Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ

ಪುತ್ತೂರು ನಗರಸಭೆ ಸಾಮಾನ್ಯ ಸಭೆ | ಷರತ್ತಿನಲ್ಲಿ ನೆಕ್ಕಿಲಾಡಿ ಗ್ರಾ.ಪಂ.ಗೂ ಜಲಸಿರಿ ನೀರು | ಕಡಿಮೆ ಬಿಡ್‌ನ‌ ಟೆಂಡರ್‌ಗೆ ಅನುಮಾನ

Team Udayavani, Dec 25, 2024, 12:43 PM IST

1

ಪುತ್ತೂರು: ಈ ಬಾರಿಯು ಜಲಸಿರಿ ಯೋಜನೆಯನ್ನು ನಂಬಿ ಕೂತರೆ ಹನಿ ನೀರೂ ಸಿಗದು. ಹೀಗಾಗಿ ನಗರದಲ್ಲಿ ಬೇಸಗೆಯಲ್ಲಿ ನೀರು ಪೂರೈಕೆಗೆ ಟ್ಯಾಂಕರೇ ಗತಿ ಎಂದು ನಗರಸಭೆ ಸದಸ್ಯರು ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಜಲಸಿರಿ ಪ್ರಗತಿ ಬಗ್ಗೆ ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯ ಇದು. ಶಾಸಕ ಅಶೋಕ್‌ ಕುಮಾರ್‌ ರೈ ಕಲಾಪ ಪೂರ್ತಿ ಭಾಗವಹಿಸಿದರು. ಝೋನ್‌ ವಲಯದಲ್ಲಿ ಜಲಸಿರಿ ಪ್ರಗತಿ ಬಗ್ಗೆ ವಿವರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸುತ್ತಿದ್ದಂತೆ ಎದ್ದು ನಿಂತ ನಗರಸಭೆ ಸದಸ್ಯರು ಅಧಿಕಾರಿಗಳು ನೀಡುವ ಉತ್ತರ ಕೇಳಿ ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದರು.

ಹಳೆ ಪೈಪ್‌ ಕಥೆ..!
ಸದಸ್ಯರಾದ ದೀಕ್ಷಾ ಪೈ, ಜೀವಂಧರ್‌ ಜೈನ್‌, ವಿದ್ಯಾ ಎಸ್‌ ಗೌರಿ ಜಲಸಿರಿಯ ಆವಾಂತರಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಅಧಿಕಾರಿ ಮಾತನಾಡಿ, ನಗರ ದೊಳಗೆ 47 ಕಿ.ಮೀ. ದೂರ ಹಳೆ ಪಿವಿಸಿ ಪೈಪ್‌ ಇದ್ದು ಅದರಿಂದ ನೀರು ಸೋರಿಕೆ ಆಗುತ್ತಿದೆ. ಹಳೆ ಪೈಪ್‌ ತೆರವು ಮಾಡಿ ಹೊಸ ಪೈಪ್‌ ಅಳವಡಿಕೆಗೆ 13 ಕೋ.ರೂ.ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯ ಜೀವಂಧರ್‌ ಜೈನ್‌, ಹಿಂದೆ ಡಿಪಿಆರ್‌ ಮಾಡುವ ವೇಳೆ ಸರಿಯಾಗಿ ಮಾಡದೆ ಇದ್ದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದರು. ಶಾಸಕರು ಮಾತನಾಡಿ, ದೂರದೃಷ್ಟಿತ್ವ ಇಲ್ಲದೆ ಯೋಜನೆ ಅನುಷ್ಠಾನಿಸಿದರೆ ಇದೇ ತರಹ ಆಗುವುದು ಎಂದರು. ಮುಂದಿನ 1 ತಿಂಗಳ ಒಳಗಾಗಿ ಪ್ರತೀ ಮನೆ ಮನೆಗೆ ದಿನದ 24 ತಾಸು ನೀರು ಹರಿಸುವುದಾಗಿ ಜಲಸಿರಿ ತಂಡ ಭರವಸೆ ನೀಡಿದೆ. ಬೇಡಿಕೆ ಈಡೇರದಿದ್ದರೆ ಟ್ಯಾಂಕರ್‌ ನೀರೇ ಗತಿ ಆಗಬಹುದು. ಇಂತಹ ಪರಿಸ್ಥಿತಿ ಬಂದರೆ ಜಲಸಿರಿ ಕಚೇರಿ ಎದುರು ಧರಣಿ ಕುಳಿತುಕೊಳ್ಳುತ್ತೇವೆ ಎಂದು ಸದಸ್ಯರು ಎಚ್ಚರಿಸಿದರು.

ಷರತ್ತಿನೊಂದಿಗೆ ಜಲಸಿರಿ ನೀರು
ನೆಕ್ಕಿಲಾಡಿ ಗ್ರಾ. ಪಂ.ಗೆ ಜನತಾ ನ್ಯಾಯಾಲಯ ಆದೇಶದಂತೆ ನೀರು ಪೂರೈಕೆ ಮಾಡಲು ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಪೌರಾಯುಕ್ತ ಮಧು ಎಸ್‌. ಮನೋಹರ್‌ ವಿಷಯ ಪ್ರಸ್ತಾವಿಸಿದರು. ವಿಚಾರ ವಿಮರ್ಶೆ ನಡೆದು ಆದೇಶ ಪಾಲಿಸುವ ನಿಟ್ಟಿನಲ್ಲಿ ಷರತ್ತಿನೊಂದಿಗೆ ಜಲಸಿರಿ ಮೂಲಕ ನೀರು ಹರಿಸಲು ಸಾಮಾನ್ಯ ಸಭೆ ನಿರ್ಧರಿಸಿತು. ಬಲ್ಕ್ ಮೀಟರ್‌ ಅಳವಡಿಸಿ ನೀರು ಪೂರೈಕೆ ಮಾಡುವುದು, ಬೇಸಗೆಯಲ್ಲಿ ಲಭ್ಯತೆಯ ಆಧಾರದಲ್ಲಿ (ನಗರಸಭಾ ವ್ಯಾಪ್ತಿಗೆ ಕೊರತೆಯಾಗದಂತೆ) ನೀರೋದಗಿಸುವುದು, ಕಿಲೋ ಲೀಟರ್‌ ಲೆಕ್ಕದಲ್ಲಿ ಸರಕಾರ ನಿಗದಿ ಪಡಿಸಿದ ದರವನ್ನು ನೆಕ್ಕಿಲಾಡಿ ಗ್ರಾ.ಪಂ. ಪಾವತಿಸುವುದು, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾರ್ಯಕರ್ತಗೊಂಡ ನಂತರ ಜಲಸಿರಿ ಸಂಪರ್ಕ ಕಡಿತಗೊಳಿಸುವುದು, ಒಂದು ವರ್ಷಕ್ಕೊಮ್ಮೆ ಒಪ್ಪಂದ ಮಾಡಿ ಕೊಂಡು ವರ್ಷ ವರ್ಷ ನವೀಕರಣ ಮಾಡುವ ಷರತ್ತಿನೊಂದಿಗೆ ನೀರು ಪೂರೈಕೆಗೆ ಸಭೆ ನಿರ್ಣಯಿಸಲಾಯಿತು. 34ನೇ ನೆಕ್ಕಿಲಾಡಿ ನೀರು ಸರಬರಾಜು ಸ್ಥಾವರಕ್ಕೆ ನೀರು ಶುದ್ಧಿಕರಣ ಮಾಡಲು ಕ್ಲೋರಿನ್‌ ಗ್ಯಾಸ್‌ ಸಿಲಿಂಡರ್‌ ಪೂರೈಕೆಗೆ ಕರೆದಿರುವ ಟೆಂಡರ್‌ನಲ್ಲಿ ಕಡಿಮೆ ಬಿಡ್‌ನ‌ಲ್ಲಿ ಟೆಂಡರ್‌ ಕರೆದಿರುವ ಬಗ್ಗೆ ಅನುಮಾನವಾಗಿ ಚರ್ಚೆ ನಡೆಯಿತು. ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ಕೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಉಪಸ್ಥಿತರಿದ್ದರು.

ಮುಖ್ಯಾಂಶಗಳು
-ನೆಲ್ಲಿಕಟ್ಟೆ ಪಾರ್ಕ್‌ಗೆ ಕಾಯಕಲ್ಪ ಕಲ್ಪಿಸಿ : ರಮೇಶ್‌ ರೈ
-ನಗರೋತ್ಥಾನದಲ್ಲಿ ಬಿಡುಗಡೆಗೆ ಬಾಕಿ ಇರುವ 70 ಲಕ್ಷ ರೂ. ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು.
-ನನ್ನ ವಾರ್ಡ್‌ಗೆ ಸಂಬಂಧಿಸಿ ಯಾವುದೇ ಕೆಲಸ ಆಗುತ್ತಿಲ್ಲ : ಸದಸ್ಯೆ ಶೈಲಾ ಪೈ ಅಳಲು
-ಉಪ್ಪಿನಂಗಡಿ-ಪುತ್ತೂರು ರಸ್ತೆ ವಿಭಾ ಜಕಗಳಲ್ಲಿನ ಗಿಡಗಳಿಗೆ 2 ದಿನಕೊಮ್ಮೆ ನಗರಸಭೆಯ ವತಿಯಿಂದ ನೀರುಣಿಸಿ : ಶಾಸಕ ರೈ ಮನವಿ

ಒಳಚರಂಡಿ ಯೋಜನೆ ಶಾಸಕರಿಗೆ ಬೆಂಬಲ ಇದೆ
ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಜಾಲ ಮತ್ತು ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಾಣ ಕಾರ್ಯಕ್ಕೆ ಡ್ರೋನ್‌ ಸರ್ವೆ ಮುಖಾಂತರ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಸುಮಾರು 50 ಲಕ್ಷ ರೂ.ಮೊತ್ತ ತಗಲಬಹುದೆಂದೂ ಅಂದಾಜಿಸಿದ್ದು ಈ ಮೊತ್ತವನ್ನು ನಗರಸಭಾ ನಿಧಿಯಡಿ ಕಾದಿರಿಸುವಂತೆ ಶಾಸಕ ಅಶೋಕ್‌ ಕುಮಾರ್‌ ರೈ ಅವರು ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಚರ್ಚೆ ನಡೆಯಿತು. ಇಷ್ಟೊಂದು ಮೊತ್ತವನ್ನು ನಗರಸಭೆ ಭರಿಸುವುದು ಕಷ್ಟ ಎಂದು ಸದಸ್ಯರು ಅಭಿಪ್ರಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್‌ ಕುಮಾರ್‌ ರೈ, ಸುಮಾರು 600 ಕೋ.ರೂ. ವೆಚ್ಚದಲ್ಲಿ ಪುತ್ತೂರು ನಗರದಲ್ಲಿ ಯುಜಿಡಿ ಅನುಷ್ಠಾನಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಸರ್ವೆ ಕಾರ್ಯಕ್ಕೆ ನಗರಸಭೆ ಅನುದಾನ ಮೀಸಲಿಡಬೇಕು. ಒಂದು ವೇಳೆ ನಗರಸಭೆ ಸದಸ್ಯರಿಗೆ ಯುಜಿಡಿ ಬೇಡ ಎಂದಾದರೆ ಕೈ ಬಿಡೋಣ ಎಂದರು. ಇದಕ್ಕೆ ಉತ್ತರಿಸಿದ ಸದಸ್ಯ ಜೀವಂಧರ್‌ ಜೈನ್‌, ಶಾಸಕರು ಯುಜಿಡಿ ಅನುಷ್ಠಾನಿಸುವುದಾದರೆ ನಮ್ಮ ಸಂಪೂರ್ಣ ಬೆಂಬಲ ಇದೆ. ಸರ್ವೆ ಕಾರ್ಯಕ್ಕೆ 50 ಲಕ್ಷ ರೂ. ಅನ್ನು ನಗರಸಭೆ ಭರಿಸುವ ಸ್ಥಿತಿಯಲ್ಲಿ ಇಲ್ಲ. ಶಾಸಕರೇ ತನ್ನ ನಿಧಿಯಿಂದ ನೀಡಿದರೆ ಅನುಕೂಲ. ಅಲ್ಲದೆ ಪ್ರತೀ ವಾರ್ಡ್‌ಗೆ 10 ಲಕ್ಷ ರೂ. ನಂತೆ ಹೆಚ್ಚುವರಿ ಅನುದಾವನ್ನು ಶಾಸಕರು ಒದಗಿಸಬೇಕು ಎಂದರು. 5 ಲಕ್ಷ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು. 50 ಲಕ್ಷ ರೂ. ಅನುದಾನ ಯಾವ ಮೂಲದಿಂದ ಬಳಸುವುದು ಅನ್ನುವ ಬಗ್ಗೆ ಅಂತಿಮ ತೀರ್ಮಾನವಾಗದೆ ವಿಚಾರ ಅಲ್ಲಿಗೆ ಮುಕ್ತಾಯಗೊಂಡಿತು.

ಟಾಪ್ ನ್ಯೂಸ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

courts-s

Belthangady: ಬೈಕ್‌ ಸವಾರ ಸಾವು ಪ್ರಕರಣ; ಸರಕಾರಿ ಬಸ್‌ ಚಾಲಕನಿಗೆ ಶಿಕ್ಷೆ;ದಂಡ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.