Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
Team Udayavani, Dec 25, 2024, 2:02 PM IST
ಪಾಟ್ನಾ: ಮೊಮ್ಮಗನನ್ನು ತಮ್ಮ ಸುಪರ್ದಿಗೆ ನೀಡಿದಿದ್ದರೆ ತಮ್ಮ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲಿದೆ ಎಂದು ಇತ್ತೀಚೆಗೆ ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಟೆಕಿ ಅತುಲ್ ಸುಭಾಷ್ ಅವರ ತಂದೆ ಪವನ್ ಮೋದಿ ಹೇಳಿದ್ದಾರೆ.
ತಮ್ಮ 2 ವರ್ಷದ ಮೊಮ್ಮಗನನ್ನು ಭೇಟಿ ಮಾಡಲು ಸಾಧ್ಯವಾಗದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪವನ್ ಮೋದಿ, ಮಗುವನ್ನು ಒಮ್ಮೆ ಮಾತ್ರ ವಿಡಿಯೋ ಕಾಲ್ನಲ್ಲಿ ನೋಡಿದ್ದೇನೆ. ಮಗುವಿನ ಸುರಕ್ಷತೆಯ ಬಗ್ಗೆ ಆತಂಕ ಉಂಟಾಗಿದೆ ಎಂದಿದ್ದಾರೆ. ಒಂದು ವೇಳೆ ನಮ್ಮ ಮೊಮ್ಮಗನನ್ನು ನಮ್ಮ ವಶಕ್ಕೆ ನೀಡದಿದ್ದರೆ ನಮ್ಮ ಇಡೀ ಕುಟುಂಬವು ಆತ್ಮಹತ್ಯೆ ಮಾಡಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಪತ್ನಿ ಮತ್ತು ಅವರ ಕುಟುಂಬಸ್ಥರ ಕಿರುಕುಳದಿಂದ ಅತುಲ್ ಸುಭಾಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಅವರ ಪತ್ನಿ ಹಾಗೂ ಕುಟುಂಬದ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪವನ್ ಮೋದಿ ಅವರು ಉತ್ತರ ಪ್ರದೇಶದ ವೈನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ವ್ಯಾಪ್ತಿಯು ಜಾನುಪುರ್ ಜಿಲ್ಲೆಗೆ ಸಂಬಂಧಿಸಿದ್ದಾಗಿದ್ದರಿಂದ ದೂರನ್ನು ಜಾನುಪುರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.