Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ


Team Udayavani, Dec 24, 2024, 7:59 PM IST

12-koratagere

ಕೊರಟಗೆರೆ: ಸಾಧನೆ ಮಾಡಿರುವ ಮಕ್ಕಳಿಗೆ ಯಶಸ್ಸು ಒಂದು ಒಳ್ಳೆಯ ಹವ್ಯಾಸವಾಗಿ ಬೆಳೆಯಬೇಕು ಎಂದು ಭಾರತ ಕಾಫಿ ಬೋರ್ಡ್‍ನ ಸಿ.ಇ.ಓ. ಮತ್ತು ಕಾರ್ಯದರ್ಶಿ ಐ.ಎ.ಎಸ್. ಅಧಿಕಾರಿ ಡಾ.ಕೆ.ಜಿ.ಜಗದೀಶ್ ತಿಳಿಸಿದರು.

ಅವರು ಕೊರಟಗೆರೆ ಪಟ್ಟಣದ ಕನ್ನಿಕಾಮಹಲ್‍ನಲ್ಲಿ ತಾಲೂಕು ವಾಸವಿ ಯುವಜನ ಸಂಘದ ವತಿಯಿಂದ ನಡೆದ 2023-24 ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರ ಉದ್ಘಾಟಿಸಿ ಮಾತನಾಡಿದರು.

ವಿದ್ಯೆಗೆ ಯಾವುದೇ ಜಾತಿ, ಧರ್ಮ, ಬಡತನ, ಸಿರಿತನ, ನಗರ, ಗ್ರಾಮೀಣಗಳ ಬಗ್ಗೆ ಭೇದವಿಲ್ಲ. ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯವಾಗಿದೆ. ದೊಡ್ಡ ಸಾಧನೆಯ ಘಟ್ಟ ತಲುಪುವ ವಿದ್ಯಾರ್ಥಿಗಳು ಜೀವನದಲ್ಲಿ ಶ್ರದ್ದೆ, ಸಮಯ ಪರಿಪಾಲನೆ, ನಿರ್ದಿಷ್ಟ ಯೋಜನೆ, ತಲುಪುವ ಗುರಿಯ ಬಗ್ಗೆ ಸ್ಪಷ್ಟತೆ ಮತ್ತು ಆಸಕ್ತಿ, ಯಾವುದೇ ವಿಷಯವನ್ನು ಓದುವ ಮತ್ತು ಗ್ರಹಿಸುವ ಪರಿಪಾಲನೆ ಬೆಳಸಿಕೊಳ್ಳಬೇಕು ಇದರೊಂದಿಗೆ ಸಮಾಜಕ್ಕೆ ಒಳಿತನ್ನು ಮಾಡುವ ಗುಣ ಸಹಾಯ ಮನೋಭಾವ ನಿಮ್ಮಗಳ ಭವಿಷ್ಯಕ್ಕೆ  ತುಂಬಾ ಸಹಕಾರಿಯಾಗುತ್ತದೆ ಎಂದರು.

ಕರ್ನಾಟಕದ ವಿದ್ಯಾರ್ಥಿಗಳು, ಜನರು ದೇಶದಲ್ಲೇ ಬುದ್ದಿವಂತರವರಾಗಿದ್ದಾರೆ. ಆದರೆ ಅವರು ಇರುವಲ್ಲಿಯೇ ನೆಲೆ ಕಂಡುಕೊಳ್ಳವ ಮನೋಭಾವ ಹೊಂದಿರುವವರು ಹೆಚ್ಚಾಗಿದ್ದಾರೆ. ಐ.ಎ.ಎಸ್. ಸೇರಿದಂತೆ ಇತರ ದೊಡ್ಡ ಪದವಿಗಳ ಸಾಧನೆಗೆ ಅವರು ಹೊರ ರಾಜ್ಯಗಳಲ್ಲಿ ಹೋಗಿ ಬದುಕುವ ಮನಸ್ಸು ಮಾಡುವುದಿಲ್ಲ. ಆದರೆ ಈ ದೈರ್ಯವನ್ನು ಉತ್ತರ ಭಾರತದ ಹಲವರು ಮಾಡುತ್ತಾರೆ. ವಿಧ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೂ ಆತ್ಮಸ್ಥೈರ್ಯ ಮತ್ತು ಸ್ವತಂತ್ರವಾಗಿ ಬದುಕುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ತುಮಕೂರು ಇಸ್ಕಾನ್ ನ ಶ್ರೀರಾಮ ಅಪ್ರಮೇಯ ದಾಸ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ತಂದೆ ತಾಯಿಗಳು ಮಕ್ಕಳಿಗೆ ಹೆಚ್ಚಿನ ಹೊರೆಯನ್ನು ಹೊರಿಸಬಾರದು ಮಕ್ಕಳಿಗೆ ಸಾದನೆಯ ಗುರಿಯನ್ನು ಮಾತ್ರ ತೋರಿಸಬೇಕು. ವಿದ್ಯೆಯೊಂದಿಗೆ ಮಕ್ಕಳಿಗೆ ಸಂಸ್ಕಾರ, ಸಭ್ಯತೆ, ಸಮಾಜದಲ್ಲಿ ಒಳ್ಳೆಯ ನಡತೆಯ ಪರಿಪಾಠವನ್ನು ವಯಸ್ಸಿಗೆ ತಕ್ಕಂತೆ ತಿಳುವಳಿಕೆ ನೀಡುತ್ತಿರಬೇಕು, ಇಂದಿನ ಜೀವನದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಅವಶ್ಯಕವಾಗಿದೆ ಮಕ್ಕಳಿಗೆ ಈಗಿನ ಆಧುನಿಕ ಯುಗದ ಜೊತೆಗೆ ಪುರಾತನ ಕಾಲದ ಒಳ್ಳೆಯ ವಿಷಯಗಳನ್ನು ತಿಳಿಸಬೇಕು ಮಕ್ಕಳನ್ನು ಓದುವ ಯಂತ್ರಗಳನ್ನಾಗಿ ಮಾಡದೆ ಪರಿಪೂರ್ಣ ವ್ಯಕ್ತಿತ್ವವನ್ನು ರೂಪುಗೊಳ್ಳುವ ಪ್ರಜೆಗಳಾಗಿ ಮಾರ್ಪಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಿಕಾ ಸಂಸ್ಥೆಯ ಎಂ.ಜಿ.ಸುಧೀರ್, ಸುಷ್ಮಾರಾಣಿ, ಬದರಿಪ್ರಸಾದ್, ವಿದ್ಯಾ, ಅಮೃತ್‍ರಾಜ್, ಹೆಚ್.ಎಸ್.ದಿನೇಶ್, ಕೃಷ್ಣಯ್ಯ ಶ್ರೇಷ್ಠಿ, ಭದ್ರಿನಾಥ್, ಡಾ.ಹರೀಶ್‍ಬಾಬು, ಸಾಗರ್, ನಾಗಶಯನ, ರಾಘವೇಂದ್ರ, ದರ್ಶನ್, ಅನಿಲ್, ಶ್ರೀಧರ್ ಸೇರಿದಂತೆ ಇತರರು ಹಾಜರಿದ್ದರು.

ಟಾಪ್ ನ್ಯೂಸ್

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-koratagere

ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ

10-

Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.