Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Team Udayavani, Dec 27, 2024, 4:42 PM IST
ಹೈದರಾಬಾದ್: ನಟ ವಿಜಯ್ ದೇವರಕೊಂಡ (Vijay Deverakonda) ಅವರ ಬಹುನಿರೀಕ್ಷಿತ ʼವಿಡಿ12ʼ (VD12) ಸಿನಿಮಾ ಅನೌನ್ಸ್ ಮೆಂಟ್ ಆದ ದಿನದಿಂದ ಟಾಲಿವುಡ್ ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ.
ಸತತ ಸೋಲಿನಿಂದ ಅಭಿಮಾನಿಗಳಲ್ಲಿ ನಿರಾಶೆ ಹುಟ್ಟಿಸಿರುವ ʼಅರ್ಜುನ್ ರೆಡ್ಡಿʼಗೆ ಒಂದು ದೊಡ್ಡ ಗೆಲುವು ತಂದುಕೊಡುವ ನಿರೀಕ್ಷೆ ʼವಿಡಿ12ʼ ಸಿನಿಮಾದ ಮೇಲಿದೆ. ʼಜೆರ್ಸಿʼ ಸಿನಿಮಾಕ್ಕೆ ಆ್ಯಕ್ಷನ್ ಹೇಳಿದ್ದ ಗೌತಮ್ ತಿನ್ನೂರಿ (Gowtam Tinnanuri) ದೇವರಕೊಂಡ ಅವರ 12ನೇ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದರಿಂದ ಈ ಚಿತ್ರದ ಮೇಲೆ ಟಾಲಿವುಡ್‌ನಲ್ಲಿ ಒಂದು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
ಇದನ್ನೂ ಓದಿ: Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
ಈಗಾಗಲೇ ಪೋಸ್ಟರ್‌ನಿಂದ ಗಮನ ಸೆಳೆದಿರುವ ʼವಿಡಿ12ʼ ಬಗ್ಗೆ ನಿರ್ಮಾಪಕ ನಾಗ ವಂಶಿ (Producer Naga Vamsi) ಅವರು ಅಪ್ಡೇಟ್‌ವೊಂದನ್ನು ನೀಡಿದ್ದಾರೆ.
ʼಎಂ9 ನ್ಯೂಸ್ʼ ಜತೆ ಮಾತನಾಡಿರುವ ಅವರು, “ಪ್ರೂಡಕ್ಷನ್ ಕೆಲಸದ ಮಧ್ಯದಲ್ಲಿ ಚಿತ್ರವನ್ನು ಎರಡು ಭಾಗಗಳಾಗಿ ವಿಭಜಿಸಲು ನಾವು ಯೋಚಿಸಿರಲಿಲ್ಲ. ಸ್ಕ್ರಿಪ್ಟಿಂಗ್ ಹಂತದಲ್ಲಿಯೇ ಅದನ್ನು ಎರಡು ಭಾಗಗಳಾಗಿ ಅಭಿವೃದ್ಧಿಪಡಿಸಲಾಗಿದೆ. ಒಂದು ವೇಳೆ ನಾವು ಎರಡನೇ ಭಾಗವನ್ನು ಮಾಡದಿದ್ದರೂ ಅದರಿಂದ ಪ್ರೇಕ್ಷಕರಿಗೆ ಸಮಸ್ಯೆಯಾಗುವುದಿಲ್ಲ ಏಕೆಂದರೆ ಮೊದಲ ಭಾಗವು ಪೂರ್ಣ ಪ್ರಮಾಣದಲ್ಲಿರುತ್ತದೆ ಮತ್ತು ಅದಕ್ಕೊಂದು ಅಂತ್ಯವೂ ಇರುತ್ತದೆ” ಎಂದು ಹೇಳಿದ್ದಾರೆ.
“ಎರಡು ಭಾಗವನ್ನು ಮಾಡುತ್ತೇವೆ ಎಂದರೆ ಇದರಲ್ಲಿ ದುರ್ಬಲವಾದ ಚಿತ್ರಕಥೆ ಇರುತ್ತದೆ ಎಂದರ್ಥವಲ್ಲ. ಇದೊಂದು ಸಂಪೂರ್ಣವಾದ ಎರಡು ಭಾಗದ ಸಿನಿಮಾವಾಗಿರುತ್ತದೆ. ಎರಡಲ್ಲೂ ವಿಭಿನ್ನ ಕಥೆಗಳಿರುತ್ತದೆ” ಎಂದು ನಿರ್ಮಾಪಕರು ಹೇಳಿದ್ದಾರೆ.
ದೇವರಕೊಂಡ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದು, ಮೊದಲ ಭಾಗ 2025ರ ಮಾರ್ಚ್ 28 ರಂದು ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.