Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Team Udayavani, Dec 23, 2024, 12:58 PM IST
ಜೈಪುರ: ಕಳೆದೊಂದು ದಶಕದಿಂದ ಹಲವು ಯುವಕರನ್ನು ವಿವಾಹವಾಗಿ ಕೋಟಿಗೂ ಹೆಚ್ಚು ಹಣ ಪೀಕಿದ್ದ ಖತರ್ನಾಕ್ ಯುವತಿಯನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗಿ ಬಳಿಕ ವರನ ಮೇಲೆ ಕೇಸು ಹಾಕಿ ನಂತರ ಸೆಟಲ್‌ಮೆಂಟ್ ಹೆಸರಿನಲ್ಲಿ ಹಣ ಪೀಕುತ್ತಿದ್ದಳು. ಹೀಗೆ ಸುಮಾರು 1.25 ಕೋಟಿ ರೂ ಹಣ ವಸೂಲಿ ಮಾಡಿದ್ದಳು.
ಉತ್ತರಾಖಂಡ್ ನ ಸೀಮಾ ಅಲಿಯಾಸ್ ನಿಕ್ಕಿ ಈ ಬಂಧಿತ ಕಿಲಾಡಿ ಹೆಣ್ಣು. ಮೊದಲು 2013ರಲ್ಲಿ ಆಗ್ರಾದ ಉದ್ಯಮಿಯೊಬ್ಬರನ್ನು ಮದುವೆಯಾದ ಈಕೆ ಕೆಲ ಸಮಯದ ನಂತರ ಆ ವ್ಯಕ್ತಿಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಕೊನೆಯ ರಾಜಿ ಪಂಚಾಯತಿಯಾಗಿ 75 ಲಕ್ಷ ರೂ ವಸೂಲಿ ಮಾಡಿದ್ದಳು.
2017 ರಲ್ಲಿ ಇದೇ ಸೀಮಾ ಗುರುಗ್ರಾಮ್‌ನ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಮದುವೆಯಾದಳು. ಅವನಿಂದ ಬೇರೆಯಾದ ನಂತರ ಆ ವ್ಯಕ್ತಿಯಿಂದ 10 ಲಕ್ಷ ರೂ ಸೆಟಲ್‌ಮೆಂಟ್ ರೂಪದಲ್ಲಿ ತೆಗೆದುಕೊಂಡಿದ್ದಳು.
2023 ರಲ್ಲಿ ಜೈಪುರ ಮೂಲದ ಉದ್ಯಮಿಯನ್ನು ಸೀಮಾ ವಿವಾಹವಾಗಿದ್ದಳು. ಮದುವೆಯಾಗಿ ಕೆಲವೇ ಸಮಯದಲ್ಲಿ 36 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಅವರ ಮನೆಯಿಂದ ಪರಾರಿಯಾಗಿದ್ದರು. ಕುಟುಂಬದವರು ಪ್ರಕರಣ ದಾಖಲಿಸಿದ ನಂತರ ಜೈಪುರ ಪೊಲೀಸರು ಸೀಮಾಳನ್ನು ಬಂಧಿಸಿದ್ದಾರೆ.
ಸೀಮಾ ತನ್ನ ಬಲಿಪಶುಗಳನ್ನು ಮ್ಯಾಟ್ರಿಮೋನಿಯಲ್ ಸೈಟ್ ಗಳಲ್ಲಿ ಹುಡುಕುತ್ತಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಸಾಮಾನ್ಯವಾಗಿ ವಿಚ್ಛೇದನ ಪಡೆದ ಅಥವಾ ತಮ್ಮ ಹೆಂಡತಿಯನ್ನು ಕಳೆದುಕೊಂಡಿರುವ ಪುರುಷರಿಗಾಗಿ ಸೀಮಾ ಬಲೆ ಬೀಸುತ್ತಿದ್ದಳು. ಬೇರೆ ಬೇರೆ ರಾಜ್ಯಗಳಲ್ಲಿ ಮದುವೆಯಾಗಿ ವಿವಿಧ ಪ್ರಕರಣಗಳಲ್ಲಿ ಒಟ್ಟು 1.25 ಕೋಟಿ ರೂ ವಸೂಲಿ ಮಾಡಿದ್ದಾಳೆ.
ಮದುವೆಯ ನಂತರ, ಕುಟುಂಬದೊಂದಿಗೆ ವಿಶ್ವಾಸವನ್ನು ಬೆಳೆಸಲು ಮೂರು ನಾಲ್ಕು ತಿಂಗಳುಗಳನ್ನು ಅವರೊಂದಿಗೆ ಕಳೆಯುತ್ತಿದ್ದಳು. ಬಳಿಕ ಅವರ ಆಸ್ತಿಯೊಂದಿಗೆ ಪರಾರಿಯಾಗುತ್ತಿದ್ದಳು.
2023 ಜುಲೈ 29ರಂದು ಜೈಪುರ ಆಭರಣ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ತಮ್ಮ ಮೊದಲ ಪತ್ನಿಯ ನಿಧನದ ನಂತರ, ಅವರು ಮ್ಯಾಟ್ರಿಮೋನಿಯಲ್ ಅಪ್ಲಿಕೇಶನ್ ಮೂಲಕ ಸೀಮಾ ಪರಿಚಯ ಮಾಡಿಕೊಂಡಿದ್ದರು. ಡೆಹ್ರಾಡೂನ್‌ನಲ್ಲಿ ಆಕೆಯನ್ನು ಭೇಟಿ ಮಾಡಿ, ಕಳೆದ ವರ್ಷ ಫೆಬ್ರವರಿಯಲ್ಲಿ ಆಕೆಯನ್ನು ಮದುವೆಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.