Kundapura: ಎಲ್ಲೆಡೆ ಹರಡಿದೆ ಕ್ರಿಸ್ಮಸ್ ಸಡಗರ
ಚರ್ಚ್, ಮನೆಗಳಲ್ಲಿ ಗೋದಲಿ ನಿರ್ಮಾಣ, ವಿದ್ಯುದ್ದೀಪಾಲಂಕಾರ
Team Udayavani, Dec 24, 2024, 1:24 PM IST
ಕುಂದಾಪುರ: ಚರ್ಚ್ ಗಳಲ್ಲಿ, ಕ್ರೈಸ್ತರ ಮನೆಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಪೂರ್ವಸಿದ್ಧತೆ ಭರದಿಂದ ಸಾಗಿದೆ. ನಗರದ ಅಂಗಡಿಗಳಲ್ಲಿ, ಬೇಕರಿಗಳಲ್ಲಿ ಖರೀದಿ ಪ್ರಕ್ರಿಯೆಯ ಭರಾಟೆಯೂ ಜೋರಾಗಿದೆ. ಚರ್ಚ್‌ಗಳು, ಮನೆಯಂಗಳದಲ್ಲಿ ಗೋದಲಿ ನಿರ್ಮಾಣ, ಕ್ರಿಸ್ಮಸ್ ಟ್ರೀ ಅನಾವರಣ, ದೀಪಾಲಂಕಾರ, ಬೃಹತ್ ಗೂಡುದೀಪಗಳ ಜೋಡಣೆ ಅಲ್ಲಲ್ಲಿ ಗಮನ ಸೆಳೆಯುತ್ತಿವೆ. ವಿವಿಧ ಬೇಕರಿಯಲ್ಲಿ ವೈವಿಧ್ಯಮಯ ವಿನ್ಯಾಸದ ಕೇಕ್‌ಗಳು, ಪರಿಮಳ ಬೀರುವ ಕುಸ್ವಾರ್‌ಗಳ ಮಾರಾಟ ಹಾಗೂ ಅಂಗಡಿಗಳಲ್ಲಿ ಕ್ರಿಸ್ಮಸ್ ಟ್ರೀ, ಗೂಡುದೀಪಗಳ ವ್ಯಾಪಾರ ಬಿರುಸು ಕಂಡಿದೆ.
ಆಧ್ಯಾತ್ಮಿಕ ಸಿದ್ಧತೆ
ಕ್ರಿಸ್ಮಸ್ ಕ್ರೈಸ್ತರ ಅತಿ ದೊಡ್ಡ ಹಬ್ಬ. ಕ್ರೈಸ್ತರು ಆಚರಿಸುವ ಪ್ರತಿಯೊಂದು ಹಬ್ಬದಲ್ಲೂ ಆಧ್ಯಾತ್ಮದ ಚಿಂತನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಕ್ರಿಸ್ಮಸ್ ಆಚರಣೆ ಪ್ರಯುಕ್ತ ನಾಲ್ಕು ವಾರಗಳ ಕಾಲ ಆಧ್ಯಾತ್ಮಿಕ ಸಿದ್ಧತೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಅದ್ವಂತ್ ಎಂದು ಕರೆಯುವ ಈ ಆಧ್ಯಾತ್ಮಿಕ ಪ್ರಕ್ರಿಯೆಯಡಿ ಆಧ್ಯಾತ್ಮಿಕ ಶುದ್ದಿ, ಪ್ರಾರ್ಥನೆ, ಸತ್ಕಾರ್ಯ ಕೈಗೊಳ್ಳಲಾಗುತ್ತದೆ. ಅದ್ವಂತ್ ಅಂದರೆ ಆಗಮನ ಅಥವಾ ನಿರೀಕ್ಷೆಯ ಕಾಲವೆಂದರ್ಥ.
ಆಚರಣೆಯ ವಿಧಿ
ಡಿ.24ರ ರಾತ್ರಿ ವಿಶೇಷ ಪೂಜೆ, ಕ್ರಿಸ್ಮಸ್ ನಕ್ಷತ್ರ, ಕ್ರಿಸ್ಮಸ್ ಕೇಕ್, ಕ್ರಿಸ್ಮಸ್ ಮರ, ಕ್ರಿಸ್ಮಸ್ ಶುಭಾಶಯ ಪತ್ರ, ಕ್ರಿಸ್ಮಸ್ ತಾತ ಸಾಂತಾಕ್ಲಾಸ್ ಆಗಮನ ಮತ್ತು ಅವರ ಉಡುಗೊರೆಗಳು, ಕ್ರಿಸ್ಮಸ್ ಕ್ಯಾರಲ್ ಗೀತೆಗಳು, ಕ್ರಿಸ್ಮಸ್ ವಿಶೇಷ ತಿನಿಸುಗಳಾದ ಕುಸ್ವಾರ್, ಯೇಸುವಿನ ಜನ್ಮ ಸಂದೇಶ ಸಾರುವ ಪ್ರತಿಕೃತಿ ರಚನೆ, ಕ್ರಿಸ್ಮಸ್ ಕ್ರಿಬ್ ಅಥವಾ ಗೋದಲಿ ಇವೆ ಮೊದಲಾದವು ಕ್ರಿಸ್ಮಸ್ ಹಬ್ಬದ ಆಚರಣೆಯ ಪ್ರಮುಖ ಅಂಗಗಳಾಗಿವೆ. ಇವೆಲ್ಲದರ ಸಲುವಾಗಿ ಜನ ಸಂಭ್ರಮದಿಂದ ಓಡಾಡುತ್ತಿದ್ದಾರೆ. ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಚರ್ಚ್‌ಗಳನ್ನು ದೀಪಾಲಂಕಾರಗೊಳಿಸಲಾಗುತ್ತಿದೆ. ಮನೆಗಳ ಎದುರು ಕ್ರಿಸ್ಮಸ್ ಗೂಡುದೀಪ ತೂಗಲಾರಂಭಿಸಿದೆ. ರಜೆಗಾಗಿ ಊರಿಗೆ ಬರುವ ಬಂಧುಗಳ ಆಗಮನಕ್ಕೆ ಕಾಯಲಾಗುತ್ತಿದೆ. ಹೊಸವರ್ಷದ ಸಡಗರವೂ, ಕ್ರಿಸ್ಮಸ್ ಸಂಭ್ರಮವೂ ಸದಾ ಜತೆಜತೆಗೇ ಕಾಣಿಸಿಕೊಳ್ಳುವ ಆಚರಣೆಗಳ ಸಾಲಿನಲ್ಲಿರುವ ಕಾರಣ ಬಂಧು ಬಳಗ ಸ್ನೇಹಿತರಿಗೆ ಒಟ್ಟಾಗಲು ಇದು ಸಕಾಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
BBK11: ಮೋಕ್ಷಿತಾ ತೊಡೆ ಮೇಲೆ ಕೂತ ರಜತ್.. ಅತಿಥಿಗಳ ವರ್ತನೆಗೆ ಸಿಬ್ಬಂದಿಗಳು ಸುಸ್ತು.!
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
ಅಮೆರಿಕದಲ್ಲಿ ಕ್ರಿಸ್ ಮಸ್, ಹೊಸ ವರ್ಷದ ಹುರುಪು-ಥ್ಯಾಂಕ್ಸ್ ಗಿವಿಂಗ್ ಟು ನ್ಯೂ ಇಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.