ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಗಾಯ ಆಗಿಲ್ಲವೆಂದರೆ ಎಷ್ಟು ದಿನ ನಾಟಕ ಮಾಡಲು ಆಗುತ್ತೆ?, ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ತಿರುಗೇಟು
Team Udayavani, Dec 23, 2024, 9:46 PM IST
ಚಿಕ್ಕಮಗಳೂರು: ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ. ತಲೆ ಮುಂಭಾಗದಲ್ಲಿ ಭಾರೀ ಪ್ರಮಾಣದ ತೂತು ಬಿದ್ದಿದೆ. ಎರಡು ದಿನ ಬ್ಯಾಂಡೇಜ್, ಆಮೇಲೆ ಆಯಿಟ್ಮೆಂಟ್ ಹಾಕಬೇಕು. ಕೂದಲಿನ ಮೇಲೆ ಬ್ಯಾಂಡೇಜ್ ಸ್ಟಿಕ್ಕರ್ ನಿಲ್ಲಲ್ಲ. ಹಾಗಾಗಿ ಬ್ಯಾಂಡೇಜ್ ಹಾಕಿದ್ದಾರೆ. ಗಾಯ ಆಗಿಲ್ಲ ಅಂದ್ರೆ ಎಷ್ಟು ದಿನ ನಾಟಕ ಮಾಡಲು ಆಗುತ್ತೆ ಎಂದು ಸಿ.ಟಿ.ರವಿ ಪತ್ನಿ ಪಲ್ಲವಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಸಿ.ಟಿ.ರವಿ ಒಳ್ಳೇ ಡ್ರಾಮಾ ಮಾಸ್ಟರ್ ಎನ್ನುವ ಹೆಬ್ಬಾಳ್ಕರ್ ಅವರು ಮ್ಯಾನ್ ಹ್ಯಾಂಡ್ಲಿಂಗ್ ಮಾಡಿಸಿ ಸುತ್ತಾಡಿಸಿದ್ದರಿಂದ ಜ್ವರ ಬಂದಿದೆ. ದಿನಾ ನಾಟಕ ಮಾಡೋರು ಅದೇ ರೀತಿ ಇರ್ತಾರೆ, ಹೇಳುವರಿಗೇನು ಏನು ಬೇಕಾದರೂ ಹೇಳ್ತಾರೆ. ಲಕ್ಷ್ಮೀಯವರು ಸಿ.ಟಿ.ರವಿಗೆ ಅಕ್ಕ, ತಂಗಿ, ಅಮ್ಮ ಹೆಂಡ್ತಿ ಇಲ್ವಾ ಎಂದಿದ್ದಾರೆ. ಅವರಿಗೆ ಎಲ್ಲರೂ ಇದ್ದಾರೆ. ಅಮ್ಮ ಇಲ್ಲದಿದ್ರೆ ಭೂಮಿಗೆ ಬರೋದಾದ್ರು ಹೇಗೆ, ಸಿ.ಟಿ.ರವಿಗೆ ಅವರದ್ದೇ ಆದ ಸಂಸ್ಕಾರ ಇದೆ. ಅವರಿಗೆ (ಲಕ್ಷ್ಮೀ ಹೆಬ್ಬಾಳ್ಕರ್ ) ಹಾಗೇ ಹೇಳುವುದು ರೂಢಿಯಾಗಿದೆ ಎನಿಸುತ್ತದೆ. ಒರಟುತನದ ಮಾತು ಅವರಿಗೆ ಅಭ್ಯಾಸ ಆಗಿದೆ ಎಂದರು.
ಸದನದ ಒಳಗೆ ನಡೆದಿರುವುದನ್ನು ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮವರೆಗೂ ಏಕೆ ತಂದರು ಅರ್ಥವಾಗುತ್ತಿಲ್ಲ. ಸಿ.ಟಿ.ರವಿಗೆ ಅವರದ್ದೇ ಆದ ಸಂಸ್ಕಾರ ಇದೆ. ರಾಜಕಾರಣಿ ಹೇಗಿರಬೇಕು ಎನ್ನುವುದನ್ನು ಅವರಿಂದ ನಾನು ಕಲಿತ್ತಿದ್ದೇನೆ. ತುಂಬಾ ಜನಕ್ಕೆ ನಾನೇ ಹೇಳ್ತೀನಿ, ಸಿ.ಟಿ.ರವಿ ಜತೆ ಇದ್ರೆ ಊಟ, ತಿಂಡಿ ಸಿಗಲ್ಲ, ಬಿ.ಪಿ., ಶುಗರ್ ಇರುವವವರು ಅವರ ಜತೆ ಹೋಗಬೇಡಿ ಅಂತಾ ನಾನೇ ಹೇಳ್ತಿನಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.