Kasaragod: ಅಂಗಡಿಗೆ ನುಗ್ಗಿದ ಕಾಡು ಹಂದಿ
Team Udayavani, Dec 25, 2024, 10:45 PM IST
ಕುಂಬಳೆ: ಕುಂಬಳೆ ಪೇಟೆಯಲ್ಲಿರುವ ಸ್ಮಾರ್ಟ್ ಪೋಯಿಂಟ್ ಹೈಪರ್ ಮಾರ್ಕೆಟ್ಗೆ ಡಿ.24 ರಂದು ರಾತ್ರಿ ಕಾಡು ಹಂದಿ ನುಗ್ಗಿ ಭೀತಿ ಸೃಷ್ಟಿಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಅಂಗಡಿಯಲ್ಲಿ ನೌಕರರು, ಗ್ರಾಹಕರ ಸಹಿತ ಹತ್ತು ಮಂದಿ ಇದ್ದರು.
ಸಾಮಗ್ರಿಗಳನ್ನು ಇರಿಸಿದ ಸ್ಥಳದಲ್ಲಿ ಹಂದಿ ಅಲೆದಾಡಿದ್ದು, ಕೆಲವು ಹೊತ್ತು ಆತಂಕಕ್ಕೆ ಕಾರಣವಾಯಿತು. ಅಂಗಡಿಯಲ್ಲಿದ್ದವರು ದೂರಕ್ಕೆ ಸರಿದಾಗ ಕಾಡು ಹಂದಿ ಹೊರಗೆ ಓಡಿ ಶಾಲಾ ಅಂಗಳದತ್ತ ತೆರಳಿತು. ಕಳೆದ ಕೆಲವು ತಿಂಗಳಿನಿಂದ ಕುಂಬಳೆ ಪೇಟೆಯಲ್ಲಿ ಕಾಡು ಹಂದಿ ಕಂಡು ಬರುತ್ತಿದೆ.
500 ರೂ. ಮುಖಬೆಲೆಯ 5 ಖೋಟಾನೋಟು ಪತ್ತೆ
ಕಾಸರಗೋಡು, ಡಿ. 25: ಬ್ಯಾಂಕ್ಗೆ ಪಾವತಿಸಲು ತಂದ ಹಣದಲ್ಲಿ 500 ರೂ. ಮುಖ ಬೆಲೆಯ ಐದು ಖೋಟಾನೋಟುಗಳು ಪತ್ತೆಯಾದ ಬಗ್ಗೆ ಕಾಸರಗೋಡು ಪೊಲೀಸರಿಗೆ ಬ್ಯಾಂಕ್ ಆಫ್ ಇಂಡಿಯಾದ ಕಾಸರಗೋಡು ಎಂ.ಜಿ. ರಸ್ತೆ ಶಾಖೆಯ ಮೆನೇಜರ್ ಲತಿಕಾ ಎ. ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ವ್ಯಾಪಾರ ಸಂಸ್ಥೆಯೊಂದರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಇ.ಕೆ. ಮುನಾವಿರ್ ಪಾವತಿಸಲು ತಂದ 3,54,200 ರೂ.ಗಳ ನೋಟಿನ ಕಂತೆಯಲ್ಲಿ 500 ರೂ. ಮುಖಬೆಲೆಯ ಐದು ಖೋಟಾನೋಟು ಪತ್ತೆಯಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.