Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
ಕನಿಷ್ಠ 5 ಎಕರೆ ಸರಕಾರಿ ಜಾಗವೇ ಇಲ್ಲ , ನಿಗದಿತ ಅನುದಾನ, ಏಕರೂಪದ ಸೌಧ ನಿರ್ಮಾಣ ಷರತ್ತಿನಿಂದಲೂ ಸಮಸ್ಯೆ
Team Udayavani, Dec 25, 2024, 7:10 AM IST
ಬೆಂಗಳೂರು: ಹೊಸ ತಾಲೂಕುಗಳಲ್ಲಿ ಒಂದೇ ಸೂರಿನಲ್ಲಿ ತಾಲೂಕು ಕೇಂದ್ರ ಕಚೇರಿಗಳೆಲ್ಲವನ್ನೂ ಒದಗಿಸುವ “ಪ್ರಜಾ ಸೌಧ’ ಸಂಕೀರ್ಣ ನಿರ್ಮಾಣ ಸದ್ಯಕ್ಕಿಲ್ಲವೇ? ಈ ಪ್ರಶ್ನೆಗೆ ಸದ್ಯದಲ್ಲಿ ಉತ್ತರ ಸಿಗುವ ಲಕ್ಷಣಗಳು ಕಾಣುತ್ತಿಲ್ಲ.
2018ರಿಂದ ಇಲ್ಲಿವರೆಗೆ ರಾಜ್ಯದಲ್ಲಿ ಸುಮಾರು 63 ಹೊಸ ತಾಲೂಕುಗಳನ್ನು ರಚಿಸಲಾಗಿದ್ದು, ಅವುಗಳ ಪೈಕಿ ಕೇವಲ 14 ಕಡೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಪ್ರಜಾ ಸೌಧವನ್ನು ಕಟ್ಟಲಾಗಿದೆ. ಉಳಿದ 49ಕ್ಕೆ ಈ ಭಾಗ್ಯ ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ.ಉಳಿದ ಕಡೆ ಜಿಲ್ಲಾಧಿಕಾರಿಗಳಿಂದ ಜಮೀನು ಗುರುತಿಸುವ ಕೆಲಸ, ಅವರಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ, ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ಮತ್ತಿತರ ಹಂತಗಳಲ್ಲಿ ಪ್ರಜಾ ಸೌಧಗಳು ನಿಂತಿವೆ. ಒಂದು ಪ್ರಜಾ ಸೌಧ ಕಟ್ಟಲು ಕನಿಷ್ಠ 5 ಎಕರೆ ಜಾಗ ಬೇಕು. ಆದರೆ ಬಹುತೇಕ ಕಡೆ ಸೂಕ್ತ ಸರಕಾರಿ ಜಮೀನು ಲಭ್ಯವಿಲ್ಲದಿರುವುದು ಪ್ರಜಾ ಸೌಧ ನಿರ್ಮಾಣಕ್ಕೆ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಏಕರೂಪದ ಸಂಕಟ!
ಒಂದು ಪ್ರಜಾ ಸೌಧ ಕಟ್ಟಲು 10ರಿಂದ 12 ಕೋಟಿ ರೂ.ಗಳ ಪ್ರಸ್ತಾವನೆ ಜಿಲ್ಲಾಧಿಕಾರಿಗಳಿಂದ ಬರುತ್ತಿದೆ. ಆದರೆ, ಏಕರೂಪ ಮತ್ತು ವಿನ್ಯಾಸದ ಪ್ರಜಾ ಸೌಧ ನಿರ್ಮಾಣಕ್ಕೆ ಸರಕಾರ 8.60 ಕೋಟಿ ರೂ. ನಿಗದಿಪಡಿಸಿದೆ. ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಮತ್ತು ಸರಕಾರ ನಿಗದಿಪಡಿಸಿರುವ ಅನುದಾನದಲ್ಲಿ ವ್ಯತ್ಯಾಸ ಇರುವುದು ಹಾಗೂ ಏಕರೂಪ ಎಂಬ ಸರಕಾರದ ಷರತ್ತು ಸಹ ಸಮಸ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.
ತಾಲೂಕು ಕೇಂದ್ರ ಕಚೇರಿಗಳ ನಿರ್ಮಾಣಕ್ಕೆ ಹಂತ-ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಮೊದಲು ಹೇಳಿತ್ತು. 2024-25ನೇ ಸಾಲಿನಲ್ಲಿ 25 ಹೊಸ ತಾಲೂಕುಗಳಲ್ಲಿ ಪ್ರಜಾಸೌಧ ಕಟ್ಟಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ನಡುವೆ ಮುಂದಿನ 2 ವರ್ಷಗಳಲ್ಲಿ ಬಾಕಿ ಉಳಿದಿರುವ ಎಲ್ಲ ಹೊಸ ತಾಲೂಕು ಕೇಂದ್ರಗಳಿಗೆ ಪ್ರಜಾಸೌಧ ಮಂಜೂರು ಮಾಡುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ. ಸುಮಾರು 49ಕ್ಕೂ ಅಧಿಕ ಕಡೆ ಈ ಅವಧಿಯಲ್ಲಿ ಪ್ರಜಾ ಸೌಧ ಕಟ್ಟಲು ಹಣಕಾಸು ಹೊಂದಿಸುವ ಸವಾಲು ಸರಕಾರದ ಮುಂದಿದೆ. ಈಗಿರುವುದು ಬಿಟ್ಟು ಹೊಸ ತಾಲೂಕು ರಚನೆ ಪ್ರಸ್ತಾವನೆ ಸದ್ಯಕ್ಕೆ ಬೇಡ ಎಂದು ಆರ್ಥಿಕ ಇಲಾಖೆ ಹೇಳಿದೆ ಎಂದು ತಿಳಿದು ಬಂದಿದೆ.
ಹೊಸ ತಾಲೂಕುಗಳು?
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೂಡುಬಿದಿರೆ, ಕಡಬ, ಉಳ್ಳಾಲ, ಮೂಲ್ಕಿ, ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿ ಸಹಿತ ರಾಜ್ಯದ ವಿವಿಧ ಜಿಲ್ಲೆಗಳ 49 ತಾಲೂಕುಗಳಲ್ಲಿ ಒಂದೇ ಸೂರಿನಡಿ ಪ್ರಜಾಸೌಧ ಸಂಕೀರ್ಣ ನಿರ್ಮಿಸಲಾಗುತ್ತದೆ.
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.