Yearender 2024: 2024ರ ಟಾಪ್ 10 ರಾಜಕೀಯ ಘಟನಾವಳಿ-ಲೋಕಸಭೆ ಚುನಾವಣೆ To ಕೇಜ್ರಿ ಬಂಧನ!
ಈ ವರ್ಷ ರಾಷ್ಟ್ರರಾಜಕಾರಣದಲ್ಲಿ ಏನೇನು ನಡೆಯಿತು
Team Udayavani, Dec 24, 2024, 2:56 PM IST
Yearender 2024: ಇಡೀ ಜಗತ್ತು 2025ರ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದು, ಪ್ರಸಕ್ತ ವರ್ಷ 2024ರ ಕೊನೆಯ ಹಂತದಲ್ಲಿದ್ದೇವೆ. 2024 ಹಲವಾರು ಸಂಗತಿಯ ನೆನಪಿನ ಬುತ್ತಿಯನ್ನು ಕಟ್ಟಿಕೊಟ್ಟಿದೆ. 2024ರಲ್ಲಿ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಗಳೇನು? ಈ ವರ್ಷ ರಾಷ್ಟ್ರರಾಜಕಾರಣದಲ್ಲಿ ಏನೇನು ನಡೆಯಿತು ಎಂಬ ಟಾಪ್ 10 ಸಂಗತಿಗಳು ಇಲ್ಲಿವೆ…
1)ಲೋಕಸಭಾ ಚುನಾವಣೆ:
2024ರ ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಇದು ಈ ವರ್ಷ ನಡೆದ ಅತೀ ದೊಡ್ಡ ವಿದ್ಯಮಾನ. ಆದರೆ 2024ರ ಲೋಕಸಭಾ ಚುನಾವಣ ಫಲಿತಾಂಶ ಭಾರತೀಯ ಜನತಾ ಪಕ್ಷಕ್ಕೆ ಆಘಾತ ತಂದೊಡ್ಡಿದ್ದು ಸುಳ್ಳಲ್ಲ. ಈ ಬಾರಿ 400ಕ್ಕೂ ಅಧಿಕ ಸ್ಥಾನ ಎಂಬ ಬಿಜೆಪಿಯ ಗುರಿ ಮುಟ್ಟುವಲ್ಲಿ ವಿಫಲವಾಗಿತ್ತು. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 400 ಸ್ಥಾನ ದಾಟಲಿಲ್ಲ. ಇವೆಲ್ಲದರ ನಡುವೆ ಎನ್ ಡಿಎ ಮೈತ್ರಿಕೂಟ ಮೂರನೇ ಬಾರಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದ್ದು,ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಲ್ಲದೇ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕೇವಲ 52 ಸ್ಥಾನ ಗೆದ್ದಿದ್ದ ವಿಪಕ್ಷ ಕಾಂಗ್ರೆಸ್ 2024ರ ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನ ಗಳಿಸಿತ್ತು.
2)ಮಹಾರಾಷ್ಟ್ರ ವಿಧಾನಸಭಾ ಚುನಾವಣೆ:
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣ ಫಲಿತಾಂಶ ರಾಜಕೀಯ ವಿಶ್ಲೇಷಕರಿಗೆ ಅಚ್ಚರಿ ತಂದ ವಿಷಯವಾಗಿತ್ತು. ಅದಕ್ಕೆ ಕಾರಣ ಆಡಳಿತಾರೂಢ ಮಹಾಯುತಿ ಭರ್ಜರಿ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದಿದ್ದು! ಲೋಕಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ತೀವ್ರ ಮುಖಭಂಗ ಅನುಭವಿಸಿ, ಮಹಾವಿಕಾಸ್ ಅಘಾಡಿ ಗೆಲುವಿನ ನಗು ಬೀರಿತ್ತು. ಆದರೆ ಲೋಕಸಭೆಯಲ್ಲಿ ಕಳೆದುಕೊಂಡಿದ್ದ ನಷ್ಟವನ್ನು ವಿಧಾನಸಭಾ ಚುನಾವಣೆಯಲ್ಲಿ ಗಳಿಸಿಕೊಂಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 132 ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದ್ದು, ಏಕನಾಥ್ ಶಿಂಧೆಯ ಶಿವಸೇನಾ 57 ಸ್ಥಾನಗಳಲ್ಲಿ ಹಾಗೂ ಅಜಿತ್ ಪವಾರ್ ಬಣದ ಎನ್ ಸಿಪಿ 41 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ತೀವ್ರ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ಕೇವಲ 16 ಸ್ಥಾನಗಳಲ್ಲಿ ಹಾಗೂ ಶರದ್ ಪವಾರ್ ಅವರ ಎನ್ ಸಿಪಿ 10 ಸ್ಥಾನ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಯುಬಿಟಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
3) ಜಮ್ಮು-ಕಾಶ್ಮೀರ ಚುನಾವಣೆ:
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ (Article 370) ರದ್ದುಪಡಿಸಿದ ನಂತರ ಬರೋಬ್ಬರಿ ಒಂದು ದಶಕದ ನಂತರ 2024ರಲ್ಲಿ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ನಡೆದಿರುವುದು ವಿಶೇಷ. ಚುನಾವಣೆಯಲ್ಲಿ ಓಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ 42 ಸ್ಥಾನಗಳಲ್ಲಿ ಜಯಗಳಿಸಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿದೆ. ಬಿಜೆಪಿ 29 ಕ್ಷೇತ್ರಗಳಲ್ಲಿ ಹಾಗೂ ಮೆಹಬೂಬಾ ಮುಫ್ತಿಯ ಪಿಡಿಪಿ ಕೇವಲ 3 ಸ್ಥಾನಗಳಲ್ಲಿ ಗೆದ್ದು ಮುಖಭಂಗ ಅನುಭವಿಸಿತ್ತು.
4) ಹರ್ಯಾಣ ಚುನಾವಣೆ:
ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿತ್ತು. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರುವುದರಿಂದ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರ ಫಲಿತಾಂಶದ ನಂತರ ತಲೆಕೆಳಗಾಗಿತ್ತು! ಚುನಾವಣೆಗೂ ಮುನ್ನ ಬಿಜೆಪಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ, ನಯಾಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಇದು ಬಿಜೆಪಿಗೆ ಯಶಸ್ಸು ತಂದು ಕೊಡುವಲ್ಲಿ ನೆರವಾಗಿತ್ತು.
5) ಅರವಿಂದ್ ಕೇಜ್ರಿವಾಲ್ ರಾಜೀನಾಮೆ:
ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿದ್ದ ಅರವಿಂದ್ ಕೇಜ್ರಿವಾಲ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಆದರೆ ಅಚ್ಚರಿಯ ಬೆಳವಣಿಗೆ ಎಂಬಂತೆ 2024ರ ಸೆಪ್ಟೆಂಬರ್ 17ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷದ ನಾಯಕಿ ಅತಿಶಿಗೆ ಸಿಎಂ ಪಟ್ಟ ಬಿಟ್ಟುಕೊಟ್ಟಿದ್ದರು. ನಂತರ ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಜಾಮೀನು ದೊರೆತು ಜೈಲಿನಿಂದ ಬಿಡುಗಡೆಗೊಂಡ ನಂತರ, ಚುನಾವಣೆಯಲ್ಲಿ ನನಗೆ ಜನರು ಕ್ಲೀನ್ ಚಿಟ್ ಕೊಟ್ಟ ನಂತರವೇ ಸಿಎಂ ಹುದ್ದೆಗೆ ಏರುವುದಾಗಿ ಶಪಥ ಮಾಡಿದ್ದಾರೆ.
6)ಹೇಮಂತ್ ಸೋರೆನ್ ಗೆ ಜೈಲುಶಿಕ್ಷೆ:
2024 ಜಾರ್ಖಂಡ್ ಮುಕ್ತಿ ಮೋರ್ಚಾದ ಮುಖಂಡ, ಜಾರ್ಖಂಡ್ ಸಿಎಂ ಆಗಿದ್ದ ಹೇಮಂತ್ ಸೋರೆನ್ ಗೆ ಕರಾಳ ವರ್ಷವಾಗಿದೆ. ಭೂಹಗರಣದ ಆರೋಪದಲ್ಲಿ ಹೇಮಂತ್ ಜೈಲು ಸೇರುವಂತಾಗಿತ್ತು. ಆದರೆ ಪ್ರಕರಣದಲ್ಲಿ ಜಾಮೀನು ಪಡೆದ ಹೇಮಂತ್ ಸೋರೆನ್ ( ಜೆಎಂಎಂ) ಚುನಾವಣೆಯಲ್ಲಿ ಸ್ಪರ್ಧಿಸಿ ವಿಪಕ್ಷ ಬಿಜೆಪಿಯನ್ನು ಪರಾಜಯಗೊಳಿಸುವ ಮೂಲಕ ಸಿಎಂ ಹುದ್ದೆಗೇರಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ 34 ಸ್ಥಾನಗಳಲ್ಲಿ ಗೆದ್ದು ಪೂರ್ಣ ಬಹುಮತ ಪಡೆದಿತ್ತು.
7)ಮಣಿಪುರ ಹಿಂ*ಚಾರ:
2024 ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಜೋ ಎಂಬ ಎರಡು ಬುಡಕಟ್ಟು ಸಮುದಾಯದ ನಡುವೆ ಘರ್ಷಣೆ ಆರಂಭವಾಗಿದ್ದು, ಇದು 2024ರಲ್ಲಿ ಭೀಕರ ಹಿಂ*ಚಾರಕ್ಕೆ ಎಡೆಮಾಡಿಕೊಟ್ಟಿತ್ತು. ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದು, ನೂರಾರು ಜನರ ಮನೆ ಬೆಂಕಿಗೆ ಆಹುತಿಯಾಗಿತ್ತು. ಈ ವಿಷಯ ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
8)ಚುನಾವಣಾ ಅಖಾಡ ಪ್ರವೇಶಿಸಿದ್ದ ಪ್ರಿಯಾಂಕಾ ಗಾಂಧಿ:
ಈ ಬಾರಿಯ ಚುನಾವಣೆಯಲ್ಲಿ ನೆಹರು-ಗಾಂಧಿ ಕುಟುಂಬದ ಪ್ರಿಯಾಂಕಾ ಗಾಂಧಿ ವಾದ್ರಾ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಮತಗಳಿಂದ ಗೆಲುವು ಸಾಧಿಸುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.
9) ಉತ್ತರಪ್ರದೇಶಕ್ಕೆ ಮರಳಿದ ರಾಹುಲ್ ಗಾಂಧಿ:
2024ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎರಡು ವಯನಾಡ್ ಮತ್ತು ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲೂ ರಾಹುಲ್ ಜಯಗಳಿಸಿದ್ದರು. ನಂತರ ಗಾಂಧಿ ಕುಟುಂಬದ ಭದ್ರಕೋಟೆಯಾದ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು, ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದರು. ಇದರೊಂದಿಗೆ ರಾಹುಲ್ ದಕ್ಷಿಣ ಭಾರತದಿಂದ ಮತ್ತೆ ಉತ್ತರ ಭಾರತಕ್ಕೆ ಸ್ಥಳಾಂತರಗೊಂಡಂತಾಗಿತ್ತು.
10) ನವೀನ್ ಪಟ್ನಾಯಕ್ ಸೋಲು:
ಒಡಿಶಾ ರಾಜಕೀಯದಲ್ಲಿ ನವೀನ್ ಪಟ್ನಾಯಕ್ ಬಹುದೊಡ್ಡ ನಾಯಕರಾಗಿದ್ದರು. ಆದರೆ 2024 ಪಟ್ನಾಯಕ್ ಪಾಲಿಗೆ ದುರದೃಷ್ಟಕರವಾಗಿತ್ತು. ಅದಕ್ಕೆ ಕಾರಣ, ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿಸದ ರೀತಿಯಲ್ಲಿ ಪಟ್ನಾಯಕ್ ಪಕ್ಷ ಸೋಲು ಕಂಡಿರುವುದು. ಈ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ್ದು, ಆಡಳಿತಾರೂಢ ಬಿಜು ಪಟ್ನಾಯಕ್ ಪಕ್ಷ 51 ಸ್ಥಾನ ಗಳಿಸಿ ಮುಖಭಂಗ ಅನುಭವಿಸಿತ್ತು. ಬಿಜೆಪಿ 78 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಆಡಳಿತಕ್ಕೆ ಬ್ರೇಕ್ ಹಾಕಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
Yearender 2024:ಸುಶೀಲ್ ಕುಮಾರ್ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
BBK11: ಮೋಕ್ಷಿತಾ ತೊಡೆ ಮೇಲೆ ಕೂತ ರಜತ್.. ಅತಿಥಿಗಳ ವರ್ತನೆಗೆ ಸಿಬ್ಬಂದಿಗಳು ಸುಸ್ತು.!
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
ಅಮೆರಿಕದಲ್ಲಿ ಕ್ರಿಸ್ ಮಸ್, ಹೊಸ ವರ್ಷದ ಹುರುಪು-ಥ್ಯಾಂಕ್ಸ್ ಗಿವಿಂಗ್ ಟು ನ್ಯೂ ಇಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.