ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !
Team Udayavani, Dec 27, 2024, 6:55 AM IST
ಉಳ್ಳಾಲ: ವಿಜ್ಞಾನ ಆವಿಷ್ಕಾರದ ಮೂಲಕ ಅಂತರಾ ಷ್ಟೀಯ ಮಟ್ಟದಲ್ಲಿ ಹಲವು ಪ್ರಶಸ್ತಿ ಪಡೆದ ಸಿಂಧೂರ ರಾಜ ಉಳ್ಳಾಲ ಳಿಗೆ ಮಕ್ಕಳಿಗಾಗಿ ನೀಡುವ ದೇಶ ದ ಅತ್ಯುನ್ನತ ಪ್ರಶಸ್ತಿಯಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರ ಸ್ಕಾರ ಪ್ರಶಸ್ತಿಯನ್ನು ಗುರುವಾರ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಿಂಧೂರ ಸಂವಾದದಲ್ಲಿ ಭಾಗವಹಿಸಿದಳು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಆಶ್ರ ಯದಲ್ಲಿ ದೇಶದ 17ಮಂದಿ (10 ವಿದ್ಯಾರ್ಥಿ ಗಳು, 7 ವಿದ್ಯಾರ್ಥಿನಿಯರು)ಯ ಪೈಕಿ ಕರ್ನಾಟಕ ದಿಂದ ಗೌರವ ಪಡೆದ ಏಕೈಕ ವಿದ್ಯಾರ್ಥಿನಿ ಸಿಂಧೂರ ರಾಜ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಲ್ಲೂ ಸಂಶೋಧನೆಗೆ ತೊಡಗಿರುವ ಸಿಂಧೂರ ಕೋವಿಡ್ ಹಿನ್ನೆಲೆಯ ಕೊಡುಗೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಮೊದಲು ಕ್ರೀಡೆಯಲ್ಲಿ ಆಸಕ್ತಿ ತಾಳಿದ್ದವಳನ್ನು ವಿಜ್ಞಾನದತ್ತ ಸೆಳೆದದ್ದೇ ಕೋವಿಡ್ ಸಂದರ್ಭ.
ಸಿಂಧೂರ, ಪಾರ್ಕಿನ್‌ಸನ್ ಬಾಧಿ ತರಿಗೆ ಸಹಾಯಕವಾಗುವ ಚಮಚ ಸಂಶೋಧನೆ ಮತ್ತು ಅಟಲ್ ಟಿಂಕ ರಿಂಗ್ ಲ್ಯಾಬ್‌ನಲ್ಲಿ ಮಾಡಿರುವ ಸಾಧ ನೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ. ಈ ಕಾಯಿಲೆಗೆ ಸಂಬಂ ಧಿಸಿದಂತೆ ಫ್ರಿಸರಿಂಗ್ ಸಂದರ್ಭದಲ್ಲಿ ಅಲರ್ಟ್ ಮಾಡುವ ಶೂ, ಕೈಯಿಲ್ಲದ ವರಿಗೆ ಸಹಾಯವಾಗುವ ಪ್ರಾಸ್ಪೆ ಟಿಕ್ ಆರ್ಮ್ ಅನ್ನು ಸಿಂಧೂರ ಸಂಶೋ ಧಿಸಿದ್ದಾರೆ. ಹಾಗಾಗಿ ಈ ಸಿಂಧೂರ ಈಗ ವಿಜ್ಞಾನ ಸಿಂಧೂರ !
ಕೋವಿಡ್ ಕೊಡುಗೆ !
ಕಲಿಕೆಯಲ್ಲಿ ಚೆನ್ನಾಗಿದ್ದ ಸಿಂಧೂ ರಳಿಗೆ ಕೊರೊನಾಕ್ಕಿಂತ ಮೊದಲು ಕರಾಟೆ, ಡ್ರಾಯಿಂಗ್‌ನಲ್ಲಿ ಆಸಕ್ತಿ. ಕೋವಿಡ್ ಸಂದರ್ಭದಲ್ಲಿ 6ನೇ ತರ ಗತಿಯಲ್ಲಿದ್ದ ಆಕೆ, ಉಳ್ಳಾಲದಲ್ಲಿನ ತಮ್ಮ ತಾಯಿ ಮನೆಗೆ ಬಂದಿದ್ದಳು. ಈ ಮನೆಯಲ್ಲಿ ಸಿಕ್ಕ ವಾತಾವರಣ ಹಾಗೂ ಹೆತ್ತವರು ಕೊಟ್ಟ ಲ್ಯಾಪ್ ಟಾಪ್ ಹೊಸ ಬಾಗಿಲು ತೆರೆಯಿತು.
ಅಂತರಜಾಲ ಮೂಲಕವಿಜ್ಞಾನ ಸಂಗತಿಗಳನ್ನು ಓದ ತೊಡಗಿದಳು. ಬಳಿಕ ಆಸಕ್ತಿ ಹೆಚ್ಚಿ ಯೂಟ್ಯೂಬ್‌ಗಮನಿಸಿದಳು. ಆಗ ಕೊರೊನಾ ಸಂಬಂಧಿಸಿ ನ್ಯೂಮೋನಿಯಾ ವಿಷ ಯದಲ್ಲಿ ಸಂಶೋಧನೆ ಆರಂಭಿಸಿ ಬ್ರೈನ್‌ಏಜ್‌ಗೆ ಸಂಬಂಧಿಸಿದ ಸಂಶೋ ಧನೆಯಲ್ಲಿ ತೊಡಗಿದಳು. ಇವಳ ಆಸಕ್ತಿಯನ್ನು ಕಂಡು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಡಾ| ನಂದ ಕುಮಾರ್ ಮಾರ್ಗದರ್ಶನ ಮಾಡಿದರು. ಅಂದಿನ ಆರಂಭ ಇಂದಿನ ಸಾಧನೆವರೆಗೆ ಅವಳನ್ನು ತಂದು ನಿಲ್ಲಿಸಿದೆ.
ಉಳ್ಳಾಲದ ಭಾರತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಕಲಿತು, ಬೆಂಗಳೂರಿನ ನ್ಯೂ ಹೊರೈಜಾನ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪಡೆದು, ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಪಿಯು ಸಿ ಕಲಿಯುತ್ತಿದ್ದಾಳೆ ಸಿಂಧೂರ. ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿ ಯರ್ ರಾಜಾ ದಯಾಳ್ ಮತ್ತು ಶಿಬಾನಿ ಇವರ ಪುತ್ರಿ. ಇವರ ಅಜ್ಜ ಬಾಬು ಬಂಗೇರ ಸ್ಥಳೀಯ ಮೊಗ ವೀರ ಸಂಘದ ಅಧ್ಯಕ್ಷರಾಗಿದ್ದವರು. ಅಜ್ಜಿ ಶಶಿಕಲಾ ಸಾಮಾಜಿಕ ಕಾರ್ಯಕರ್ತೆ.
ಸಿಂಧೂರ ವೈಜ್ಞಾನಿಕ ಸಾಧನೆಗಾಗಿ 2024 ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಸಮಾವೇಶದಲ್ಲಿ ಅಮೆರಿ ಕದ ವರ್ಲ್ಡ್ ಸೈನ್ಸ್ ಸ್ಕಾಲರ್ ಪದವಿ ಪುರಸ್ಕೃತರಾಗಿದ್ದರು. ನಾನಾ ದೇಶಗಳ ನೊಬೆಲ್ ಪ್ರಶಸ್ತಿ ವಿಜೇತರು ಹಾಗೂ ಬ್ರೇಕ್‌ಥ್ರೂ ಪ್ರಶಸ್ತಿ ವಿಜೇತರಿಂದ ತರಬೇತಿ ಹಾಗೂ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುವ ಅವಕಾಶ ಪಡೆದಿದ್ದರು.
ಜಾನ್ಸ್ ಹಾಪ್ಕಿನ್ಸ್ ವಿವಿ ಮತ್ತು ವೊಲ್ಫಾಮ್ ರಿಸರ್ಚ್ ಸೆಂಟರ್ ಜತೆ ಫಂಗಸ್ (ಕ್ರಿಪ್ಟೋಕಾಕಸ್ ನಿಯೋ ಫಾರ್ಮಾನ್ಸ್ ಎಂಬ ಪ್ಯಾಥೊ ಜೆನಿಕ್ ಈಸ್ಟ್ ) ನಿಂದ ಪ್ರತೀ ವರ್ಷ 2 ಲಕ್ಷ ಮಂದಿ ಸಾಯುತ್ತಿದ್ದು, ಇದರ ಬಗ್ಗೆ ಆಂಟಿಫಂಗಲ್ ಚಿಕಿತ್ಸೆ ತಂತ್ರಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.
ಮೆದುಳಿನ ವಯಸ್ಸನ್ನು ಊಹಿ ಸುವ ಬ್ರೈನ್ ಏಜ್ ಪ್ರಿಡಿಕ್ಷನ್ ಮಾದರಿ ಯನ್ನು ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ಡೆಮೆಂಶಿಯಾದ ಹಾನಿಯ ಅಪಾಯವನ್ನು ಲೆಕ್ಕ ಹಾಕಬಹುದು. ಇದಕ್ಕೆ ಫ್ಯೂಚರ್ ಪೋರ್ಟ್ ಅವಾಡ್ಸ್ ಸಿಕ್ಕಿತ್ತು. ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಇಗೆಟೆಡ್ ಮೈಂಡ್ ಪ್ರಶಸ್ತಿ, ಎಟಿಎಲ್ ಮ್ಯಾರಥಾನ್‌ನಲ್ಲಿ ಪ್ರಶಸ್ತಿ ಪಡೆದಿದ್ದಾರೆ. ನಾಸಾ ಜತೆ ಸೇರಿ ಒಜಿ15-2023 ಎಂಬ ಹೆಸರಿನ ಅಸ್ಟೀರಾಯ್ಡನ್ನು ಪತ್ತೆ ಹಚ್ಚಿದ್ದು, ಸಿಎಸ್‌ಐಆರ್-ಫೋರ್ಥ್ ಪ್ಯಾರ ಡೈಮ್ ಇನ್ಸಿrಟ್ಯೂಟ್‌ನಲ್ಲಿ ಪಾರ್ಕಿ ನ್ಸನ್ ರೋಗದ ಅಧ್ಯಯನ ನಡೆಸುತ್ತಿದ್ದಾರೆ.
ಕೇಂದ್ರ ಸರಕಾರದ ಐಆರ್‌ಐಎಸ್ ರಾಷ್ಟ್ರೀಯ ಮೇಳದಲ್ಲಿ ಗ್ರ್ಯಾಂಡ್ ಪ್ರಶಸ್ತಿ ಗೆದ್ದು, 2025 ಮೇ ತಿಂಗಳಲ್ಲಿ ಅಮೆರಿಕಾದ ಕೊಲಂಬಸ್‌ನಲ್ಲಿ ನಡೆಯುವ ಒಲಿಂಪಿಕ್ಸ್ ಆಫ್ ಸೈನ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ 10 ಯುವ ಸಂಶೋಧಕರ ತಂಡದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾರೆ.
ಭಾರತವನ್ನು ಗೆಲ್ಲಿಸಲು ಪ್ರಯತ್ನಿಸುವೆ
ಭಾರತ ಮತ್ತು ಕರ್ನಾಟಕದ ಗ್ರಾಮೀಣ ಪ್ರದೇಶದ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳ ಸಂಶೋಧನೆಗೆ ಒತ್ತು ನೀಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಗೌರವ ತರುತ್ತೇನೆ. 2025ರ ಮೇ ನಲ್ಲಿ ಕೊಲಂಬಸ್‌ನಲ್ಲಿ ನಡೆಯುವ ರಿಜೆನೆರಾನ್ ವಿಜ್ಞಾನ ಮತ್ತು ಎಂಜಿನಿಯ ರಿಂಗ್ ಮೇಳ (ಒಲಿಂಪಿಕ್ಸ್ ಆಫ್ ಸೈನ್ಸ್ ಸ್ಪರ್ಧೆ)ದಲ್ಲಿ ಭಾರತವನ್ನು ಗೆಲ್ಲಿಸಲು ಪ್ರಯತ್ನಿಸುವೆ.
– ಸಿಂಧೂರ ರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ
Mulki: ಉಗುಳಿದರೆ ದಂಡ; ಹಾಕುವವರು ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.