Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Team Udayavani, Dec 26, 2024, 6:41 PM IST

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

ಮುಂಬಯಿ: ಒಂದಲ್ಲ ಒಂದು ಸಿನಿಮಾದಲ್ಲಿ ಬ್ಯುಸಿಯಾಗಿರುವ ಸೌತ್‌ ಬೆಡಗಿ ಶ್ರುತಿ ಹಾಸನ್‌ (Shruti Haasan) ಸಂದರ್ಶನವೊಂದರಲ್ಲಿ ಹಲವು ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾಗಳ ಬಗ್ಗೆ ವಿಚಾರ ಹೊರತುಪಡಿಸಿದರೆ ವೈಯಕ್ತಿಕ ಜೀವನದ ಬಗ್ಗೆಯೂ ಶ್ರುತಿ ಹಾಸನ್‌ ಅನೇಕ ಬಾರಿ ಸುದ್ದಿಯಾಗಿದ್ದಾರೆ.

ʼಪಿಂಕ್‌ ವಿಲ್ಲಾʼ ಜತೆಗಿನ ಸಂದರ್ಶನದಲ್ಲಿ ಅಪ್ಪ- ಅಮ್ಮನ ವಿಚ್ಚೇದನ, ಬಾಲ್ಯದ ಜೀವನ, ಮುಂದಿನ ಸಿನಿಮಾ, ಮದುವೆ ಹೀಗೆ ಹಲವು ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಈ ಹಿಂದೆ ನೀವು ಮದುವೆ ಆಗುವುದಿಲ್ಲ ಎಂದಿದ್ದೀರಿ. ಈಗಲೂ ನಿಮ್ಮ ಮಾತಿಗೆ ಬದ್ಧರಾಗಿರುತ್ತೀರಾ ಎನ್ನುವ ಪ್ರಶ್ನೆಯನ್ನು ಶ್ರುತಿ  ಅವರಿಗೆ ಕೇಳಲಾಗಿದೆ.

ಹೌದು. ನನಗೆ ಗೊತ್ತಿಲ್ಲ. ನನಗೆ ರಿಲೇಷನ್‌ ಶಿಪ್‌ ಗಳಂದ್ರೆ ಇಷ್ಟ. ರೊಮ್ಯಾನ್ಸ್‌ ಇಷ್ಟ. ನನಗೆ ಸಂಬಂಧದಲ್ಲಿರುವುದು  ಇಷ್ಟ. ಆದರೆ ಯಾರೊಂದಿಗೂ ಜೀವನ ಪೂರ್ತಿ ಇರುವುದಕ್ಕೆ ನನಗೆ ಸ್ವಲ್ಪ ಭಯ ಆಗುತ್ತದೆ. ಗೊತ್ತಿಲ್ಲ ಯಾರಾದ್ರೂ ಅಮೂಲ್ಯ ರತ್ನ ಬಂದ್ರೂ ಬರಬಹುದು. ಇದುವರೆಗೆ ಮದುವೆ ವಿಚಾರ ನನ್ನ ಮನಸ್ಸಿಗೆ ಬಂದಿಲ್ಲವೆಂದಿದ್ದಾರೆ.

ನನ್ನ ಫ್ರೆಂಡ್‌ ಸರ್ಕಲ್‌ನಲ್ಲಿ ನಾನು ತುಂಬಾ ಮದುವೆಗಳನ್ನು ನೋಡಿದ್ದೇನೆ. ತುಂಬಾ ಸುಂದರವಾದ ದಾಂಪತ್ಯ ಜೀವನವನ್ನು ನನ್ನದೇ ಫ್ರೆಂಡ್ಸ್‌ ಗ್ರೂಪ್‌ ನಲ್ಲಿ ನೋಡಿದ್ದೇನೆ. ಈ ಹಿಂದೆ ನನ್ನ ಜತೆ ಸಂಬಂಧದ ವಿಚಾರದಲ್ಲಾದ ಅನುಭವದಿಂದ ನಾನು ಮದುವೆಗೆ ಹಿಂಜರಿಯುತ್ತಿಲ್ಲ. ಇದು ನನ್ನದೇ ನಿರ್ಧಾರವೆಂದು ʼಸಲಾರ್‌ʼ ಬೆಡಗಿ ಹೇಳಿದ್ದಾರೆ.

ನಾನು ಸಿನಿಮಾಗಳಲ್ಲಿ ಅನೇಕ ಮದುವೆಗಳನ್ನು ಆಗಿದ್ದೇನೆ. ವಿಭಿನ್ನ ಸಂಪ್ರದಾಯದ ಮದುವೆಗಳನ್ನು ಆಗಿದ್ದೇನೆ. ನಾನು ಮದುವೆ ಪಾತ್ರದಲ್ಲಿ ತೆಲುಗು, ಪಂಜಾಬಿ, ಮುಸ್ಲಿಂ ವಧುವಾಗಿ ನಟಿಸಿದ್ದೇನೆ. ಮದುವೆಯೆಂಬ ಕಲ್ಪನೆ ನನಗೆ ಹೊಂದಿಕೆ ಆಗುವುದಿಲ್ಲ. ನಾನೀಗ ಮದುವೆಯಾದರೆ ಅದು ನನಗೆ ಶೂಟಿಂಗ್‌ ತರ ಅನ್ನಿಸುತ್ತದೆ ಎಂದು ಶ್ರುತಿ ಹೇಳಿದ್ದಾರೆ.

ಶ್ರುತಿ ಸಂತಾನು ಹಜಾರಿಕಾ ಎನ್ನುವವರ ಜತೆ ಈ ಹಿಂದೆ ಶ್ರುತಿ ಪ್ರೀತಿಯಲ್ಲಿದ್ದರು. ಇತ್ತೀಚೆಗೆ ಇಬ್ಬರು ದೂರವಾಗಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ಶ್ರುತಿ ಮುಂದೆ ರಜಿನಿಕಾಂತ್‌ ಅವರ ʼಕೂಲಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಪ್ರಭಾಸ್‌ ಅವರ ʼಸಲಾರ್‌ -2ʼ ಸಿನಿಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.