Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Team Udayavani, Dec 24, 2024, 7:28 AM IST
ಮೇಷ: ಒಮ್ಮೊಮ್ಮೆ ಲೆಕ್ಕಾಚಾರ ತಪ್ಪುವುದು ಸ್ವಾಭಾವಿಕ. ಅನಾರೋಗ್ಯದ ಕಾಟದಿಂದ ಬಿಡುಗಡೆ. ಹಿರಿಯರಿಗೆ ನೆಮ್ಮದಿಯ ವಾತಾವರಣ.ಉದ್ಯೋಗಸ್ಥರಿಗೆ ಪದೋನ್ನತಿಯ ಸೂಚನೆ. ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ.
ವೃಷಭ: ಒಳ್ಳೆಯ ಕೆಲಸಗಳಿಗೆ ದೈವಾನುಗ್ರಹ.ಉದ್ಯೋಗ ರಂಗದಲ್ಲಿ ಖಾತೆ ಬದಲಾವಣೆ. ವ್ಯವಹಾರ ಕ್ಷೇತ್ರದಲ್ಲಿ ತಗ್ಗಿದ ಪೈಪೋಟಿ. ನಿರೀಕ್ಷಿತ ಲಾಭ ಕೈಸೇರಿ ಹರ್ಷ. ಕೃಷಿ ಸಾಧನಗಳು, ರಸಗೊಬ್ಬರ ಮೊದಲಾದವುಗಳ ವ್ಯಾಪಾರಿಗಳಿಗೆ ಶುಭ ಸೂಚನೆ.
ಮಿಥುನ: ಒಂದೊಮ್ಮೆಗೆ ಹಾಯೆನಿಸುವ ಅನುಭವ. ಪುಟ್ಟ ಸಮಸ್ಯೆಗಳಿಗೆ ಹೆದರುವುದು ಬೇಡ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ನಿರೀಕ್ಷಿತ ಆರ್ಥಿಕ ನೆರವು ಕೈಸೇರಿ ಸಮಾಧಾನ. ಬೌದ್ಧಿಕ ಕೆಲಸಗಾರರಿಗೆ ಕಿರಿಕಿರಿ.
ಕರ್ಕಾಟಕ: ಆಯೋಜಿತ ಕಾರ್ಯಗಳಿಗೆ ಚಾಲನೆ. ನಿರೀಕ್ಷಿತ ನೆರವು ವಿಳಂಬ. ಗೃಹಿಣಿಯರ ಉದ್ಯಮಗಳಿಗೆ ಉತ್ತೇಜನ. ಹಿರಿಯರಿಗೆ ಸ್ಥಾನ ಗೌರವದಿಂದ ಸಮಾಧಾನ. ತಾಂತ್ರಿಕ ದುಡಿಮೆಗಾರರಿಗೆ ಶುಭ ಸಮಾಚಾರ.
ಸಿಂಹ: ಅನುಕರಣೀಯ ಸಾಧನೆಗಳಿಂದ ಜನಾದರ ಪ್ರಾಪ್ತಿ. ಹೊಸ ಕ್ಷೇತ್ರಕ್ಕೆ ಕಾಲಿಡುವ ಸಿದ್ಧತೆ. ಪಶ್ಚಿಮ ದಿಕ್ಕಿನಿಂದ ಶುಭ ಸಮಾಚಾರ. ಹಿರಿಯರಲ್ಲಿ ಹಿಗ್ಗಿದ ಜೀವನೋತ್ಸಾಹ. ಆಸ್ತಿ ವಿವಾದ ಮಾತುಕತೆಯಲ್ಲಿ ಪರಿಹರಿಸಲು ಸಹಾಯ.
ಕನ್ಯಾ: ಸತ್ಕಾರ್ಯಕ್ಕೆ ನೆರವಾಗುವ ಅವಕಾಶ. ಪಾಲುದಾರರೊಂದಿಗೆ ಪ್ರಯಾಣ. ಗುರು ಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ನೈಸರ್ಗಿಕ ಕೃಷಿಯಲ್ಲಿ ಆಸಕ್ತರಿಗೆ ಸಂತೋಷದ ಸುದ್ದಿ. ಬಡಮಕ್ಕಳ ವಿದ್ಯಾರ್ಜನೆಗೆ ಸಹಾಯ.
ತುಲಾ: ಪಂಚಮ ಶನಿಯ ಬಾಧೆಯಿದ್ದರೂ ಭಯಪಡುವ ಸನ್ನಿವೇಶ ಇಲ್ಲ. ಭಗವತ್ ಕೈಂಕರ್ಯದಿಂದ ಜೀವನ ಯಾತ್ರೆ ಸುಗಮ.ಬಂಧುವರ್ಗದಲ್ಲಿ ವಿವಾಹ ನಿಶ್ಚಯ. ಹೊಲಿಗೆ ಕೆಲಸ ಬಲ್ಲವರಿಗೆ ವಿಶೇಷ ಅವಕಾಶ.
ವೃಶ್ಚಿಕ: ಕುಟುಂಬದ ಸಂತೋಷ ಕೂಟದಲ್ಲಿ ಭಾಗಿ. ಸ್ವತಂತ್ರ ವ್ಯವಹಾರಸ್ಥರಿಗೆ ಉತ್ತೇಜನದ ಕ್ರಮ. ಬಂಧುವರ್ಗದಲ್ಲಿ ಶುಭಕಾರ್ಯಕ್ಕೆ ಸಹಾಯ.ಕೃಷಿ ಉತ್ಪನ್ನ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ವ್ಯವಹಾರದ ಸಂಬಂಧ ಉತ್ತರಕ್ಕೆ ಪ್ರಯಾಣ.
ಧನು: ಉಪಕಾರ ನಿರೀಕ್ಷಿಸುವವರಿಗೆ ಸಹಾಯ. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ. ಸಾಕುಪ್ರಾಣಿಗಳಿಂದ ತೊಂದರೆಯ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರ. ಮನೆಯಲ್ಲಿ ಆಭರಣ ತಯಾರಿಸುವವರಿಗೆ ಬೇಡಿಕೆ.
ಮಕರ: ಸಾಂಸಾರಿಕ, ಉದ್ಯೋಗ ಕ್ಷೇತ್ರಗಳಲ್ಲಿ ತೃಪ್ತಿ. ಅನುಭವ ಇರುವ ಕೆಲಸವೊಂದನ್ನು ನಿರ್ವಹಿಸಲು ಕರೆ. ವಾಹನ ದುರಸ್ತಿ ಕೆಲಸಗಾರರಿಗೆ, ಔಷಧ ವ್ಯಾಪಾರಿಗಳಿಗೆ ಲಾಭ. ಪ್ರಾಚೀನ ಪದ್ಧತಿ ಯಿಂದ ದೇಹಾರೋಗ್ಯ ವೃದ್ಧಿ.
ಕುಂಭ: ಒಮ್ಮೊಮ್ಮೆ ಏನು ಮಾಡಿದರೂ ಪ್ರತಿಕೂಲ ಪರಿಣಾಮ. ಹಿರಿಯರ ಆರೋಗ್ಯದಲ್ಲಿ ಎಚ್ಚರ. ಕಮಿಶನ್ ಏಜೆಂಟರಿಗೆ, ಲೈನ್ ಸೇಲ್ಸ್ ಮಾಡುವವರಿಗೆ ಪೈಪೋಟಿ. ದಸ್ತಾವೇಜು ಬರಹಗಾರರ ವ್ಯವಹಾರ ವೃದ್ಧಿ. ಅನಿರೀಕ್ಷಿತ ಅತಿಥಿ ಸತ್ಕಾರ ಯೋಗ.
ಮೀನ: ಉದ್ಯೋಗಸ್ಥರಿಗೆ ಹೊಸ ವಿಭಾಗದ ಹೊಣೆಗಾರಿಕೆ.ಸಾಮಾಜಿಕ ರಂಗದಿಂದ ಒತ್ತಡ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲದ ದಿನ. ಸಂಸಾರದಲ್ಲಿ ಪ್ರೀತಿ, ಅನುರಾಗ, ವಿಶ್ವಾಸ ವೃದ್ಧಿ. ಸರಕಾರಿ ಇಲಾಖೆಗಳಿಂದ ಸಹಾಯ. ದೇವಿ ದೇವಸ್ಥಾನಕ್ಕೆ ಭೇಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.