸವ ನಡೆಯಿತು. ಯುವ ಸಾಹಿತಿ, ಸಂಶೋಧಕರು ಗೀತೆಯ ಮಹತ್ವವನ್ನು ವಿಶ್ಲೇಷಿಸಿದರು.
ಆಧುನಿಕ ಯುಗದ ಒತ್ತಡ- ಸಮಸ್ಯೆಗಳಿಗೆ ಪರಿಹಾರ, ವಿದ್ಯಾ ಭ್ಯಾಸದ ಗೊಂದಲಗಳಿಗೆ ಉತ್ತರ, ಹದಿಹರೆಯದವರ ಮಾನಸಿಕ ತಲ್ಲಣಗಳಿಗೆ ಸಮಾಧಾನ, ಯುವ ಜನರ ಬದುಕಿಗೆ ಭಗವದ್ಗೀತೆಯ ಭರವಸೆಯ ಬೆಳಕಿನ ಆಶಯ ದೊಂದಿಗೆ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕುರಿತ ಕಾರ್ಯಾಗಾರ ನಡೆಯಿತು.
ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರು ಮಾತನಾಡಿ ಶಾಸ್ತ್ರಗಳಲ್ಲಿ ಸಾರಭೂತವಾದದ್ದು ಮಹಾಭಾರತ. ಸಮಸ್ತ ಶಾಸ್ತ್ರಗಳ ಸಾರವಾಗಿದೆ. ಅಧ್ಯಯನ ಶೀಲರಿಗೆ ಬೇಕಿರುವ ಹಲವು ಎಚ್ಚರಿಕೆಯನ್ನು ಗೀತೆ ನೀಡುತ್ತದೆ. ಗೀತೆಯ ಅಭ್ಯಾಸದಿಂದ ಹಲವು ಉಪಯೋಗವಿದೆ ಎಂದು ಹೇಳಿದರು.
ಡಾ| ವಿಶ್ವನಾಥ ಸುಂಕಸಾಳ, ನಚಿಕೇತ್ ಹೆಗಡೆ, ಡಾ| ನವೀನ್ ಗಂಗೋತ್ರಿ ಭಗವದ್ಗೀತೆಯ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾರ್ಯಾ ಗಾರ ನಡೆಸಿಕೊಟ್ಟರು. ರೋಹಿತ್ ಚಕ್ರತೀರ್ಥ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.