Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

ವೇದಪಂಡಿತ ಕೆ.ಎಸ್.ಗೋಪಾಲಕೃಷ್ಣ ಭಟ್‌ಗೆ ಶ್ರೀಕೃಷ್ಣಾಗೀತಾನುಗ್ರಹ ಪ್ರಶಸ್ತಿ ಪ್ರದಾನ

Team Udayavani, Dec 24, 2024, 11:38 PM IST

k

ಉಡುಪಿ: ದೇಶವೆಂದರೆ ಕೇವಲ ಭೌಗೋಳಿಕ ಪ್ರದೇಶವಲ್ಲ. ದೇಶವನ್ನು ಅಲ್ಲಿನ ಬಹುಮಹಡಿ ಕಟ್ಟಡಗಳು, ಪಂಚತಾರಾ ಹೊಟೇಲ್‌ಗ‌ಳಿಂದ ಅಳೆಯುವುದಲ್ಲ. ದೇಶದ ನಿಜವಾದ ಸಂಪತ್ತು ಅಲ್ಲಿನ ಜನರ ಸಂಸ್ಕೃತಿ ಮತ್ತು ಸಂಪ್ರದಾಯಗಳಾಗಿವೆ ಎಂದು ವಾಗ್ಮಿ ಕೆ.ಪಿ. ಪುತ್ತೂರಾಯ ಅಭಿಪ್ರಾಯಪಟ್ಟರು.

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ಬೃಹತ್‌ ಗೀತೋತ್ಸವ ಪ್ರಯುಕ್ತ ರಾಜಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ದೇಶವನ್ನು ನಾಶ ಮಾಡಬೇಕಾದರೆ ಆ ದೇಶದ ಮೇಲೆ ಯುದ್ಧ ಸಾರಬೇಕಾಗಿಲ್ಲ. ಸಂಸ್ಕೃತಿ ಮೇಲೆ ನಿರಂತರ ದಾಳಿ ಮಾಡಿದರೆ ಸಾಕು. ನಮ್ಮ ದೇಶದ ಸಂಸ್ಕೃತಿ ಮೇಲೆ ಸತತ ದಾಳಿಗಳಾದರೂ ಭದ್ರವಾದ ನಮ್ಮ ಸಂಸ್ಕೃತಿ ಅಲುಗಾಡಿಲ್ಲ. ಅಂತಹ ಶ್ರೀಮಂತ, ಧೀಮಂತ ಸಂಸ್ಕೃತಿ ನಮ್ಮದು ಎಂದರು.

ಮನುಷ್ಯನಿಗೆ ಮೂರು ಬದುಕುಗಳಿವೆ. ಅವು ದೇಹದ ಬದುಕು, ಮನಸ್ಸಿನ ಬದುಕು, ಆತ್ಮದ ಬದುಕು. ಅದೇ ರೀತಿ ದೇಶಕ್ಕೂ ಮೂರು ಬಗೆಯ ಬದುಕುಗಳಿವೆ. ಭೌಗೋಳಿಕ, ನೈಸರ್ಗಿಕ ಸಂಪತ್ತು ದೇಶದ ದೇಹವಾದರೆ, ಅದರ ಜನರ ಆದರ್ಶ, ಸಿದ್ಧಾಂತಗಳು ಮನಸ್ಸು ಹಾಗೂ ಸಂಸ್ಕೃತಿ, ನಂಬಿಕೆಗಳು ಆತ್ಮವಾಗಿದೆ ಎಂದರು.

ಪ್ರಸ್ತುತ ಜಗತ್ತಿನ ಜನರು ನಾನಾ ತೊಂದರೆಗಳಿಂದ ತತ್ತರಿಸಿದ್ದಾರೆ. ಅವರ ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರವಿದೆ. ಮಠಗಳೆಂದರೆ ಬರೀ ಊಟದ ಕೇಂದ್ರಗಳಾಗಬಾರದು. ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕದ ಜತೆಗೆ ಸಾಮರಸ್ಯದ ಕೇಂದ್ರಗಳಾಗಬೇಕು. ನಮ್ಮ ಆಧ್ಯಾತ್ಮಿಕ ಆಚರಣೆಗಳು ದೇಶಕ್ಕಷ್ಟೇ ಸೀಮಿತವಾದರೆ ಸಾಲದು. ಅನಿವಾಸಿ ಭಾರತೀಯರಿಗೂ ತಲುಪಬೇಕೆಂಬ ಉದ್ದೇಶದಿಂದ ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳು ಜಗತ್ತಿನಾದ್ಯಂತ ಮಠಗಳನ್ನು ಸ್ಥಾಪಿಸಿದ್ದಾರೆ ಎಂದರು.

ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಭಗವದ್ಗೀತೆಯ ಸಾರವನ್ನು ಯಾರು ಅನುಷ್ಠಾನ ಮಾಡುತ್ತಾರೋ ಅವರು ಸಾಧಕರಾಗಲು ಸಾಧ್ಯ. ಪ್ರತಿಯೊಬ್ಬರೂ ಸಾಧಕರಾಗಬೇಕೆಂಬುದು ಗೀತೆಯ ಉದ್ದೇಶ. ಕೇವಲ ಕರ್ಮ ಮಾಡುವುದಲ್ಲ ಅದರಲ್ಲಿ ತಲ್ಲೀನರಾಗಬೇಕೆಂದು ಗೀತೆ ಹೇಳಿದೆ. ಕೆಲಸ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಅದರಲ್ಲಿ ತನ್ಮಯತೆ ಮುಖ್ಯ. ಚಿಕ್ಕ ಕೆಲಸವೂ ದೊಡ್ಡ ಸಾಧನೆಯಾಗಬಹುದು ಎಂದರು.

ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಕೃಷ್ಣಾನುಗ್ರಹ ಪ್ರಶಸ್ತಿ
ಉಡುಪಿ: ಶ್ರೀ ಕೃಷ್ಣಮಠ ಪರ್ಯಾಯ ಶ್ರೀ ಪುತ್ತಿಗೆಮಠದಿಂದ ಬೃಹತ್‌ ಗೀತೋತ್ಸವ ಅಂಗವಾಗಿ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂಭಕೋಣಂನ ವಿಷ್ಣುಪುರಂನಲ್ಲಿ ಗೋಶಾಲೆಯನ್ನು ನಡೆಸಿ, ದೊಡ್ಡಮಟ್ಟದಲ್ಲಿ ಗೋಸಂರಕ್ಷಣೆ ಮಾಡುತ್ತಿರುವ ಕೆ. ಗುರುಪ್ರಸಾದ್‌ ಕುಂಭಕೋಣಂ ಹಾಗೂ ಪೌರೋಹಿತ್ಯ ವೃತ್ತಿ ನಡೆಸುತ್ತಿರುವ ವೇದಪಂಡಿತರಾದ ಕೊಯಮತ್ತೂರಿನ ಕೆ.ಎಸ್‌.ಗೋಪಾಲಕೃಷ್ಣ ಭಟ್‌ ಅವರಿಗೆ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣಾಗೀತಾನುಗ್ರಹ ಪ್ರಶಸ್ತಿ ನೀಡಿ ಅನುಗ್ರಹಿಸಿದರು.

ಟಾಪ್ ನ್ಯೂಸ್

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

u1

Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

3

Udupi: ಕೂಲಿ ಕಾರ್ಮಿಕನ ಮೇಲೆ ಹಲ್ಲೆ; ಗಾಯ

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

4

Udupi: ಕೊಳಚೆಯಿಂದ ಕಂಗಾಲಾದ ನಿಟ್ಟೂರು, ಕಲ್ಮಾಡಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.