Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ
ಕಾಂಗ್ರೆಸ್ಸಿಗರು ಬಸವರಾಜ ಹೊರಟ್ಟಿ ಕ್ಷಮೆ ಕೇಳಲಿ: ವಿಪಕ್ಷ ನಾಯಕ
Team Udayavani, Dec 25, 2024, 6:55 AM IST
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಭಯೋತ್ಪಾದಕನಿಗಿಂತ ಕೆಟ್ಟದಾಗಿ ನಡೆಸಿಕೊಂಡಿರುವ ಕಾಂಗ್ರೆಸ್ ಸರಕಾರ, ಸಭಾಪತಿ ಬಸವರಾಜ ಹೊರಟ್ಟಿ ಅವರ ಆದೇಶವನ್ನೇ ಪ್ರಶ್ನಿಸುತ್ತಿದೆ. ಇದು ಸಭಾಪತಿ ಸ್ಥಾನಕ್ಕೆ ಮಾಡಿದ ಅಪಮಾನ. ಈ ವಿಚಾರದಲ್ಲಿ ಕಾಂಗ್ರೆಸಿಗರು ಸಭಾಪತಿಯವರ ಕ್ಷಮೆ ಕೇಳಬೇಕೆಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸದನದಲ್ಲಿ ಅಂದು ಏನು ನಡೆಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಇದ್ದಕ್ಕಿದ್ದಂತೆ ರವಿ ತಮ್ಮ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಾರೆಂದು ಸಭಾಪತಿಯವರಿಗೆ ದೂರು ಕೊಡಲು ಹೋದರು. ಕಲಾಪ ಮುಂದೂಡಿಕೆ ಅನಂತರ ಊಟ ಮಾಡಿ ಬರುವಾಗ ರವಿ ಮೇಲೆ ದಾಳಿ ಆಯಿತು. ಮಾಹಿತಿ ನೀಡಲು ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಬರುವ ವೇಳೆಗೆ ಸಚಿವೆ ಹೆಬ್ಟಾಳ್ಕರ್ ಆಪ್ತ ಸಹಾ ಯ ಕ ಸೇರಿ 200ಕ್ಕೂ ಹೆಚ್ಚು ಜನ ನುಗ್ಗಿ ಸುವರ್ಣದ್ವಾರದ ಗೇಟ್‌ಗಳನ್ನು ಒದೆಯುತ್ತಿದ್ದರು ಎಂದರು.
ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ
ಹೊರಟ್ಟಿ ಅವರು ಎಡಿಜಿಪಿಯನ್ನು ಕರೆಸಿ, ರಕ್ಷಣೆ ಕೊಡಲು ಸೂಚಿಸಿದರು. ಹೊರಬರುವಷ್ಟರಲ್ಲಿ ಸಿ.ಟಿ. ರವಿಯನ್ನು ಪೊಲೀಸರು ಬೇರೆ ವಾಹನದಲ್ಲಿ ಎತ್ತಿಕೊಂಡು ಹೊರಟರು. ಭಯೋತ್ಪಾದಕರಿಗಿಂತ ಕೆಟ್ಟದಾಗಿ ನಡೆಸಿಕೊಂಡರು. ಸಭಾಪತಿಯವರನ್ನೂ ಕಾಂಗ್ರೆಸಿನವರು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಹೇಳಿದರು.
ಡಿಸಿಎಂ ಅತ್ಯುತ್ಸಾಹ ತೋರುತ್ತಿರುವುದು ಏಕೆ ?
ಜಯಮಾಲಾ ಬಗ್ಗೆ ಹೆಬ್ಟಾಳ್ಕರ್ ಹೇಳಿದ್ದ ವೀಡಿಯೋ ಹರಿದಾಡುತ್ತಿದೆ. ಇದೇನಾ ಕಾಂಗ್ರೆಸ್ ಸಂಸ್ಕೃತಿ? ಕಾಂಗ್ರೆಸ್ ಸಂಸದೆಯಾಗಿದ್ದ ತೇಜಸ್ವಿನಿ ಗೌಡರನ್ನು ವೇದಿಕೆಯಿಂದ ಹೇಗೆ ಇಳಿಸಿದ್ದರು? ಅಂದು ಇದೇ ತೇಜಸ್ವಿನಿ ಕಾಂಗ್ರೆಸ್ ಅನ್ನು ದುಶ್ಯಾಸನರ ಪಕ್ಷ ಎಂದಿದ್ದರು. ಸ್ವತಃ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ ಕಿತ್ತು ಬಿಸಾಕಿದ್ದರು. ಇವೆಲ್ಲ ಮಹಿಳೆಯರಿಗೆ ಆದ ಅಪಮಾನ ಅಲ್ಲವೇ? ಯಾವ್ಯಾವ ಪ್ರಕರಣದಲ್ಲಿ ಡಿಸಿಎಂ ಶಿವಕುಮಾರ್ ಇಷ್ಟೊಂದು ಅತ್ಯುತ್ಸಾಹ ತೋರಿದ್ದಾರೆ? ಕಬ್ಬಿನ ಗದ್ದೆ, ಕ್ವಾರಿ ಬಳಿ ಸುತ್ತಿಸಿದ್ದು ಗೊತ್ತಿಲ್ಲ ಎಂದು ಸಿಎಂ, ಗೃಹ ಸಚಿವರು ಹೇಳುತ್ತಾರೆಂದರೆ ಪೊಲೀಸರಿಗೆ ಪ್ರತಿ ನಿಮಿಷಕ್ಕೂ ದೂರವಾಣಿ ಕರೆ ಮಾಡಿ ಹೇಳುತ್ತಿದ್ದವರು ಯಾರು ಎಂದು ಅವರು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.