ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್ ವಿರುದ್ಧ ತಿರುಗಿ ಬಿದ್ದ ಸಂತರು
ಧರ್ಮ ಸಂಬಂಧಿ ವಿಚಾರ ನಿರ್ಧರಿಸಬೇಕಾಗಿದ್ದು ಆರೆಸ್ಸೆಸ್ ಅಲ್ಲ
Team Udayavani, Dec 25, 2024, 6:50 AM IST
ಲಕ್ನೋ: ದೇಶದ ವಿವಿಧ ಭಾಗಗಳಲ್ಲಿ ಮಂದಿರ-ಮಸೀದಿ ವಿವಾದಗಳ ಕಿಚ್ಚು ಹೊತ್ತಿಸುತ್ತಿರುವ ಘಟನೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಈಗ ಅಖಿಲ ಭಾರತೀಯ ಸಂತ ಸಮಿತಿ(ಎಕೆಎಸ್‌ಎಸ್) ತಿರುಗಿಬಿದ್ದಿದೆ.
“ಆರೆಸ್ಸೆಸ್ ಒಂದು ಸಾಂಸ್ಕೃತಿಕ ಸಂಘಟನೆ ಅಷ್ಟೆ. ಇಂತಹ ಧಾರ್ಮಿಕ ವಿಚಾರಗಳನ್ನು ನಿರ್ಧರಿಸಬೇಕಾದವರು ಧರ್ಮಾಚಾರ್ಯರೇ ಹೊರತು ಆರೆಸ್ಸೆಸ್ ಅಲ್ಲ. ಧರ್ಮಕ್ಕೆ ಸಂಬಂಧಿಸಿದ ಯಾವುದೇ ವಿಚಾರ ಎದ್ದಾಗ, ಅದನ್ನು ನಿರ್ಧರಿಸುವ ಅಧಿಕಾರ ಇರುವುದು ಧಾರ್ಮಿಕ ಗುರುಗಳಿಗೆ. ಅವರೇನು ನಿರ್ಧರಿಸುತ್ತಾರೋ ಅದನ್ನು ಸಂಘ ಮತ್ತು ವಿಎಚ್‌ಪಿ ಒಪ್ಪುತ್ತದೆ’ ಎಂದು ಎಕೆಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಹೇಳಿದ್ದಾರೆ.
56 ಹೊಸ ಪ್ರದೇಶಗಳಲ್ಲಿ ಧಾರ್ಮಿಕ ಕಟ್ಟಡಗಳ ಕುರುಹು ಪತ್ತೆಯಾಗಿದೆ. ಹೀಗಾಗಿ ಧಾರ್ಮಿಕ ಸಂಘಟನೆಗಳು ರಾಜಕೀಯ ಅಜೆಂಡಾಗಳ ಬದಲಾಗಿ ಸಾರ್ವಜನಿಕರ ಭಾವನೆಗಳಿಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತದೆ ಎಂದೂ ಹೇಳಿದ್ದಾರೆ. ಈ ಮೂಲಕ ಭಾಗವತ್ ಹೇಳಿಕೆಗೆ ಕೇಸರಿ ಪಾಳಯದಲ್ಲೇ ಅಪಸ್ವರ ಎದ್ದಿರುವುದು ಸ್ಪಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.