Belman: ಹಿಂದೂಗಳ ಮನೆಯಲ್ಲಿ ಗೋದಲಿ ಸಂಭ್ರಮ!
6 ವರ್ಷಗಳಿಂದ ಕ್ರಿಬ್ ನಿರ್ಮಿಸುತ್ತಿರುವ ನಂದಳಿಕೆಯ ಸರಳಾ ಹೆಗ್ಡೆ
Team Udayavani, Dec 25, 2024, 1:03 PM IST
ಬೆಳ್ಮಣ್: ಸಾಮಾನ್ಯವಾಗಿ ಕ್ರಿಸ್ಮಸ್ ಹಬ್ಬದ ಸಂದರ್ಭ ಕ್ರೈಸ್ತರು ತಮ್ಮ ಮನೆಯಲ್ಲಿ ಕ್ರಿಸ್ಮಸ್ ಗೋದಲಿ ನಿರ್ಮಿಸುವುದು ಸಂಪ್ರದಾಯ ಹಾಗೂ ವಾಡಿಕೆ. ಆದರೆ, ನಂದಳಿಕೆ ಕಾನಬೆಟ್ಟುವಿನ ಸರಳಾ ಹೆಗ್ಡೆಯವರು ಕಳೆದ 6 ವರ್ಷಗಳಿಂದ ತಮ್ಮ ಮನೆಯ ಪಕ್ಕದಲ್ಲಿ ಸುಂದರ ಗೋದಲಿ ನಿರ್ಮಿಸಿ ಸಾಮರಸ್ಯ ಮೆರೆಯುತ್ತಿದ್ದಾರೆ.
ಭಗವಾನ್ ಯೇಸು ಕ್ರಿಸ್ತನ ಜನ್ಮ ವೃತ್ತಾಂತಗಳನ್ನು ಸಾರುವ ಗೊಂಬೆಗಳು, ಹಳ್ಳ, ನದಿ, ತೊರೆ, ಬಾವಿಗಳು, ಮೇಕೆಗಳು, ಕುರಿಗಳು, ಹೊಲ ಗದ್ದೆಗಳು, ದನ -ಕರುಗಳು, ಹಟ್ಟಿಯ ಚಿತ್ರಣವೂ ಸೇರಿ ಅದ್ಭುತವಾದ ಗೋದಲಿಯನ್ನು ರಚಿಸಿದ್ದಾರೆ. ಕ್ರೈಸ್ತರ ಮನೆಯ ಗೋದಲಿಗೆ ಸರಿಗಟ್ಟುವ ರೀತಿಯಲ್ಲಿ ಸಣ್ಣ ಸಣ್ಣ ಅಂಶಗಳನ್ನು ಇಲ್ಲಿ ನಿರೂಪಿಸಲಾಗಿದೆ. ದೀಪಾಲಂಕಾರದಿಂದ ರಾತ್ರಿಯ ಹೊತ್ತು ಇದು ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.
ಕುಟುಂಬದವರ ಸಹಕಾರ
ಸಮಾಜಮುಖೀ ಚಿಂತನೆಯ ಸರಳಾ ಹೆಗ್ಡೆಯವರ ಈ ಪರಿಕಲ್ಪನೆಗೆ ಪುತ್ರ ಸುಹಾಸ್ ಹೆಗ್ಡೆ, ಸೊಸೆ ಆಶಾ ಸುಹಾಸ್ ಹೆಗ್ಡೆ, ಮೊಮ್ಮಕ್ಕಳು, ಕುಟುಂಬಿಕರು ನಿರಂತರ ಸಹಕಾರ ನೀಡಿದ್ದಾರೆ. ಸರಳಾ ಸಾ ಮಿಲ್‌ನ ಸಿಬಂದಿ ಜಾಯ್ಸ ಎಂಬ ಕ್ರೈಸ್ತ ಮಹಿಳೆ ಸಲಹೆ ಸಹಕಾರ ನೀಡಿದ್ದಾರೆ. ಜಾತಿ, ಮತ, ಧರ್ಮಗಳ ನಡುವೆ ಗೋಡೆಗಳು ಏಳುತ್ತಿರುವ ಕಾಲಘಟ್ಟದಲ್ಲಿ ಸರಳಾ ಹೆಗ್ಡೆಯವರ ಕ್ರಿಸ್ಮಸ್ ಗೋದಲಿ ಹಿಂದೂ ಹಾಗೂ ಕ್ರೈಸ್ತರ ನಡುವೆ ಬಾಂಧವ್ಯದ ಸೇತುವೆ ಕಟ್ಟುತ್ತಿದೆ.
ಪ್ರೇರಣೆಯೇನು?
ನಂದಳಿಕೆ ಸರಳಾ ವುಡ್ ಇಂಡಸ್ಟ್ರೀಸ್‌ನ ಸರಳಾ ಹೆಗ್ಡೆಯವರು ತನ್ನ ಪ್ರವಾಸದ ಅವಧಿಯಲ್ಲಿ ಜಾರ್ಖಡ್, ನಾಗಾಲ್ಯಾಂಡ್ ಸಹಿತ ದೇಶದ ಇತರ ಭಾಗಗಳನ್ನು ಸಂದರ್ಶಿಸಿದರು. ಅಲ್ಲಿ ಕಂಡ ಗದ್ದೆ, ಪೈರು ಹಾಗೂ ಕ್ರೈಸ್ತರ ಜೀವನ ಶೈಲಿ, ಆರಾಧನಾ ಶೈಲಿಗಳನ್ನು ಗಮನಿಸಿ ಈ ಗೋದಲಿಯ ಪರಿಕಲ್ಪನೆಗೆ ಮುನ್ನುಡಿ ಬರೆದಿದ್ದರು.
-ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.