Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

ಕುಟುಂಬಸ್ಥರಿಗೆ ಸಾಂತ್ವನ; ಸಿಗುವ ಸೌಲಭ್ಯ ಒದಗಿಸಲು ಪ್ರಯತ್ನ: ಸಚಿವ

Team Udayavani, Dec 26, 2024, 11:21 AM IST

4-soldier

ಮಹಾಲಿಂಗಪುರ: ಕಾಶ್ಮೀರದ ಪೂಂಛ್ ಬಳಿ ನಡೆದ ಸೇನಾ ವಾಹನ ದುರಂತದಲ್ಲಿ ಮೃತಪಟ್ಟ ಮಹಾಲಿಂಗಪುರ ಪಟ್ಟಣದ ಮಹೇಶ ನಾಗಪ್ಪ ಮರೆಗೊಂಡ ಮನೆಗೆ ಬುಧವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ‌

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೈನ್ಯಕ್ಕೆ ಸೇರಿ 6 ವರ್ಷಗಳಲ್ಲಿಯೇ ಸೇನಾ ವಾಹನ ದುರಂತದಲ್ಲಿ ಮೃತಪಟ್ಟಿದ್ದು ದುಃಖದ ಸಂಗತಿ. ಕೇವಲ 25 ವಯಸ್ಸಿನ ಯೋಧನನ್ನು ಕಳೆದುಕೊಂಡಿದ್ದು ವಿಷಾದನೀಯ. ಗುರುವಾರ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಸಲು ಅಧಿ ಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದ ಅವರು, ಸರ್ಕಾರದಿಂದ ಯೋಧನ ಕುಟುಂಬಕ್ಕೆ ಸಿಗಬಹುದಾದ ಎಲ್ಲ ಸೌಲಭ್ಯ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.

ಮನೆಯಲ್ಲಿ ಪದವಿ ಮುಗಿಸಿದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಿಸಬೇಕೆಂಬ ಬೇಡಿಕೆ ಕುಟುಂಬಸ್ಥರಿಂದ ಬಂದಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾನೂನಿನ ಅಡಿಯಲ್ಲಿ ಅವಕಾಶವಿದ್ದರೆ ನೋಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಗಲಕೋಟೆ ಪೊಲೀಸ್‌ ವರಿಷ್ಠಾಧಿ ಕಾರಿ ಅಮರನಾಥ ರೆಡ್ಡಿ, ರಬಕವಿ-ಬನಹಟ್ಟಿ ತಹಶೀಲ್ದಾರ್‌ ಗಿರೀಶ ಸ್ವಾದಿ, ಬನಹಟ್ಟಿ ಸಿಪಿಐ ಸಂಜೀವ ಬಳಗಾರ, ಠಾಣಾ ಧಿಕಾರಿ ಕಿರಣ ಸತ್ತಿಗೇರಿ, ಪುರಸಭೆ ಮುಖ್ಯಾ ಧಿಕಾರಿ ಈರಣ್ಣ ದಡ್ಡಿ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಸದಸ್ಯ ಶೇಖರ ಅಂಗಡಿ, ರನ್ನಬೆಳಗಲಿ ಪಪಂ ಸದಸ್ಯ ಪ್ರವೀಣ ಪಾಟೀಲ, ಕಾಂಗ್ರೆಸ್‌ ಮುಖಂಡರಾದ ಡಾ|ಎ.ಆರ್‌. ಬೆಳಗಲಿ, ಅಶೋಕ ಕಿವುಡಿ, ರಾಜುಗೌಡ, ಆನಂದ ಹಟ್ಟಿ, ನಜೀರ್‌ ಅತ್ತಾರ, ಸಯ್ಯದ ಯಾದವಾಡ ಸೇರಿದಂತೆ ಇತರರಿದ್ದರು.

ಶಾಸಕ ಸವದಿ ಸಂತಾಪ

ಮರೆಗೊಂಡ ಮನೆ. ಯೋಧ ಮಹೇಶ ನಾಗಪ್ಪ ಮರೆಗೊಂಡ ನಿಧನಕ್ಕೆ ತೇರದಾಳ ಶಾಸಕ ಸಿದ್ದು ಸವದಿ ಸಂತಾಪ ಸೂಚಿಸಿ ಮಾತನಾಡಿ, ಚಿಕ್ಕವಯಸ್ಸಿನಲ್ಲಿಯೇ ದೇಶ ಸೇವೆಗೆ ತೆರಳಿ, ವಾಹನ ಅಪಘಾತದಲ್ಲಿ ಅಕಾಲಿಕ ಮೃತಪಟ್ಟಿದ್ದು ದುಃಖದ ಸಂಗತಿ. ಮಹೇಶ ಮರೆಗೊಂಡ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಗಾಂಧಿ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ

ಡಿ.26ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12ರೊಳಗೆ ಮೃತ ಯೋಧನ ಪಾರ್ಥಿವ ಶರೀರ ಬೆಳಗಾವಿಯಿಂದ ಪಟ್ಟಣಕ್ಕೆ ಬರಬಹುದು ಎನ್ನಲಾಗಿದೆ. ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಯೋಧನ ಪಾರ್ಥಿವ ಶರೀರದ ಅಂತಿಮ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ನಂತರ ಸರ್ಕಾರಿ ಗೌರವ ಸಲ್ಲಿಸಿ, ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ ಕೆಂಗೇರಿಮಡ್ಡಿವರೆಗೆ ಮೆರವಣಿಗೆ ನಡೆಸಿ, ಕೆಂಗೇರಿಮಡ್ಡಿಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವದು ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್‌ ಗಿರೀಶ ಸ್ವಾದಿ ತಿಳಿಸಿದ್ದಾರೆ.

ಎಲ್ಲೆಡೆ ಶ್ರದ್ಧಾಂಜಲಿ

2011ರಲ್ಲಿ ರನ್ನಬೆಳಗಲಿ ಯೋಧ ಸಿದ್ದಪ್ಪ ಕುಂಬಾರ ಹುತ್ಮಾತರಾಗಿದ್ದರು. 2023 ಡಿಸೆಂಬರ್‌ನಲ್ಲಿ ಚಿಮ್ಮಡ ಗ್ರಾಮದ ಯೋಧ ಬಸವರಾಜ ನಾವ್ಹಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದೀಗ ಮಹೇಶ ಮರೆಗೊಂಡ ಮೃತಪಟ್ಟಿದ್ದಾರೆ. ಮೃತ ಯೋಧನಿಗೆ ಮಹಾಲಿಂಗಪುರ, ಸುತ್ತಲಿನ ಜನಪ್ರತಿನಿಧಿ ಗಳು, ವಿವಿಧ ಪಕ್ಷ, ಸಂಘ-ಸಂಸ್ಥೆ ಪದಾಧಿ ಕಾರಿಗಳು, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಮಹೇಶ ಭಾವಚಿತ್ರ ಹಾಗೂ ವಿಡಿಯೋ ಹಂಚಿಕೊಳ್ಳುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ವಿಪ ಸದಸ್ಯೆ ಉಮಾಶ್ರೀ ಕಂಬನಿ

ಮೃತ ಯೋಧ ಮಹೇಶ ಮರೆಗೊಂಡ ಮನೆಗೆ ಬುಧವಾರ ರಾತ್ರಿ 8 ಗಂಟೆಗೆ ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಯೋಧನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಸೈನಿಕನ ಬಾಳಲ್ಲಿ ಘೋರ ವಿಧಿಯಾಟ; ಕುಟುಂಬಕ್ಕೆ ಸಂಕಟ!

ಮಹಾಲಿಂಗಪುರ: ಕಾಶ್ಮೀರದ ಪೂಂಛ… ಪ್ರದೇಶದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಸೈನಿಕರಿದ್ದ ಸೇನಾ ವಾಹನ ಕಂದಕಕ್ಕೆ ಉರುಳಿ ಮಹಾಲಿಂಗಪುರ ಪಟ್ಟಣದ ಕೆಂಗೇರಿಮಡ್ಡಿಯ ಮಹೇಶ ನಾಗಪ್ಪ ಮರೆಗೊಂಡ (25) ಮೃತಪಟ್ಟಿದ್ದು ವಿಧಿಯ ಆಟಕ್ಕೆ ಬಾಳಿ ಬದುಕಿ ದೇಶಕ್ಕೆ ಸೇವೆ ಸಲ್ಲಿಸಬೇಕಿದ್ದ ಯೋಧ ಬಾರದ ಲೋಕ ಸೇರಿದ್ದಾನೆ.

ಕೇವಲ 25ನೇ ವಯಸ್ಸಿನಲ್ಲೇ ಬದುಕಿನ ಯಾತ್ರೆ ಮುಗಿಸಿದ ಯೋಧನ ಸಾವಿಗೆ ಪಟ್ಟಣದ ಜನ ಮಮ್ಮಲ ಮರುಗುತ್ತಿದ್ದರೆ, ಕುಟುಂಬಸ್ಥರು ಹಾಗೂ ಸಂಬಂಧಿಕರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

ಚಿಕ್ಕದಿಂನಲ್ಲೇ ತಂದೆ ಸಾವು: ಮೃತ ಯೋಧ ಮಹೇಶ 13 ವರ್ಷದವರಿದ್ದಾಗಲೇ ತಂದೆ ಕಳೆದುಕೊಂಡ ನತದೃಷ್ಟ. ತಂದೆ ಸಾವಿನ ನಂತರ ತಾಯಿ ಶಾರದಾ ಕೂಲಿ ಕೆಲಸ ಮಾಡಿ ಮಗನಿಗೆ ಪಿಯುಸಿವರೆಗೆ ಶಿಕ್ಷಣ ಕೊಡಿಸಿದ್ದಾರೆ. ಮಹೇಶನ ಶೈಕ್ಷಣಿಕ ಬದುಕಿಗೆ ತಾಯಿಯ ಸಹೋದರರಾದ ಮಾವಂದಿರು, ಅಜ್ಜಿ (ತಾಯಿಯ ತಾಯಿ) ಸಹಕಾರ ನೀಡಿದ್ದರು.

6 ವರ್ಷದ ಹಿಂದೆ ದೇಶ ಸೇವೆಗೆ: ತಾಯಿ ಮತ್ತು ಮಾವಂದಿರ ಆಶ್ರಯದಲ್ಲಿ ಬೆಳೆದ ಸೌಮ್ಯಸ್ವಭಾವದ ಮಹೇಶ ಚಿಕ್ಕಂದಿನಿಂದಲೇ ದೇಶಸೇವೆ ಮಾಡುವ ಸಂಕಲ್ಪದೊಂದಿಗೆ 19ನೇ ವಯಸ್ಸಿನಲ್ಲಿಯೇ ಬೆಳಗಾವಿ 11ನೇ ಮರಾಠಾ ಲೈಟ್‌ ಇನ್‌ಪೆಂಟರಿ ರೆಜಿಮೆಂಟ್‌ ನ ಸೈನಿಕನಾಗಿ ಆಯ್ಕೆಯಾಗಿ ಕಳೆದ 6 ವರ್ಷಗಳಿಂದ ದೇಶಸೇವೆ ಮಾಡುತ್ತಿದ್ದ.

3 ವರ್ಷದ ಹಿಂದೆ ವಿವಾಹ: ಸೈನಿಕನಾಗಿ ಮೂರು ವರ್ಷಗಳ ಸೇವೆ ಸಲ್ಲಿಸದ ನಂತರ 2022ರ ಜನೆವರಿ 18 ರಂದು ಲಕ್ಷ್ಮೀ ಅವರೊಂದಿಗೆ ವಿವಾಹವಾಗಿದ್ದರು. ನೂರಾರು ವರ್ಷ ಬಾಳಿ ಬದುಕುವ ಕನಸು ಕಂಡಿದ್ದರು. ಆದರೆ ಕ್ರೂರ ವಿಧಿ ಇವರ ಬದುಕಲ್ಲಿ ಆಟವಾಡಿತು. ಮದುವೆಯಾಗಿ ಕೇವಲ ಮೂರು ವರ್ಷಗಳಲ್ಲಿಯೇ ಪತಿ ಕಳೆದುಕೊಂಡ ಪತ್ನಿ ಗೋಳಾಡುವಂತಾಗಿದೆ.

ಸಾವಿನ ಮನೆ ಸೇರಿದ ಪತಿ

ಪತ್ನಿಯೊಂದಿಗೆ ಹಿಮಾಚಲ ಪ್ರದೇಶದಲ್ಲಿ ವಾಸವಾಗಿದ್ದ ಮಹೇಶ ತಮ್ಮ ರೆಜಿಮೆಂಟ್‌ಗೆ ಕಾಶ್ಮೀರಕ್ಕೆ ಕರ್ತವ್ಯ ನಿಯೋಜನೆ ಮಾಡಿದ ಹಿನ್ನೆಲೆಯಲ್ಲಿ ಪತ್ನಿ ಲಕ್ಷ್ಮೀಯನ್ನು ಮರಳಿ ಮಹಾಲಿಂಗಪುರಕ್ಕೆ ಕಳಿಸಿ, ಮಹೇಶ ಕಾಶ್ಮೀರಕ್ಕೆ ತರಳಿದ್ದರು. ಪತ್ನಿ ಲಕ್ಷ್ಮೀ ಡಿ.24ರಂದು ಬೆಳಗ್ಗೆ ಮಹಾಲಿಂಗಪುರದ ಮನೆಗೆ ಮರಳಿ ಬಂದಿದ್ದಾರೆ. ಬುಧವಾರ ಬೆಳಗ್ಗೆ ಪತಿ ಮೃತಪಟ್ಟ ಬರಸಿಡಿಲು ಬಡಿದಿದೆ. ಇತ್ತ ಪತ್ನಿ ಲಕ್ಷ್ಮೀ ಮನೆಗೆ ಬಂದರೆ, ಅತ್ತ ಯೋಧ ಮಹೇಶ ಸೇನಾ ವಾಹನ ಅಪಘಾತದಲ್ಲಿ ಮರಳಿ ಬಾರದ ಮನೆಗೆ ತೆರಳಿದ್ದಾರೆ.

-ಚಂದ್ರಶೇಖರ ಮೋರೆ

ಟಾಪ್ ನ್ಯೂಸ್

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

Yatnal-Team

Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್‌ ಬಿಜೆಪಿ ವಕ್ಫ್ ಪ್ರವಾಸ

Congress-Session

Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್‌ ಪಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.