Karkala: ಗ್ರಾಹಕನ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಬಂದು ಒಡವೆ ಕದ್ದು ಪರಾರಿಯಾದ ಕಳ್ಳ
Team Udayavani, Dec 27, 2024, 8:51 PM IST
ಕಾರ್ಕಳ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ಗ್ರಾಹಕನ ಸೋಗಿನಲ್ಲಿ ನುಗ್ಗಿದ ಕಳ್ಳನೊರ್ವ ಲಕ್ಷಾಂತರ ಮೌಲ್ಯದ ಒಡವೆಗಳನ್ನು ಕದ್ದು ಪರಾರಿಯಾದ ಘಟನೆ ಕಾರ್ಕಳದ ರಥಬೀದಿಯಲ್ಲಿ ಶುಕ್ರವಾರ (ಡಿ.27ರಂದು) ನಡೆದಿದೆ.
ಇಲ್ಲಿನ ರಥಬೀದಿ ರಸ್ತೆಯಲ್ಲಿರುವ ಪ್ರಕಾಶ್ ವಸಂತ್ ಜಾದವ್ ಮಾಲಕತ್ವದ ಪ್ರಣವ್ ಜ್ಯುವೆಲರಿ ಶಾಪ್ ಇದ್ದು, ಘಟನೆ ಸಂದರ್ಭ ಪ್ರಕಾಶ್ ಅವರು ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅವರ ಪತ್ನಿ ಜ್ಯುವೆಲರಿ ಶಾಪ್ ನೋಡಿಕೊಳ್ಳುತ್ತಿದ್ದರು.
ಮಧ್ಯಾಹ್ನ 1.30ರ ಸುಮಾರಿಗೆ ಗ್ರಾಹಕನ ರೀತಿ ಶಾಪ್ ಒಳ ಪ್ರವೇಶಿಸಿದ ಯುವಕ ಚಿನ್ನಾಭರಣ ಖರೀದಿ ಬಗ್ಗೆ ಕನ್ನಡದಲ್ಲಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಮಾಲಕರು ಹೊರ ಹೋಗಿದ್ದು, ಅವರು ಆಗಮಿಸಿದ ಅನಂತರ ಚಿನ್ನಾಭರಣ ತೋರಿಸುವುದಾಗಿ ಹೇಳಿದ್ದಾರೆ. ಗ್ಯಾಲರಿಯಲ್ಲಿ ಒಂದು ಕಟ್ಟಿನಲ್ಲಿ ಇರಿಸಿದ 26 ಗ್ರಾಂ. ಮೌಲ್ಯದ ಚಿನ್ನದ ಉಂಗುರ, ಜುಮ್ಕಿ ಆಭರಣವನ್ನು ಎತ್ತಿಕೊಂಡಿದ್ದಾನೆ. ಇದನ್ನು ಮುಟ್ಟಬೇಡಿ ಎಂದು ವಾಪಸ್ ತೆಗೆದುಕೊಳ್ಳುವಷ್ಟರಲ್ಲಿ ಕಳ್ಳ ಕ್ಷಣಮಾತ್ರದಲ್ಲಿ ಈ ಬಂಗಾರಗಳನ್ನು ಕದ್ದು ಪರಾರಿಯಾಗಿದ್ದಾನೆ. ಸಿಸಿಟಿವಿಯಲ್ಲಿ ಕೃತ್ಯ ದಾಖಲಾಗಿದ್ದು, ಆರೋಪಿ ಸ್ಕೂಟರ್‌ನಲ್ಲಿ ಆಗಮಿಸಿ ಕೃತ್ಯ ಎಸಗಿದ್ದಾನೆ.
ಕಾರ್ಕಳ ನಗರ ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.