ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
ಕಾಶ್ಮೀರದಲ್ಲಿ ಸೇನಾ ವಾಹನ ದುರಂತ... ಮಹಾಲಿಂಗಪುರದ ಯೋಧ ಹುತಾತ್ಮ
Team Udayavani, Dec 26, 2024, 11:28 AM IST
ಮಹಾಲಿಂಗಪುರ: ಮಂಗಳವಾರ ಸಂಜೆ ಕಾಶ್ಮೀರದ ಪೂಂಛ್‌ನಲ್ಲಿ ಕರ್ತವ್ಯಕ್ಕೆ ಹೋಗುವಾಗ ಸೇನಾ ವಾಹನ ಕಂದಕಕ್ಕೆ ಉರುಳಿ ಮೃತಪಟ್ಟ ಐವರು ಯೋಧರಲ್ಲಿ ಮಹಾಲಿಂಗಪುರ ಪಟ್ಟಣದ ಕೆಂಗೇರಿಮಡ್ಡಿಯ ಮಹೇಶ ನಾಗಪ್ಪ ಮರೆಗೊಂಡ(25) ಒಬ್ಬರು.
ಹುತಾತ್ಮ ಯೋಧ ಮಹೇಶನ ಕಥೆಯನ್ನು ಕೇಳಿದರೇ ಎಂಥವರದು ಕರಳು ಚುರುಕ್ ಎನ್ನುವಂತಿದೆ. ಕೇವಲ 25ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಯೋಧನ ಬಾಳಲ್ಲಿ ನಡೆದ ವಿಧಿಯಾಟಕ್ಕೆ ಪಟ್ಟಣದ ಜನತೆಯು ಮಮ್ಮಲ ಮರುಗತ್ತಿದ್ದರೇ, ಕುಟುಂಬಸ್ಥರು, ಸಂಬಂಧಿಕರು ಕಣ್ಣಿರ ಕಡಲಲ್ಲಿ ಮುಳುಗಿದ್ದಾರೆ.
ಚಿಕ್ಕಂದಿನಲ್ಲೆ ತಂದೆ ಕಳೆದುಕೊಂಡ ನತದೃಷ್ಟ :
ಹುತಾತ್ಮ ಯೋಧ ಚಿಕ್ಕಂದಿನಲ್ಲೇ 13 ವರ್ಷದವರಿಂದಾಗಲೇ ತಂದೆಯನ್ನು ಕಳೆದುಕೊಂಡ ನತದೃಷ್ಟ. ತಂದೆಯ ಸಾವಿನ ನಂತರ ತಾಯಿ ಶಾರದಾ ಅವರ ಕೂಲಿ ಕೆಲಸ ಮಾಡುತ್ತಾ ಮಗನನ್ನು ಪಿಯುಸಿವರೆಗೆ ಶಿಕ್ಷಣ ಕೊಡಿಸಿದ್ದಾರೆ. ಮಹೇಶನ ಶೈಕ್ಷಣಿಕ ಬದುಕಿಗೆ ತಾಯಿಯ ಸಹೋದರರಾದ ಮಾವಂದಿರು, ಅಜ್ಜಿ(ತಾಯಿಯ ತಾಯಿ)ಯು ಮಹೇಶನ ಶಿಕ್ಷಣ ಮತ್ತು ಜೀವನಕ್ಕೆ ಸಹಕಾರ ನೀಡಿದ್ದಾರೆ.
6 ವರ್ಷಗಳ ಹಿಂದೆ ದೇಶ ಸೇವೆಗೆ :
ಅತ್ಯಂತ ಸೌಮ್ಯಸ್ವಭಾವದ ಮಹೇಶ ತಾಯಿ ಮತ್ತು ಮಾವಂದಿರ ಆಶ್ರಯದಲ್ಲಿ ಬೆಳೆದ. ಚಿಕ್ಕಂದಿನಿಂದಲೇ ದೇಶಸೇವೆ ಮಾಡುವ ಸಂಕಲ್ಪದೊಂದಿಗೆ ಪ್ರಯತ್ನಿಸಿ ತನ್ನ 19ನೇ ವಯಸ್ಸಿನಲ್ಲಿಯೇ ಬೆಳಗಾವಿ 11ನೇ ಮರಾಠಾ ಲೈಟ್ ಇನ್‌ಪೆಂಟರಿ ರೆಜಿಮೆಂಟ್‌ನ ಸೈನಿಕನಾಗಿ ಆಯ್ಕೆಯಾಗಿ ಸೇವೆ ಕಳೆದ 6 ವರ್ಷಗಳಿಂದ ದೇಶಸೇವೆಯಲ್ಲಿದ್ದನು.
ಮದುವೆಯಾಗಿ ಕೇವಲ 3 ವರ್ಷ :
ಸೈನಿಕನಾಗಿ ಮೂರು ವರ್ಷಗಳ ಸೇವೆಯ ನಂತರ 18-01-2024 ರಂದು ಲಕ್ಷ್ಮೀ ಅವರೊಂದಿಗೆ ವಿವಾಹವಾಗಿದ್ದರು.ಇನ್ನು ಮಕ್ಕಳಿಲ್ಲ. ಗಂಡ-ಹೆಂಡತಿ ಸುಖವಾಗಿ ನೂರಾರು ವರ್ಷ ಬಾಳಿ ಬದುಕಬೇಕಾಗಿದ್ದ ಮಹೇಶ-ಲಕ್ಷ್ಮೀ ಜೋಡಿಯ ಮೇಲೆ ಅದ್ಯಾವ ಕೆಟ್ಟದೃಷ್ಟಿ ಬಿತ್ತೋ ಗೊತ್ತಿಲ್ಲ. ಮದುವೆಯಾಗಿ ಕೇವಲ ಮೂರು ವರ್ಷಗಳಲ್ಲಿಯೇ ಅಗಲಿದ ಪತಿಯನ್ನು ನೆನಸಿಕೊಂಡು ಗೋಳಾಡುತ್ತಿರುವ ಹೆಂಡತಿ ಸ್ಥಿತಿಯನ್ನು ಕಂಡು ಮಹಿಳೆಯರು ಕಣ್ಣಿರಿಡುತ್ತಿದ್ದಾರೆ. ದೇಶ ಸೇವೆಯ ಮಾಡುತ್ತಿರುವ ಹೆಮ್ಮೆಯ ಯೋಧನ ಕೈಹಿಡಿದ ಲಕ್ಷ್ಮೀ ಚಿಕ್ಕವಯಸ್ಸಿನಲ್ಲೇ ಯೋಧ ಗಂಡನನ್ನು ಕಳೆದುಕೊಂಡದ್ದು ಅತಿ ದು:ಖದ ಸಂಗತಿ.
ಪತ್ನಿ ಮರಳಿ ಮನೆಗೆ -ಪತಿ ಸಾವಿನ ಮನೆಗೆ:
ಸೈನಿಕನಾಗಿ ಪತ್ನಿಯೊಂದಿಗೆ ಹಿಮಾಚಲ ಪ್ರದೇಶದಲ್ಲಿ ವಾಸವಾಗಿದ್ದರು. ಮಹೇಶ ತಮ್ಮ ರೆಜಿಮೆಂಟ್‌ನ ತಂಡದೊಂದಿಗೆ ಕಾಶ್ಮೀರಕ್ಕೆ ಕರ್ತವ್ಯ ನಿಯೋಜನೆಯಾದ್ದರಿಂದ ಪತ್ನಿಯನ್ನು ಮರಳಿ ಮಹಾಲಿಂಗಪುರಕ್ಕೆ ಕಳಿಸಿ, ಮಹೇಶ ಕಾಶ್ಮೀರಕ್ಕೆ ತರಳಿದ್ದರು. ಪತ್ನಿ ಲಕ್ಷ್ಮೀಯು ಡಿ.24ರ ಮಂಗಳವಾರ ಮುಂಜಾನೆ ಮಹಾಲಿಂಗಪುರದ ಮನೆಗೆ ಮರಳಿ ಬಂದಿದ್ದಾರೆ. ಬುಧವಾರ ಮುಂಜಾನೆ ವೇಳೆಗೆ ಪತಿಯು ಹುತಾತ್ಮರಾದ ಸುದ್ದಿಯು ಬರಸಿಡಿಲು ಬಡಿದಂತಾಗಿದೆ. ಇತ್ತ ಪತ್ನಿ ಲಕ್ಷ್ಮೀ ಮನೆಗೆ ಬಂದರೇ, ಅತ್ತ ಯೋಧ ಮಹೇಶ ಸೇನಾ ವಾಹನ ಅಪಘಾತದಲ್ಲಿ ಮರಳಿ ಬಾರದ ಸಾವಿನ ಮನೆಗೆ ತೆರಳಿದ್ದಾರೆ. ಕೇವಲ 25 ವರ್ಷದ ಸೈನಿಕ ಮಹೇಶನ ಬಾಳಲ್ಲಿ ನಡೆದ ವಿಧಿಯಾಟಕ್ಕೆ ಪಟ್ಟಣದ ಜನತೆಯು ಮಮ್ಮಲ ಮರಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್ ಬಿಜೆಪಿ ವಕ್ಫ್ ಪ್ರವಾಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
Surathkal: ಬೇಕು ವ್ಯವಸ್ಥಿತ ಒಳಚರಂಡಿ; ಸೋರುತ್ತಿರುವ ವೆಟ್‌ವೆಲ್‌ಗಳಿಂದ ಮಾಲಿನ್ಯ
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.